ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ಅವಾರ್ಡ್

ಪ್ರಿಯ ಓದುಗರೇ...ಮೂರನೇ ವರುಷಕ್ಕೆ ಕಾಲಿಟ್ಟ ಈ ಕನಸು.ಕಾಂ ಹಮ್ಮಿಕೊಂಡಿರುವ ವಿದ್ಯಾರ್ಥಿ ವಾರ್ಷಿಕ ಪ್ರಶಸ್ತಿಗೆ ಮೊದಲು ಸ್ಪಂದನೆ ನೀಡಿದ್ದು ಉಜಿರೆಯ ಎಸ್.ಡಿ.ಎಂ.ಕಾಲೇಜಿನ ವಿದ್ಯಾರ್ಥಿಗಳು. ಈ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿ ರಿಯಾಝ್ ಲೇಖನವೊಂದನ್ನು ಕಳುಹಿಸಿಕೊಟ್ಟಿದ್ದಾನೆ. ಓದುಗರ ಜವಾಬ್ದಾರಿ ಹೆಚ್ಚಿದೆ. ಈ ಲೇಖನದ ಮೌಲ್ಯಮಾಪನ ಓದುಗರಾದ ನೀವುಗಳು ಮಾಡಬೇಕಾಗಿದೆ. ನಿಮ್ಮ ಅಭಿಪ್ರಾಯಗಳನ್ನು ನಮಗೆ ನೀಡಿ -ಸಂ.
ಇದು ಪ್ರಕೃತಿ ರಮಣೀಯವಾದ ಪ್ರದೇಶ. ಮುಸ್ಸಂಜೆ ಹೊತ್ತು ಇಲ್ಲಿಗೆ ಬಂದರೆ ಸಾಕು ಚಿಲಿ ಪಿಲಿ ಹಕ್ಕಿಗಳ ನಿನಾದ ಮುಗಿಲು ಮುಟ್ಟುತ್ತದೆ .ಇನ್ನೇನು ಗೂಡು ಸೇರುವಷ್ಟರಲ್ಲಿ ಕೆಲವೊಂದು ಪಕ್ಷಿಗಳಿಗೆ ಈ ಕಾಣುವ ಬಿಡಾರವೇ ಈ ಆಶ್ರಯ ತಾಣ.ಮೇಲಿನ ಹಂಚಿನ ತುದಿಯಲ್ಲೇ ಹಕ್ಕಿಗಳು ಗೂಡು ಕಟ್ಟಿಕೊಂಡಿವೆ.ಈ ಕಡೆ ಸಂಚರಿಸುವ ವಾಹನಗಳು ಪ್ರತಿ ನಿತ್ಯವು ಇಲ್ಲಿ ಸಾಲು ಸಾಲಗಿ ನಿಂತುಕೊಳ್ಳುತ್ತವೆ. ಹಾಗೆಂದ ಮಾತ್ರಕ್ಕೆ ಟ್ರಾಫಿಕ್ ಜಾಂ ಆಗುತ್ತದೆ ಅಂದುಕೊಳ್ಳಬೇಡಿ. ಇಲ್ಲೇನು ನದಿ ಕೂಡ ಇಲ್ಲ.ಚಾರಣ ಪ್ರಿಯರಿಗೆ ಪ್ರವಾಸಿ ತಾಣವಂತೂ ಅಲ್ಲವೇ ಅಲ್ಲ.ಇತ್ತ ಕಡೆ ಪ್ರಯಾಣ ಬೆಳೆಸುವ ಪ್ರತಿಯೊಬ್ಬರೂ ಇದನ್ನು ನೋಡುವ ಕುತೂಹಲ ಇದ್ದಿರಲೂಬಹುದು.

ಪಕ್ಕಾ ಪ್ರಯಾಣಿಕರ ಬಸ್ಸು ತಂಗುದಾನದಂತಿರುವ ಈ ಬಿಡಾರದಲ್ಲಿ ವರ್ಷಂಪೂರ್ತಿ ನೀರು ಝುಳು ಝುಳು ಹರಿಯುತ್ತಲೇ ಇರುತ್ತವೆ ಎಂದರೆ ನೀವು ನಂಬಲೇಬೇಕು .ಸುಮ್ಮನೆ ಒಂದು ನಿಮಿಷ ಇಲ್ಲೊಮ್ಮೆ ನಿಂತುಕೊಂಡರೆ ಸಾಕು ಮನಸ್ಸಿಗೆ ತಣ್ಣನೆಯ ಅನುಭವ ಆಗುತ್ತದೆ.

