ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
9:15 PM

ಮೊರೆ

Posted by ekanasu

ಸಾಹಿತ್ಯ

ದೇವ ನಿನ್ನ ಬೇಡಿಕೊಂಬೆ
ನಮ್ಮ ಭುವಿಗೆ ತರುವ ಮುನ್ನ
ಮತ್ತೆ ಮತ್ತೆ ಯೋಚಿಸು
ಆ ಮೃತ್ಯು ತೊಟ್ಟಿಲೊಳು ತೇಲಿಸು!ಮರ್ತ್ಯ ಬಲೆಯೊಳು
ಸಿಲುಕಿಸುವ ಮುನ್ನ ದೇವ
ಮತ್ತೆ ಮತ್ತೆ ಯೋಚಿಸು
ನೋವಿನಾಳದಲಿ ನೂಕುವ ಬದಲು
ಸಾವಿನಾಳದಲಿ ಮುಳುಗಿಸು

ದೇವ ನಿನ್ನ ಬೇಡಿಕೊಂಬೆ
ನಿನ್ನಾಲಯಕೆ ಎನ್ನ ಕರೆಯಿಸು
ಇಹದ ಚಿಂತೆ ಬಿಡಿಸಿ ಎನಗೆ
ಅಂಧಕಾರವ ತೊಲಗಿಸು

ದೇವ ನನ್ನ ಪುಟ್ಟಿಸಿದೆ
ಜ್ಞಾನ ಮಾರ್ಗವ ತೋರಿಸು
ಮುಳ್ಳ ಹಾದಿಯಿಂದ ಬಿಡಿಸಿ
ಹೂವ ತೇರಲಿ ಕೂಡಿಸು

ಎಷ್ಟು ಬೇಡಿಕೊಂಬುದು ದೇವ
ಕರುಣೆಯೇ ಬರದಾಯಿತೇ
ಸುಳಿಯಿಂದ ಎತ್ತೆಂದು ಕೇಳಿದರೂ
ಕಿವಿಯೇ ಕಿವುಡಾಯಿತು

ದೇವ ನಿನ್ನ ಬೇಡಿಕೊಂಬೆ
ಒಂದೆ ಬಾರಿ ಯೋಚಿಸು
ಕಣ್ಣು ಬಿಡುವ ಮೊದಲೆ
ನನ್ನ ಉಸಿರನೊಮ್ಮೆ ನಿಲ್ಲಿಸು...

- ಸೌಮ್ಯ ಸಾಗರ.

2 comments:

Anonymous said...

ಸಾವಿನ ಒಳ ಆರಿವನ್ನು ಯಾರಿಂದ ತಾನೇ ತಿಲಿಯಲು ಸಾದ್ಯ?
ಸಾವು ತಟ್ಟನೆ ಬಂದರೆ ಪರವಾಗಿಲ್ಲ , ಇನ್ನೇನು ಸಾಯಬಹುದು ಎಂದುಕೊಂಡು ಕಾಯುವ ಕಷ್ಟ ಯಾರಿಗೂ ಬೇಡವೆನ್ನಿಸುತ್ತದೆ.
ಸಾವಿಗೆ ಅಂಜಿ ಕುಳಿತರೆ, ನಮ್ಮೀ ಸುಂದರ ಬದುಕು ನಶಿಸಿ ಹೊಗುವುದಂತು ಸಥ್ಯ..

Deepak.

ಮೌನರಾಗ... said...

Nice poem....
Hmm....nijavada mathu deepak..chennagide...poem n comment both...

Post a Comment