ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ಅವಾರ್ಡ್
ಮತ್ತದೇ ಬೇಸರ... ಅದೇ ಸಂಜೆ...ಅದೇ ಏಕಾಂತ... ಏಕಾಂತವನ್ನು ಅತಿಯಾಗಿ ಹಚ್ಚಿಕೊಂದು ಬೆಳೆದವಳು ನಾನು.. ಕೆಲವೊಮ್ಮೆ ಏಕಾಂತ ನನ್ನ ಪಾಲಿಗೆ ಅದ್ಭುತ ಕ್ಷಣಗಳನ್ನು ಮೊಗೆದು ಮೊಗೆದು ಕೊಟ್ಟರೆ ಇನ್ನು ಕೆಲವೊಮ್ಮೆ ಹೊಲಸು ಬೇಸರಕ್ಕೆ ದೂಡಿದೆ...ಕನಸುಗಳನ್ನೆ ಬದುಕಾಗಿಸಿಕೊಂಡು ಬೆಳೆದ ಹುಡುಗಿ ನಾನು.. ಇತ್ತೀಚಿಗೆ ಅನ್ನಿಸಲಾರಂಭಿಸಿದೆ ಎಷ್ಟು ದಿನ ಈ ಕನಸುಗಳನಲ್ಲೇ ಖುಶಿಕಾಣುವುದು..ಕೆಲವು ಕನಸಾದರೂ ಬೇಗ ನನಸಾಗಲೆಂದು...
ಮನಸ್ಸು ಸುಮ್ಮನೇ ಕುಣಿಯುತ್ತಿರುತ್ತದೆ...ಕೆಲವು ಸಲ ಕಾರಣವೇ ಇರದೇ ಮುನಿಸಿಕೊಳ್ಳುತ್ತದೆ...ಮುನಿಸಿಗೆ ಕಾರಣವೇ ಗೊತ್ತಾಗದೇ ಮತ್ತೆ ಮನ ಕುಣಿಯಲಾರಂಭಿಸುತ್ತದೆ... ಸುಮ್ಮನೆ ಕುಳಿತರೆ ಸಾಕು ಮನದಂಗಳದಲ್ಲಿ ಕನಸ ಮಲ್ಲಿಗೆ ಹೂವುಗಳು ಅರಳಿ ಅದರ ಸುವಾಸನೆಯ ಮತ್ತಿಗೆ ನನ್ನ ಶರಣಾಗಿಸಿರುತ್ತಿದೆ... ನನಗೇ ಗೊತ್ತಾಗದೇ ನನ್ನಲ್ಲಿ ಕೆಲವು ಬದಲಾವಣೆಗಳು ಹುಟ್ಟಿ ಬೆಳೆಯಲಾರಂಭಿಸಿರುತ್ತಿದೆ....ನನ್ನ ನಾ ತುಂಬಾ ಪ್ರೀತಿಸುವ, ಇಷ್ಟಪಡುವ ನನ್ನತನ ನಿಧಾನವಾಗಿ ನಿನ್ನ ಕುರಿತು ಯೋಚಿಸಲಾರಂಭಿಸುತ್ತಿದೆ... ನಿನ್ನ ಅಂತರಂಗದ ಹಂಬಲಕ್ಕೆ ತುಡಿತಕ್ಕೆ ಬಡಿತಕ್ಕೆ ಸರಿಯಾಗಿ ಹೆಜ್ಜೆ ಹಾಕಲು ಅದರೆಡೆಗೆ ವಾಲಲು ತುದಿಗಾಲಲ್ಲಿ ನಿಂತಿರುತ್ತದೆ.. ನನ್ನ ಮೇಲೇ ನನಗೆ ನಗುವಂತಾಗುತ್ತದೆ... ಹುಡುಗಿ ಹೇಗಿದ್ದೋಳು ಹೇಗಾಗಿ ಹೋದ್ಯೇ?? ಎದೆಯಾಳದಿಂದ ಯಾರೋ ಚೀರಿ ಕೇಳಿದಂತಾಗುತ್ತದೆ..