ಬೆಳ್ತಂಗಡಿ ತಾಲೂಕಿನ ಕೇಂದ್ರಬಿಂದು ಉಜಿರೆಯಿಂದ ಧರ್ಮಸ್ಥಳಕ್ಕೆ ಹೋಗುವಾಗ ಮೂರು ಕಿಲೋ ಮೀಟರ್ ದೂರದಲ್ಲಿ ಈ ಬಿಡಾರ ಕಾಣ ಸಿಗುತ್ತದೆ.ವರುಷದ ಎಲ್ಲಾ ದಿನಗಳಲ್ಲೂ ನೀರು ಜಿನುಗುತ್ತಿರುವ ಈ ಒಂದು ಪ್ರದೇಶವನ್ನು ನೀರ ಚಿಲುಮೆ ಎಂದು ಕರೆಯುತ್ತಾರೆ.

ಈ ತಾಣಕ್ಕೆ ಪುರಾತಣ ಐತಿಹ್ಯವಿದೆ. ಈ ಬಿಡಾರದ ಹಿಂದೆ ನೀರು ಇರುವ ಟಾಂಕಿ ಒಂದು ಇದೆ. ಹಿಂದೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬರುವ ಯಾತ್ರಾರ್ಥಿಗಳಿಗೆ ಸಾರಿಗೆ ವ್ಯವಸ್ಥೆ ಇಲ್ಲದಿದ್ದರಂದ ಎತ್ತಿನ ಗಾಡಿಯಲ್ಲಿ ಬರುತ್ತಿದ್ದರು.ಇದನ್ನು ಮನಗಂಡ ಕ್ಷೇತ್ರದ ಆಡಳಿತ ಮಂಡಳಿ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ವಿಶ್ರಾಂತಿ ಕೊಠಡಿಯನ್ನಾಗಿ ಇದನ್ನು ನಿರ್ಮಿಸಿದರು. ಎಲ್ಲಾ ಯಾತ್ರಾರ್ಥಿಗಳು ವಿಶ್ರಾಂತಿ ಪಡೆದುಕೊಳ್ಳುವ ಜೊತೆಗೆ ಉಪಹಾರವನ್ನು ತಯಾರಿಸಲು ಈ ಸ್ಥಳವನ್ನು ಉಪಯೋಗಿಸುತ್ತಿದ್ದರು.ಈಗಲೂ ಇದು ಚಾಲ್ತಿಯಲ್ಲಿದೆ.

ಇಲ್ಲಿ ಹರಿದು ಬರುವ ನೀರು ಶುದ್ದ ನೀರು ಎಂದು ಹೆಳುತ್ತಾರೆ ಉಡಯಪಿಯ ಲಾರಿ ಚಾಲಕ ಚಿದಾನಂದ. ಇವರು ಕಳೆದ ಎಂಟು ವರ್ಷದಿಂದ ಲಾರಿಯಲ್ಲಿ ವಸ್ತುಗಳನ್ನು ದೂರದ ಕಡೆ ಸಾಗಿಸಲು ಹೋಗುವಾಗ ಮತ್ತು ಬರುವಾಗ ತನಗೆ ಬೇಕಾದಷ್ಟು ನೀರನ್ನು ಕುಡಿಯಲು ತೆಗೆದುಕೊಳ್ಳುತ್ತಾರಂತೆ. ಹೋಟೆಲು ಅಥವಾ ಮಾರ್ಗ ಮದ್ಯೆ ಕಾಣುವ ನಲ್ಲಿಯ ನೀರನ್ನು ಎಂಡು ವರ್ಷದಿಂದ ಮುಟ್ಟಲೇ ಇಲ್ಲ ಎನ್ನುತ್ತಾರೆ ಇವರು.
ರಿಯಾಝ್.ಜಿ.
ಉಜಿರೆ.

3 comments:

thrupthi said...

a pradeshake nira chilume embha hesaru yake banthu embha kurithu mahithi nidalagide... chennagide..

H.H.Jain said...

thumba dhanyavadagalu vishya tilisidikke

Anonymous said...

ರಿಯಾಜ್ ಅವರೆ, "ಈಕನಸು.ಕಾಂ" ನಿಮ್ಮ ಕಾಲೇಜಿಗೆ ನೀಡಿರುವ ಸದವಕಾಶವನ್ನು ಉಪಯೋಗಿಸಿಕೊಳ್ಳಿರಿ. ಪ್ರತಿಯೊಂದು ಮೈಲಿ ಒಂದು ಹೆಜ್ಜೆಯಿಂದ ಪ್ರಾರಂಭವಾಗುತ್ತದೆ. ಹೀಗೆಯೇ ನಿರಂತರವಾಗಿ ಬರೆಯುತ್ತಿರಿ. ಶುಭವಾಗಲಿ. - ಖಾನ್.

Post a Comment