ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
9:35 PM

ವೃಕ್ಷಾಸನ

Posted by ekanasu

ವೈವಿಧ್ಯ

ಈ ಕನಸು.ಕಾಂ ಮೂರನೇ ವರುಷಕ್ಕೆ ಕಾಲಿಡುತ್ತಿದ್ದಂತೆಯೇ ಪ್ರಾರಂಭಗೊಂಡ ಯೋಗಾಸನ ಮಾಹಿತಿ ಅಂಕಣಕ್ಕೆ ದಿನ ದಿನವೂ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರು ನೀಡುತ್ತಿರುವ ಅಂಕಣ ಪ್ರತೀ ವಾರವೂ ಓದುಗರನ್ನು ತಟ್ಟಿದೆ, ಮುಟ್ಟಿದೆ ಎಂಬುದಕ್ಕೆ ಓದುಗರಿಂದ ಬರುವ ಪ್ರತಿಕ್ರಿಯೆಗಳು, ಆ ಲೇಖನವಿರುವ "ಪೇಜ್ ಲೋಡ್" ಕೌಂಟುಗಳು ನಮಗೆ ಸಾಕ್ಷಿಯಾಗಿವೆ. ಜೊತೆ ಜೊತೆಗೆ ನೀಡುವ ವಿಶೇಷ ಲೇಖನಗಳು ಜನತೆಯ ಆಸಕ್ತಿ ಕೆರಳಿಸಿವೆ. ಮುಂದೆಯೂ ಅನೇಕ ಲೇಖನಗಳು ಈ ಕನಸು ಮೂಲಕ ಓದುಗರಿಗೆ ತಲುಪಲಿದೆ. ನಿಮ್ಮ ಪ್ರೋತ್ಸಾಹ ಸಹಕಾರ ಹೀಗೇ ಮುಂದುವರಿಯಲಿ.
ಶುಭವಾಗಲಿ.
-ಸಂವೃಕ್ಷ ಎಂದರೆ ಮರ - ಮರದಂರೆ ನಿಲ್ಲುವುದು. ತಾಡಾಸನದಲ್ಲಿ (ಸ್ಥಿತಿ) ನಿಲ್ಲಬೇಕು. ಬರಗಾಲ ಮಂಡಿಯನ್ನು ಬಗ್ಗಿಸಿ ಎಡತೊಡೆಯ ಮೂಕಲ್ಲೆ ಸೇರಿಸಬೇಕು. ಅನಂತರ ಎರಡು ಕೈಗಳನ್ನು ನೇರವಾಗಿ ತಲೆ ಮೇಲೆ ಎತ್ತಿ ಹಿಡಿದು ಅಂಗೈಗಳನ್ನು ಜೋಡಿಸಬೇಕು. ಅನಂತರ ಉಸಿರನ್ನು ಒಳಕ್ಕೆಳೆದು ಸ್ವಲ್ಪ ಹೊತ್ತು ನಿಲ್ಲಬೇಕು.

ಒಂದೇ ಕಾಲಿನ ಮೇಲೆ ಶರೀರದ ಭಾರವನ್ನು ಹಾಕಿ, ಸಮತೋಲನ ತಪ್ಪದಂತೆ ಜಾಗ್ರತೆ ವಹಿಸಿ ಸಮತೋಲನ ಸುಧಾರಿಸಲು ನಿಂತ ಕಾಲಿನ ಹೆಬ್ಬೆರಳಿನ ಹಿಂಭಾಗವನ್ನು ನೆಲಕ್ಕೆ ಒತ್ತಬೇಕು ಆರಂಭದಲ್ಲಿ ಈ ಆಸನ ತುಸು ಕಷ್ಟವಾಗಬಹುದು ಆನಂತರ ಸರಳ, ಸುಲಭವಾಗುತ್ತದೆ. ಹಾಗೆಯೇ ಇನ್ನೊಂದು ಬದಿಯಿಂದ ಎಡಗಾಲಿನ ಮಂಡಿ ಬಗ್ಗಿಸಿ ಮೇಲೆ ತಿಳಿಸಿದಂತೆ ಮಾಡಬೇಕು.
ಉಪಯೋಗಗಳು: ಈ ಆಸನದಿಂದ ಕಾಲಿನ ಮಾಂಸ ಖಂಡಗಳು ಪಳಗುತ್ತವೆ. ನೆಲಸಲು ಅಭ್ಯಾಸವಾಗುತ್ತದೆ. ಏಕಾಗ್ರತೆ ಸಾಧಿಸಲು ಸುಲಭವಾಗುತ್ತದೆ. ವಿದ್ಯಾರ್ಥಿಗಳಿಗೆ ಈ ಆಸನ ಬಹಳ ಪ್ರಯೋಜನಕಾರಿಯಾಗಿದೆ.

-'ಯೋಗರತ್ನ' ಶ್ರೀ ಗೋಪಾಲಕೃಷ್ಣ ದೇಲಂಪಾಡಿ
ಅಂತರರಾಷ್ಟ್ರೀಯ ತೀರ್ಪುಗಾರರು.

ಅಂತಾರಾಷ್ಟ್ರೀಯ ಯೋಗ ತೀರ್ಪುಗಾರರಾದ ಗೋಪಾಲಕೃಷ್ಣ ದೇಲಂಪಾಡಿ ಈಗಾಗಲೇ ಮಂಗಳೂರು ಕೇಂದ್ರವಾಗಿರಿಸಿಕೊಂಡು ಅನೇಕ ಮಂದಿಗೆ ಉಚಿತವಾಗಿ ಯೋಗಾಭ್ಯಾಸ ನಡೆಸುತ್ತಿದ್ದಾರೆ. ಇವರ ಶಿಷ್ಯವೃಂದ ಇಂದು ಅನೇಕ ಕಡೆಗಳಲ್ಲಿ ನಲೆಸಿದ್ದಾರೆ. ಮಕ್ಕಳಿಂದ ಹಿಡಿದು ಹಿರಿಯರ ತನಕ ಅನೇಕ ಮಂದಿ ಶಿಷ್ಯವರ್ಗವನ್ನು ಇವರು ಹೊಂದಿದ್ದಾರೆ. ಈ ಹಿಂದೆ ಯೋಗಾಭ್ಯಾಸ ಪೂರೈಸಿದ ತಮ್ಮ ಶಿಷ್ಯವೃಂದಕ್ಕೆ 'ಯೋಗರತ್ನ' ಶ್ರೀ ಗೋಪಾಲಕೃಷ್ಣ ದೇಲಂಪಾಡಿ ಅವರು ಉಚಿತ ಪುನಶ್ಚೇತನಾ ಯೋಗ ತರಬೇತಿ ನೀಡಿದರು. ಯೋಗಾಭ್ಯಾಸಿಗಳು ಉತ್ಸುಕತೆಯಿಂದ ಶಿಬಿರದಲ್ಲಿ ಪಾಲ್ಗೊಂಡಿದ್ದರು.ಇದೊಂದು ವೈಶಿಷ್ಠ್ಯಪೂರ್ಣ ಕಾರ್ಯಕ್ರಮವಾಗಿ ಮೂಡಿಬಂತು.

0 comments:

Post a Comment