ನನ್ನಲ್ಲಿ ನಾನಿಲ್ಲ.. ಈ ಮಾತು ಮೊದಲ್ಯಾರಾದದೂ ಅಂದಿದ್ದರೆ ಅವರೊಳಗೆ ಅವರವರೇ ಇರೋದು ಇನ್ಯಾರೂ ಇರಕ್ಕಾಗಲ್ಲಾ ಅಂತ ನಗುತ್ತಿದ್ದ ನನಗೆ ಈಗ ಎನೇನೋ ಅರ್ಥಗಳು ಆ ಮಾತಲ್ಲಿ ಹೊಳೆಯಲಾರಂಭಿಸಿದೆ.. ಆಗ ಅತಿರೇಕ ಪರಿಹಾಸ್ಯಕ್ಕೆ ಕಾರಣವಾದ ವಿಷಯಗಳೆಲ್ಲ ಈಗ ತುಸುವೇ ಪ್ರಿಯವಾಗತೊಡಗಿದೆ... ನನ್ನ ನಾ ಎಷ್ಟೆ ಬಂಧಿಸಿಟ್ಟರೂ ಆ ಬಂಧನದಲ್ಲೇ ಖುಶಿಯ ಕನಸನ್ನೊಂದ ಹುಟ್ಟು ಹಾಕಿ ಸಂಭ್ರಮಿಸುವುದನ್ನೆಲ್ಲ ಮನ ನಿಧಾನವಾಗಿ ಕಲಿಯುತ್ತಿದೆ..

ಪ್ರೀತಿ ಅದೂ ನಿಜವಾದ ಪ್ರೀತಿ ಅದು ಈ ಜಗದಲ್ಲಿ ಈಗ ಪ್ರಚಲಿತದಲ್ಲಿಲ್ಲ ಎಂದು ವಾದಿಸುತ್ತಿದ್ದ ನಾನು, ನನ್ನದೂ ನಿಜವಾದ ಪ್ರೀತಿಯಲ್ಲ... ನಿಜವಾದ ಪ್ರೀತಿ ಯೋಗ್ಯತೆಯನ್ನ ನೋಡಿ ಹುಟ್ಟುವುದಲ್ಲ ಇದು ಕೇವಲ ಇಷ್ಟವಷ್ಟೇ, ಹೊಂದಾಣಿಕೆಯ ಸಹಭಾಗಿತ್ವವಷ್ಟೇ, ಎಂಬ ಹಳಸಲು ವೇದಾಂತವನ್ನಾಡುತ್ತಲೇ ನಿನ್ನ ಜೊತೆ ಮಾತ್ರ ಅತಿ ಖುಶಿಯಿಂದ ಬದುಕಬಲ್ಲೆ ಎಂಬ ಸ್ಥಿತಿಯ ಹೆಬ್ಬಾಗಿಲಿಗೆ ಕಾಲಿಡುತ್ತಿದ್ದೇನೆ.. ಏ ಮಾತಿರದೇ, ನೋಟವಿರದೇ, ಭೇಟಿಯಿರದೇ ಅಪ್ಯಾಯ, ಅವಾಚ್ಯ, ಭಾವವೊಂದು ನನ್ನೊಳಗೆ ಹುಟ್ಟಿ ಹೆಮ್ಮರವಾಗುವುದರತ್ತ ನೋಡುತ್ತ ಆಶ್ಚರ್ಯ ಪಡುತ್ತೇನೆ.. ಆ ಬದಲಾವಣೆಯ ಹೆಜ್ಜೆಗಳನ್ನ ಅತೀ ಸಂಭ್ರಮದಿಂದ ನನ್ನೊಳಗೆ ಬಿಟ್ಟುಕೊಳ್ಳುತ್ತ, ಗರ್ವದಿಂದ ಜತನದಿಂದ ಅನುಪಮ ಕುತೂಹಲದೊಂದಿಗೆ ಅನುಭವಿಸುತ್ತಿದ್ದೇನೆ.. ಮತ್ತೆ ಮುಂದಿನ ಹೆಜ್ಜೆಗಾಗಿ ಕಣ್ಣರಳಿಸಿ ಕಾಯುತ್ತ ಹಂಬಲಿಸುತ್ತ...

