ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ಅವಾರ್ಡ್

ಅದೇನೋ ಗೊತ್ತಿಲ್ಲ ಈಗಿನ ಕಾಲದ ಹುಡುಗರಿಗೆ ಒಂದು ಕ್ರೇಜ್ ಹುಟ್ಕೊಂಡಿದೆ. ಅದೇ ಡೆಸ್ಕಿನ ಮೇಲೆ ಬರಿಯೋದು. ಹಿಂದಿನ ಕಾಲದಲ್ಲಿ ರಾಜ ಮಹರಾಜರು ತಮ್ಮ ಜೀವನ ಚರಿತ್ರೆಯನ್ನ ಶಾಸನದಲ್ಲಿ ಬರೆದು ಇಡ್ತಾ ಇದ್ರು. ಪಾಪ,! ಈಗಿನ ಕಾಲದ ಹುಡುಗರಿಗೆ ಶಾಸನ ಬರಿಯೋಕೆ ಕಲ್ಲು ಸಿಗ್ಲಿಲ್ಲ ಅಂತ ಕಾಣತ್ತೆ ಅದಕ್ಕೆ ಡೆಸ್ಕ್ ಮೇಲೆ ಬರಿತಾ ಇದ್ದಾರೆ. ಕಾಲೇಜಿನ ಗೋಡೆಗಳು, ಟಾಯ್ಲೆಟ್ಟುಗಳು ಇವರ ಪಾಲಿನ ಶಾಸನ ಬರೆಯೋ ಜಾಗಗಳಾಗಿವೆ.(ಪುಣ್ಯಕ್ಕೆ ಇವರೆಲ್ಲ ತಮ್ಮ ಮನೆಗಳಲ್ಲೂ ಇದೇ ಚಾಳಿ ರೂಢಿಸಿಕೊಂಡಿದ್ದಾರೇನೋ!)
ಯುವಜನತೆ ಈಗ ಎಲ್ಲದ್ರಲ್ಲೂ ಫಾಸ್ಟ್. ಇದ್ರಲ್ಲೂ ಕೂಡಾ ಫಾಸ್ಟ್ ಇದ್ದಾರೆ. ಹೊಗ್ಲಿ ಬಿಡಿ ಅವರಾದ್ರು ಏನು ಮಾಡ್ತಾರೆ ಕ್ಲಾಸ್ನಲ್ಲಿ ಮೇಷ್ಟ್ರು ಪಾಠ ಮಾಡೋದು ಕೇಳುವುದನ್ನು ಬಿಟ್ಟು ಡೆಸ್ಕ್ ಮೇಲೆ ತಮ್ಮ ಕೈಚಳಕ ತೊರಿಸ್ತಾ ಇದ್ದಾರೆ. ಈಗ ಅದೂ ಕೂಡಾ ಒಂದು ಹಾಬೀ ಆಗಿದೆಯಂತೆ. ಅದೂ ಅವರ ಅಕ್ಷರಗಳಂತೂ ಯಾವ ಕವಿಯನ್ನೂ ಸಹ ಮೀರಿಸೋ ಹಾಗೆ ಇರುತ್ತವೆ. ಬೇಕಾದ್ರೆ ನೀವು ಆಗಾಗ ಡೆಸ್ಕ್ ನೋಡ್ತಾ ಇರಿ. ನೋಡಿ ಇಲ್ಲಿ ಸ್ವಲ್ಪ ಎಕ್ಸಾಂಪಲ್ಸ್ ಇದೆ:* ಓ ನನ್ನ ಪ್ರಿಯಲತೆ,
ಇಲ್ಲಿದೆ ನಿನಗೊಂದು ಕವಿತೆ ನೀನು ಓದಿದರೆ ಸಾಕು ಈ ಕವಿತೆ,
ನಾ ಕಳೆದೆ ಒಂದು ಚಿಂತೆ. ನಿನ್ನವ ರವಿ.

