ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ

ರೈತರಿರ ಕನಸೆಲ್ಲಾ ಭಸ್ಮಾ

ಗೇರು ಕೃಷಿಕರ ಬದುಕಿನಲ್ಲಿ `ಚಾ ಸೊಳ್ಳೆ' ಕಾಟ

ಗೇರು ಬರೇ ರೈತರ ಆರ್ಥಿಕ ಮೂಲವಾಗಿಲ್ಲ. ಗೇರು ಉದ್ಯಮವಾಗಿಯೂ ಬದಲಾಗಿದೆ. ಅರಣ್ಯ ಇಲಾಖೆ ಒಂದೊಂದು ಗೇರು ತೋಪುಗಳು ಲಕ್ಷದ ಲೆಕ್ಕದಲ್ಲಿ ಬಿಡ್ಡಿಗೆ ಹೋಗುತ್ತದೆ. ಬಿಡ್ಡುದಾರರೂ ಕೂಡಾ ಗೇರು ತೋಪು ಗುತ್ತಿಗೆ ಹಿಡಿಯುವ ನಿಟ್ಟಿನಲ್ಲಿ ಸ್ಪರ್ಧೆಗೆ ಇಳಿಯುವುದು ಗೇರು ಬೆಳೆ ಮಹತ್ವಕ್ಕೆ ಸಣ್ಣ ನಿದರ್ಶನ.ಉಡುಪಿ : ಗೇರು ಕೃಷಿಕರ ಬದುಕಿನಲ್ಲಿ ಮತ್ತೆ ಚಾ ಸೊಳ್ಳೆ ಕಾಟ.ಕಳೆದ ನಾಲ್ಕಾರು ವರ್ಷದಿಂದ ಬೆಂಬಿಡದ ಭೂತದ ಹಾಗೆ ರೈತರನ್ನು ಕಾಡಿದ ಟಿ ಮಾಸ್ಕೆಟೋ ಈ ವರ್ಷವೂ ತನ್ನ ಕರಾಳ ಮುಖದರ್ಶನ ಮಾಡಿದೆ.
ಗೇರು ಮರದಲ್ಲಿ ತೇರುಕಟ್ಟಿದಂತೆ ಕೂತ ಹೋವೆಲ್ಲಾ ಸುಟ್ಟು ಕರಕಲು ಹಿಡಿಯುತ್ತಿರೋದ್ರಿಂದ ರೈತರ ಮುಖದ ನಗು ಮಾಸಿದೆ. ಅನಾವೃಷ್ಟಿಯಿಂದ ಕಂಗಾಲದ ರೈತರಿಗೆ ಚಾಸೊಳ್ಳೆ ಮತ್ತೊಂದು ತಲೆ ಭರ. .
ಕಳೆದ ಸಾಲಿನಲ್ಲಿ ಉತ್ತಮ ಗೇರು ಫಸಲಿನ ನಿರೀಕ್ಷೆಯಲ್ಲದ್ದ ರೈತರಿಗೆ ಮಳೆ, ಮೋಡದ ಕಣ್ಕಟ್ ಆಟ ರೈತರ ನಿರೀಕ್ಷೆ ಧೂಳಿಪಟ ಮಾಡಿತ್ತು. ಪ್ರಸಕ್ತ ವರ್ಷ ಮಳೆ, ಮೋಡಗಳ ಕಳ್ಳಾಟವಿಲ್ಲದಿದ್ದರೂ ಗೇರು ಹೂವು ಕರಕಲು ಹಿಡಿಯೋದು ನಿಂತಿಲ್ಲ.
ಪ್ರಕೃತಿ ವಿಕೋಪ ಕೃಷಿಕರು ಅರ್ಧಂಬರ್ಧ ನಿಶ್ಯಕ್ತರನ್ನಾಗಿ ಮಾಡಿದೆ.