ನನ್ನ ನಾನು ಕಳೆದುಕೊಂಡಂತೆ ಅನ್ನಿಸುತ್ತದೆ.. ಕಳೆದುಕೊಳ್ಳುವಿಕೆಯಲ್ಲಿರುವ ಹರುಷ ಕೋಟಿಗೂ ಸಮವಲ್ಲ ಎಂದು ಸುಮ್ಮನಾಗುತ್ತೇನೆ ... ಎಲ್ಲ ಖುಶಿಗಳನ್ನು ವಾಸ್ತವಿಕತೆಯ ನೆಲೆಯಲ್ಲಿ ಗುಣಿಸಿ ಉತ್ತರ ಪಡೆಯುವುದು ತಪ್ಪು ಎಂದೆನ್ನಿಸಲು ಆರಂಭವಾಗಿ ಬಿಟ್ಟಿದೆ..

ಆಶ್ಚರ್ಯವಾಗುತ್ತದೆ... ಇದು ನಾನಾ??? ಆಶ್ಚರ್ಯಕ್ಕೂ ಮೀರಿದ ಸಂಭ್ರಮ..

ಮೊದಲ ನಡಿಗೆ ಕಲಿತ ಮಗು ಹಸಿ ಮಣ್ಣಲ್ಲಿ ಊರಿದ ಹೆಜ್ಜೆ ಗುರುತಂತೆ... ಮೊದಲ ಪ್ರೇಮದ ನಡಿಗೆಯ ಗುರುತು ಅಚ್ಚಾಗಲಾರಂಭಿಸಿದೆ ಎದೆಯಂಗಳದಲ್ಲಿ ನಿಧಾನವಾಗಿ

- ಚೈತ್ರಾ ಹೆಗಡೆ ಸಾಗರ.

8 comments:

Abhirama Hegde said...

ಶೇಕ್ಸ್ ಪಿಯರ್ ನ ಪ್ರೀತಿ ಎಲ್ಲೂ ಇರುವುದಿಲ್ಲ..
ಅದು ಕೇವಲ ಕಥೆ-ನಾಟಕ-ಕಾದಂಬರಿಗಳಿಗೆ ಮಾತ್ರ ಸೀಮಿತ..
ಆದರೆ ಮನಸ್ಸಿಗೆ ಹತ್ತಿರವಾಗುವುದು ಈ ಕಥೆ-ಕಾದಂಬರಿ-ನಾಟಕಗಳ ವಸ್ತು ಚಿತ್ರಗಳು..!
ಭಾವಪೂರಿತ ಲೇಖನ ಚೈತ್ರ.. ಹ್ಯಾಟ್ಸ್ ಆಫ್!!

maunayaani said...

ನಿಜವಾಗಿಯೂ ಸುಂದರ ಲೇಖನ... ಓದಿ ಸಂಭ್ರಮಿಸುತ್ತಿದ್ದೇನೆ....

Anonymous said...

nice one.....

vinayak said...

thats love

BIDIRE said...

ಚೆನ್ನಾಗಿದೆ...

manjunath said...

touching words!!!!!obviously it comes only from touched heart,,, hats up

SHAN said...

hats off chitra tottilannu tooguva kaigalu deshavannu aaluttade endu ello odida nenapu aadare eega tottilannu tooguva kaigalu websitenalli minchabahudu endu torisiddiri

BIDIRE said...

ಸೊಗಸಾದ ನಿರೂಪನೆ.........ಸರಾಗವಾಗಿ ಓದಿಸಿಕೊ೦ಡು ಹೋಗುವ ಸಾಮ೯ಥ್ಯ ನಿಮ್ಮ ಲೇಖನಕ್ಕಿದೆ..............KEEP IT UP.........ALL THE BEST

Post a Comment