ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ಅವಾರ್ಡ್

(ಜೀವನದ ನೈಜ ಘಟನೆ ಆಧಾರಿತ ಕವಿತೆ)

ಮಡಿಲಲ್ಲಿ ಬೆಳೆಸಿದೆ
ಅಕ್ಕರೆಯಿಂದ ಮುದ್ದಿಸಿದೆ
ಸಂತಸದಿಂದ ಲಾಲಿ ಹಾಡಿದೆ
ನಮ್ಮನ್ನು ಉದ್ದರಿಸಿದೆ
ಓ ತಾಯಿಯೇ ನಿನಗೊಂದು ನಮನಮಮತೆ ಎಂದರೆ ನೀನು
ವಾತ್ಸಲ್ಯವೆಂದರೆ ನೀನು
ಪ್ರೀತಿ ದೈವವು ನೀನು
ಬಾಳ ಜ್ಯೋತಿಯು ನೀನು
ಓ ತಾಯಿಯೇ ನಿನಗೊಂದು ನಮನ

ಬದುಕಿಗೆ ದಾರಿ ತೋರಿದೆ
ದಾರಿಗೆ ಬೆಳಕು ನೀಡಿದೆ
ಬೆಳಕಿಗೆ ಶಕ್ತಿ ತುಂಬಿದೆ
ಶಕ್ತಿಯ ಚೈತನ್ಯ ನಮಗೆ ನೀಡಿದೆ
ಓ ತಾಯಿಯೇ ನಿನಗೊಂದು ನಮನ

ಕಷ್ಟಪಟ್ಟೆ ನೀನು
ಬಾಳಿ ಬದುಕಿಸಿದೆ ನಮ್ಮನು
ದುಡಿದೆ ಹಣವನ್ನ
ಸಾಕಿ ಸಲುಹಿದೆ ನಮ್ಮನ್ನ
ಓ ತಾಯಿಯೇ ನಿನಗೊಂದು ನಮನ

ಎಲ್ಲ ಮಾಡಿದೆ ನಮಗೆ
ಎಲ್ಲ ಸಿಕ್ಕಿತು ನಮಗೆ
ನೀನು ಹೋದೆ ಮರೆಯಾಗಿ
ನನ್ನ ಬಿಟ್ಟು ಒಂಟಿಯಾಗಿ
ಓ ತಾಯಿಯೇ ನಿನಗೊಂದು ನಮನ-ದರ್ಶನ್ ಎಂ, ಕಮ್ಮಾರಗಟ್ಟೆ
ಪ್ರಥಮ ಪತ್ರಿಕೋದ್ಯಮ
ಆಳ್ವಾಸ್ ಕಾಲೇಜ್
ಮೂಡುಬಿದಿರೆ.

1 comments:

Anonymous said...

thumba cenngide good .......... ravikiran frm 3rd BA

Post a Comment