ಕಿಂಡಿಆಣೆಕಟ್ಟು ರದ್ದಾಂತಕ್ಕೆ ದ್ವಿದಳ ದಾನ್ಯ ಬೆಳೆ ನೆಲೆಕಚ್ಚಿ ರೈತರನ್ನು ಅಡ್ಡಡ್ಡ ಮಲಗಿಸಿದೆ. ಇದರೊಟ್ಟಿಗೆ ಕಾಲೆಳೆದುಕೊಂಡು ಸಾಗುತ್ತಿರುವ ಸಿಗಡಿ ಕೃಷಿ ಜೊತೆಗೆ ಗೇರು ಕೂಡಾ ರೈತರ ಜತೆ ಮುನಿಸಿಕೊಂಡಿರೋದು ದುರಂತ.
ಒಳ್ಳೆಯ ಧಾರಣೆಯಿದ್ದರೂ ಗೇರು ರೈತರ ಕೈಹಿಡಿಯುವ ಲಕ್ಷಣ ಕಾಣುತ್ತಿಲ್ಲ. ಅಡಿಕೆ ಬೆಲೆ ಪಾತಾಳ ಸೇರಿದೆ. ನುಸಿ ಹಿಡದ ತೆಂಗಿನ ಕಾಯಿ ಇದ್ದಿದ್ದರಲ್ಲಿ ಪರವಾಗಿಲ್ಲ. ಗೇರು ಬೆಳೆಯಲ್ಲಾದರೂ ಸುಧಾರಿಸಿಕೊಳ್ಳುಬಹುದೆಂಬ ರೈತರ ಆಸೆ ಕೂಡಾ ಬಂಜೆ. ಅನ್ನದಾತ ಸಂಕಷ್ಟಕ್ಕೆ ಬಿದ್ದಿದ್ದಾನೆ.
ಹವಮಾನವೂ ಮುಖ್ಯ. ಹವಮಾನ ಗೇರು ಬೆಳೆ ಮೇಲೆ ನೇರ ಪರಿಣಾಮ ಬೀರುತ್ತದೆ. ಕಳೆದ ವರ್ಷ ಮೋಡ, ಮುಗಿಲು ಮತ್ತು ಇಬ್ಬನಿಗೆ ಗೇರು ಬೆಳೆ ಅಧಕ್ಕರ್ಧ ಎಕ್ಕುಟ್ಟಿಹೋಗಿತ್ತು. ಪ್ರಕೃತಿ ಜೊತೆ `ಟಿ ಮಾಸ್ಕೆಟೋ' ಸೇರಿಕೊಂಡು ಗೇರು ಬೆಳೆ ತಿಂದು ಹಾಕಿತ್ತು. ಕ್ವಿಂಟಾಲ್ ಗಟ್ಟಲೆ ಬೆಳೆಯುತ್ತಿದ್ದ ರೈತರಿಗೆ ದಕ್ಕಿದ್ದು ಕೇಜಿ ಲೆಕ್ಕದಲ್ಲಿ.

ಗೇರು 13 ಡಿಗ್ರಿ ಹವಮಾದಿಂದ ಹಿಡಿದು 35 ಡಿಗ್ರಿ ಊಷ್ಣಾಂಶದ ವರೆಗಿನ ವಾತಾವರಣದಲ್ಲಿ ಬೆಳೆಯುತ್ತದೆ. ಉಷ್ಣಾಂಷದ ಏರಿಳಿತ ಮತ್ತು ಮೋಡ ತುಂಬಿದ ವಾತಾವರಣ ಹಾಗೂ ಮಂಜು ಬೀಳುವುದರಿಂದ ಗೇರು ಹೂವು ಕರಟುತ್ತದೆ. ಮಿಡಿ ಕೂಡಾ ಹೀಚಾಗಿ ನೆಲಕ್ಕೆ ಉದುರುತ್ತದೆ. ಇದರೊಟ್ಟಿಗೆ ಗೇರು ಮರಕ್ಕೆ ಶಾಪವಾಗಿ ಕಾಡುವ `ಬೋರ್ಯಾರ್ ಅಟ್ಯಾಕ್' ಸೇರಿಕೊಳ್ಳುತ್ತದೆ. ಹುಳುಹುಪ್ಪಟೆ ಮತ್ತು ಕೀಟ ಬಾಧೆ ಕೂಡಾ ಗೇರು ತೋಪನ್ನು ಕಾಡುವ ಇತರ ಸಂಗತಿ.

