ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
9:45 PM

ಓ ಗೆಳೆಯ

Posted by ekanasu

ಸಾಹಿತ್ಯ
ತಲೆ ತಗ್ಗಿಸಿ ಬೆನ್ನು ಬಗ್ಗಿಸಿ

ಚಿಂತೆಯ ಸುಳಿಯಲ್ಲಿ ಮನಸ್ಸನ್ನು ತಳ್ಳಿ

ಮೌನ ಕಲ್ಲುಬಂಡೆಯಾಗಿ ಕುಳಿತೆಯಾ?

ಅಳಬೇಡ, ನನ್ನಾಣೆ

ತೆರೆದು ನೋಡು ಹೃದಯಾಕ್ಷಿ

ಲೋಕವೊಂದು ಸುಂದರ ನವಿಲು.ಬದುಕಿಗೊಂದು ನಂಬಿಕೆ

ನಂಬಿಕೆಗೊಂದು ಸತ್ವ

ಆಗಲೇ ಜೀವನ ಪರಿಪಕ್ವ.

ಕತ್ತಲು ಹೋಗಿ ಬೆಳಕು ಬರಲಿದೆ

ನಂಬಿಕೆಯಿಂದಿರು, ನಿನ್ನ

ಹೃದಯದಾಸೆಯ ಮೊಗ್ಗು ಹೂವಾಗಿ ಅರಳಿ

ನಕ್ಕು ನಲಿಯಲಿ ಭೂತಾಯ ಮಡಿಲಲಿ

ನಿನ್ನ ಕೀರ್ತಿ ಚಿರಾಯು ಬೆಳಗಲಿ.

- ಜಬೀವುಲ್ಲಾ ಖಾನ್

0 comments:

Post a Comment