ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ಅವಾರ್ಡ್

ವಾಹನಗಳಿಗೆ ಸಂಚರಿಸಲು ರಸ್ತೆಗಳು ಹೇಗಿವೆಯೋ, ಹಾಗೆ ಮಾನವರು ಸಂಚರಿಸಲು ಫುಟ್ಪಾತುಗಳು. ಅಂತಹ ಫುಟ್ಪಾತುಗಳು ಎಷ್ಟು ಸುರಕ್ಷಿತ ಎಂಬುದನ್ನು ನಾವು ಗಮನಿಸಬೇಕಾಗುತ್ತದೆ. ಇಂದಿನ ಫುಟ್ಪಾತುಗಳು ರಚನೆ ಹೇಗಿದೆ ಎಂದರೆ ಚರಂಡಿಯ ಮೇಲೆ ಎರಡು ಹೊರಳಾಡುವ ಕಲ್ಲುಗಳನ್ನು ಜೋಡಿಸಿ ಸರ್ಕಸ್ ಮಾಡಿಕೊಂಡು ಹೋಗಿ ಎಂದು ಬಿಟ್ಟಂತಿದೆ!. ಅದನ್ನಾದರೂ ಸರಿಯಾಗಿ ಮಾಡಿದ್ದರೆ ಫುಟ್ಪಾತ್ ಮೇಲೆ ಕೊಳಚೆ ನೀರು ಹರಿಯುವುದನ್ನಾದರೂ ತಪ್ಪಿಸಬಹುದಿತ್ತು. ಆದರೆ ಪಾಪ...! ಇಂದಿನ ನಮ್ಮ ಜನಪ್ರತಿನಿಧಿಗಳಿಗೆ ತಮ್ಮ ಮನೆಯ ಮುಂದಿರುವ ಫುಟ್ಪಾತುಗಳನ್ನು ಬಿಟ್ಟರೆ ಬೇರೆ ಫುಟ್ಪಾತುಗಳು ಅವರ ಕನಸಲ್ಲೂ ಕಾಣುತ್ತಿಲ್ಲವೇನೋ..?


ಫುಟ್ಪಾತುಗಳ ಸ್ಥಿತಿ ಇಂದು ಹೀನಾಯಮಾನವಾಗಿದೆ. ಈ ಅವ್ಯವಸ್ಥೆಯಿಂದ ಅಪಘಾತಕ್ಕೆ ತುತ್ತಾದವರೆಷ್ಟೋ, ಅಲ್ಲಿ ಬರುವ ಕೆಟ್ಟ ವಾಸನೆಯನ್ನು ತಡೆಯಲಾರದೆ ಆ ದಾರಿ ಬಿಟ್ಟವರೆಷ್ಟೋ ಆ ದೇವರೇ ಬಲ್ಲ. ಕೆಲ ಫುಟ್ಪಾತುಗಳು ನೆಪ ಮಾತ್ರಕ್ಕೆ ಇರುತ್ತವೆಯೋ ಹೊರತು ಮನುಷ್ಯರು ಓಡಾಡುವಂತಿಲ್ಲ. ಇದರೆ ಮೇಲೆ ನಡೆಯುತ್ತಿದ್ದರೆ ಯಾವಾಗ ತೆರೆದ ಗುಂಡಿಯೊಳಗೆ ಬೀಳುತ್ತೇವೊ ಎಂಬ ಭಯ ಜನರಲ್ಲಿ ಮೂಡಿದೆ. ಫುಟ್ಪಾತುಗಳು ಕೆಲವೆಡೆ ಸ್ವಲ್ಪ ದೂರ ಇದ್ದರೆ ಇನ್ನು ಸ್ವಲ್ಪ ದೂರ ಇರುವುದೇ ಇಲ್ಲ. ರಸ್ತೆಯ ಮೇಲೇ ನಡೆದುಕೊಂಡು ಹೋಗಬೇಕು. ಕಳಪೆ ಕಾಮಗಾರಿಯಿಂದಾಗಿ ಸರಿ ಇದ್ದವೂ ಕೂಡಾ ಇಂದು ಹಾಳಾಗುತ್ತಿವೆ.


ಫುಟ್ಪಾತುಗಳು ವಿಸ್ತಾರವಾಗಿ ಸುಸ್ಥಿತಿಗೊಂಡು ಜನಸಾಮಾನ್ಯರು, ವಿಕಲಚೇತನರು, ವೃದ್ದರು ಆರಾಮಾಗಿ ಯಾವುದೇ ಭಯವಿಲ್ಲದೇ ನಡೆದಾಡುವಂತಾಗಬೇಕು. ಇನ್ನಾದರೂ ಸಂಬಂಧಿಸಿದವರು ಈ ಅವ್ಯವಸ್ಥೆಯನ್ನು ಸರಿಪಡಿಸಬೇಕಿದೆ.

-ದರ್ಶನ್ ಎಂ. ಕಮ್ಮಾರಗಟ್ಟೆ,
ಪ್ರಥಮ ಪತ್ರಿಕೋದ್ಯಮ,ಆಳ್ವಾಸ್ ಕಾಲೇಜು,
ಮೂಡುಬಿದಿರೆ.

1 comments:

Anonymous said...

nimma braha thumba chennagide. srujanathmakavaagi nimma pratibheyannu upayogisi barediddira. nimma prathibe samajakke madariyagli. Shubhvagali.. Chandrahas GB.

Post a Comment