ಡಿಸೆಂಬರಲ್ಲಿ ಹೂವು : ಮಳೆನಿಂತ ಕೂಡಲೇ ಗೇರು ಚಿಗರೊಡೆದು ಹೂವು ಬಿಡಲು ಆರಂಭಸುತ್ತದೆ. ಈ ಬಾರಿ ಡಿಸೆಂಬರ್ ತಿಂಗಳಲ್ಲಿ ಗೇರು ಮರಗಳಲ್ಲಿ ಗೊಂಚಲು ಗೊಂಚಲು ಮೊಗ್ಗು ಕಾಣಿಸಿಕೊಂಡಿದೆ. ವೊಗ್ಗು ಹೂವಾಗಿ ಅರಳವ ವೊದಲೇ ಕಮರಿ ಹೋಗುತ್ತಿದೆ.
ಗೇರು ಬರೇ ರೈತರ ಆರ್ಥಿಕ ಮೂಲವಾಗಿಲ್ಲ. ಗೇರು ಉದ್ಯಮವಾಗಿಯೂ ಬದಲಾಗಿದೆ. ಅರಣ್ಯ ಇಲಾಖೆ ಒಂದೊಂದು ಗೇರು ತೋಪುಗಳು ಲಕ್ಷದ ಲೆಕ್ಕದಲ್ಲಿ ಬಿಡ್ಡಿಗೆ ಹೋಗುತ್ತದೆ. ಬಿಡ್ಡುದಾರರೂ ಕೂಡಾ ಗೇರು ತೋಪು ಗುತ್ತಿಗೆ ಹಿಡಿಯುವ ನಿಟ್ಟಿನಲ್ಲಿ ಸ್ಪಧರ್ೆಗೆ ಇಳಿಯುವುದು ಗೇರು ಬೆಳೆ ಮಹತ್ವಕ್ಕೆ ಸಣ್ಣ ನಿದರ್ಶನ.

ರೋಗ ನಿರೋಧಕ ಶಕ್ತಿ ಕಡಿಮೆ : ಗೇರು ಕೃಷಿಯಲ್ಲಿ ರೈತ ಸುಧಾರಿತ ತಳಿ ಬಳಸದೇ ಇರುವುದು ಗೇರು ಇಳುವರಿ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಗೇರು ಕೃಷಿಕರ ಅಭಿಪ್ರಾಯ. ಖಾಸಗಿ, ಪಟ್ಟಾ ಸ್ಥಳ ಮತ್ತು ಅರಣ್ಯ ಇಲಾಖೆ ಸ್ಥಳಗಳಲ್ಲಿ ಗೇರು ಕೃಷಿ ನಡೆಯುತ್ತಿದೆ. ಒಂದರ್ಥದಲ್ಲಿ ಆರ್ಥಿಕ ಮೂಲದ ತೋಟಗಾರಿಕಾ ಬೆಳೆಯಾಗಿದೆ ಗೇರು. ಸ್ಥಳೀಯ ಗೇರು ಸಸಿಗಳಿಗೆ ಹೆಚ್ಚಿನ ರೋಗ ನಿರೋಧಕ ಶಕ್ತಿ ಇಲ್ಲ. ಸುಧಾರಿಸಿದ ತಳಿಗಳನ್ನು ರೈತರು ಬಳಸಿದರೆ ಗೇರು ಬೀಜದ ಉತ್ಪಾದನೆ ಹೆಚ್ಚಿಸಬಹುದೆಂಬುದು ಹೆಚ್ಚಿನ ಗೇರು ಕೃಷಿಕರ ಅನಿಸಿಕೆ.
ಕಳೆದ ಸಾಲಿನಲ್ಲಿ ಗೇರು ಬೀಜದ ಕ್ವಿಂಟಾಲ್ಗೆ ಐದ ರಿಂದ ಐದೂವರೆ ಸಾವಿರದಷ್ಟು ಬೆಲೆಯಿತ್ತು. ಈ ಭರಿ ಕಳೆದ ಸಾಲಿಗಿಂತ ಬೆಲೆ ಹೆಚ್ಚಿಗೆಯಿದೆ. ಆದರು ಗೇರು ಬೀಜ ಮಾತ್ರ ಇಲ್ಲ.
ಮಂಗಳೂರು ಮತ್ತು ಉಡುಪಿ ಜಿಲ್ಲೆಯಲ್ಲಿ ಅತೀಹೆಚ್ಚು ಗೇರು ಬೀಜ ಕಾರ್ಖಾನೆಗಳಿವೆ. ಅವುಗಳಿಗೆ ಇಲ್ಲಿನ ಗೇರು ಬೀಜ ಸಾಲುತ್ತಿಲ್ಲ. ಹೊರದೇಶದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಅಂತೂ ಬರಡು ಭೂಮಿಯಲ್ಲಿ ಬಂಗಾರ ಬೆಳೆಯುವ, ನಿರ್ವಹಣೆ ವೆಚ್ಚ ಕೂಡಾ ಕಡಿಮೆಯಿರುವ ಗೇರು ಕೃಷಿ ರೈತರು ಕೈಬಿಡುವ `ಛಾನ್ಸ್' ಜಾಸ್ತಿ.