ಅಯ್ಯೋ! ರವಿ ಯಾವ ಹುಡುಗಿ ಓದಬೇಕು ಅಂತ ಹೆಸರೇ ಹಾಕಿಲ್ವಲೊ. ಆಮೇಲೆ ಯಾರ್ಯಾರೋ ಓದಿದ್ರೆ ಕಷ್ಟ ಆಗಲ್ವಾ?!
ಹೀಗೆ ಹುಡುಗರು ಅವರವರ ಫೀಲಿಂಗ್ಸ್ ಅನ್ನ ಡೆಸ್ಕ್ ಮೇಲೆ ಬರೀತಾರೆ. ಮನಸಾರೆ ಫಿಲ್ಮಲ್ಲಿ ಹೇಳೊ ಹಾಗೆ, ಡೆಸ್ಕ್ ಮೇಲೆ ಐಲವ್ಯು ಪ್ರಿಯಾ ಮಾಲಿನಿ ಎಂಬ ಬರಹಗಳು. ಹುಡುಗರು ಡೆಸ್ಕ್ ಮೇಲೆ ಬರಿಯೋಕೆ ಸಾಧ್ಯನೇ ಹೊರತು, ಪರೀಕ್ಷೇನಲ್ಲಿ ಬರಿಯೋಕೆ ಆಗಲ್ಲ. ಹಾಗಂತ ಬರಿಯೋಲ್ಲ ಅಂತ ತಿಳ್ಕೋಬೇಡಿ. ಹಾಗೆ ಬರೆದಿರೋ ಉದಾಹರಣೆಯೂ ಉಂಟು.

ವಿದ್ಯಾರ್ಥಿ ಜೀವನ ಅನ್ನೋದು ಒಂದು ಸುವರ್ಣ ಯುಗ ಇದ್ದ ಹಾಗೆ. ಆಗ ನಾವು ಎಂಜಾಯ್ ಮಾಡಬೇಕು. ಬೇಡ ಅಂತ ಯಾರು ಹೇಳಿಲ್ಲ. ಎಲ್ಲವೂ ಕೂಡ ಲಿಮಿಟ್ ಅಲ್ಲಿ ಇದ್ರೆ ಒಳ್ಳೆದು ಅಂತ ನನ್ನ ಅಭಿಪ್ರಾಯ.
ಜೀವನ ಅನ್ನೋದು ಯಾವಗಲೂ ಹರಿಯೋ ನೀರು ಇದ್ದ ಹಾಗೆ. ಹೋಗ್ತಾನೇ ಇರತ್ತೆ. ಡೆಸ್ಕ್ , ಗೋಡೆಗಳ ಮೇಲೆಲ್ಲಾ ಬರೆದು ಟೈಮ್ ವೇಸ್ಟ್ ಮಾಡೋ ಬದಲು ಪಾಠ ಕೇಳಿ ಉದ್ದಾರ ಆದ್ರೆ ದೊಡ್ಡ ಪುಸ್ತಕವನ್ನೇ ಬರಿಯಬಹುದು.
ಎಲ್ಲದಕ್ಕೂ ಒಂದು ಕಾನೂನು ಅಂತ ಇದೆ. ಅಂತೆಯೇ ಕೆಲವು ಕಾಲೇಜುಗಳು ಡೆಸ್ಕ್ ಮೇಲೆ ಬರಿಯೋರಿಗೆ ದಂಡ ಹಾಕ್ತಾವೆ. ಆ ಕ್ಲಾಸ್ನಲ್ಲಿ ಯಾರೇ ಬರುದ್ರು ಕೂಡಾ ಇಡೀ ಕ್ಲಾಸಿಗೇ ದಂಡ ಹಾಕುತ್ತಾರೆ.

-ದರ್ಶನ್ ಎಂ. ಕಮ್ಮಾರಗಟ್ಟೆ
ಪ್ರಥಮ ಪತ್ರಿಕೋದ್ಯಮ
ಆಳ್ವಾಸ್ ಕಾಲೇಜ್
ಮೂಡುಬಿದಿರೆ.

4 comments:

Anonymous said...

Nice one Good....

Anonymous said...

Excellent

Anonymous said...

my dear fren nice thought n observation by you.
here what i want to make mark is writing on desks is also an art n way of expressing their idea's frustration. during the time of gurukula the same virtue has been continued, therefore you nor myself can change in this. good at least you noticed it. good.


Chinkra

Anonymous said...

ದರ್ಶನ್ರವರೇ ನಿಮ್ಮ ಕಾಲೇಜು ಕಾಳಜಿಗೆ ಚಿರಋಣಿ..ನೀವು ಒಬ್ಬ ಕಾಲೇಜು ವಿದ್ಯಾಥರ್ಿಯಾಗಿದ್ದು ನಿಮ್ಮ ಲೇಖನದ ಶೀಷರ್ಿಕೆಯಲ್ಲಿ ಕಾಲೇಜು ಹುಡುಗಾರೇ ನೀವ್ಯಾಕೆಹೀಗೆ? ಅಂತ ಸಂಭೋದಿಸಿದ್ದು ಅಷ್ಟು ಸಮಂಜಸವಾಗಿಲ್ಲ

Post a Comment