ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:29 PM

ಖುಷಿ...ಖುಷಿ...

Posted by ekanasu

ಈ ಕನಸು ಅವಾರ್ಡ್

ಪ್ರಿಯ ವಿದ್ಯಾರ್ಥಿಗಳೇ...
ಈ ಕನಸು ಯಶಸ್ವಿಯಾಗಿ ಮೂರನೇ ವರುಷಕ್ಕೆ ಪಾದಾರ್ಪಣೆ ಮಾಡಿದ ಹಿನ್ನಲೆಯಲ್ಲಿ ಆಯೋಜಿಸಿರುವ "ಈ ಕನಸು.ಕಾಂ ವಾರ್ಷಿಕ ವಿದ್ಯಾರ್ಥಿ ಅವಾರ್ಡ್ " ಯೋಜನೆಗೆ ನಿಮ್ಮ ಸ್ಪಂದನೆ ಖುಷಿತಂದಿದೆ. ವಿದ್ಯಾರ್ಥಿಗಳಲ್ಲಿ ವೆಬ್ ಬರವಣಿಗೆ ಹುಚ್ಚು ಹೆಚ್ಚಬೇಕೆಂಬುದು ಈ ಕನಸಿನ ಮುಖ್ಯ ಉದ್ದೇಶ. ಜೊತೆಗೆ ಓದುವ ಹವ್ಯಾಸ ಹೆಚ್ಚಬೇಕು ; ಪತ್ರಿಕೆಗಳ ಜೊತೆ ಜೊತೆಗೆ ನವಮಾಧ್ಯಮವಾದ ವೆಬ್ ಮಾಧ್ಯಮದ ಬಗ್ಗೆ ಆಸಕ್ತಿ ಮೂಡಬೇಕೆಂಬ ಆಶಯದಿಂದ ಈ ಕನಸು ಮೊತ್ತ ಮೊದಲ ಬಾರಿಗೆ ಈ ರೀತಿಯ ಹೊಸ ಯೋಜನೆಯೊಂದನ್ನು ಪ್ರಾರಂಭಿಸಿದೆ. ಇದಕ್ಕೆ ವಿದ್ಯಾರ್ಥಿ ಪತ್ರಕರ್ತರ ಉತ್ತಮ ಬೆಂಬಲ ನಮಗೆ ದೊರಕಿದೆ. ಅದು ಶ್ಲಾಘನಾರ್ಹ.ಮುಂದೆಯೂ ನಿರಂತರವಾದ ಬರವಣಿಗೆ ನಿಮ್ಮಿಂದ ಹರಿದು ಬರಲಿ. ಉತ್ತಮ ಓದುಗರಾಗಿ ಮುಂದೆಬನ್ನಿ. ಪತ್ರಿಕಾ ರಂಗದ ಘನತೆ, ಗೌರವಗಳನ್ನು ಉಳಿಸಿ ಬೆಳೆಸುವ ಉತ್ತಮ ಪತ್ರಕರ್ತರಾಗಿ ಎಂಬುದು ಈ ಕನಸಿನ ಹಾರೈಕೆ. ಪ್ರಶಸ್ತಿ, ಪುರಸ್ಕಾರಗಳು ನಿಮ್ಮ ಸಾಧನೆಯನ್ನರಸಿ ಬರುವಂತಹುದು. "ನಾವು ಬೆಳೆಯಬೇಕು. ಸಾಧನೆಮಾಡಬೇಕು" ಎಂಬ ಛಲ , ಉದ್ದೇಶ ಪ್ರತಿಯೊಬ್ಬರಿಗಿರಲಿ.ಆಗ ಉತ್ತಮ ಸಾಧಕಾಗಿ ನೀವು ಬೆಳಗಲು ಸಾಧ್ಯ.ಶುಭವಾಗಲಿ.

- ಟೀಂ.ಈಕನಸು.

1 comments:

Pravasi Guide said...

its a good activity.... go on.. wish you become successful event by Bhagavan das, webmaster Pravasiguide.com

Post a Comment