ಗೇರು ಬೀಜ ಆಮದು : ದೇಶದ ವಾರ್ಷಿಕ ಗೇರು ಬೀಜ ಉತ್ಪಾಧನೆ 4.75 ರಿಂದ 5.5 ಲಕ್ಷ ಟನ್. ಹಾಗೆ ಕಚ್ಚಾ ಗೇರು ಬೀಜಕ್ಕೆ ಬೇಡಿಕೆ ಹುಚ್ಚುತ್ತಿದೆ. ಉತ್ಪಾದನೆ ಕಡಿಮೆಯಾಗುತ್ತಿದೆ. ಪ್ರತಿ ವರ್ಷ 6-7 ಲಕ್ಷ ಟನ್ ಗೇರು ಬೀಜ ದೇಶಕ್ಕೆ ಆಮದಾಗುತ್ತದೆ. ಗೇರು ಬೀಜ ಆಮದಿಗಾಗಿಯೇ ಸುಮಾರು 2.5 ಕೋಟಿ ರು. ವೆಚ್ಚ ಮಾಡಲಾಗುತ್ತದೆ.
ರಾಜ್ಯದಲ್ಲಿ ಒಂದು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಗೇರು ಬೆಳೆಯಲಾಗುತ್ತಿದೆ. ಗೇರು ಕೃಷಿ ಕೂಡಾ ಅವೈಜ್ಞಾನಿಕ. ಈ ಪದ್ದತಿಯೇ ಗೇರು ಇಳಿವರಿ ಮೇಲೆ ಪರಿಣಾಮ ಬೀರಿದೆ. ಬೇರೆ ರಾಜ್ಯಕ್ಕೆ ಹೋಲಿಸಿದರೆ ರಾಜ್ಯದ ಗೇರು ಇಳಿವರಿಯೂಕಡಿಮೆ. ಮಹಾರಾಷ್ಟ್ರದಲ್ಲಿ ಪ್ರತಿ ಹೆಕ್ಟೇರಿಗೆ 1200 ಕೆ.ಜಿ. ಇಳುವರಿ ಬರುತ್ತದೆ. ರಾಜ್ಯದಲ್ಲಿ ಪ್ರತಿ ಹೆಕ್ಟೇರಿಗೆ 500 ಕೆ.ಜಿ. ಇದೆ. ಗೋವಾ ಮತ್ತು ಕೇರಳದಲ್ಲೂ ರಾಜ್ಯಕ್ಕೆ ಹೋಲಿಸಿದರೆ ಇಳುವರಿ ಜಾಸ್ತಿ. ವೈಜ್ಞಾನಿಕ ಕೃಷಿ ಪದ್ದತಿ, ಸಸ್ಯ ಸಂರಕ್ಷಣೆ ಮಾಡಿದರೆ ರಾಜ್ಯದಲ್ಲೂ ಗೇರು ಉತ್ಪಾದನೆ ಸಧ್ಯ ಎನ್ನಲಾಗುತ್ತಿದ್ದರೂ ಚಾಸೊಳ್ಳೆ ಉಪದ್ರಕ್ಕೆ ಏನು ಮಾಡೋದು.


-ಶ್ರೀಪತಿ ಹೆಗಡೆ ಹಕ್ಲಾಡಿ

0 comments:

Post a Comment