ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ಅವಾರ್ಡ್

ವಿಶ್ವದ ಅತೀ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ವಾರೆನ್ ಬಫೆಟ್ ಮೊಬೈಲ್ ಬಳಸುವುದಿಲ್ಲ ಎನ್ನುವುದು ವಿಚಾರ. ಮೊಬೈಲ್ ಇಲ್ಲದೆ ಬದುಕೇ ಇಲ್ಲ ಎಂದುಕೊಂಡಿರುವ ನಾವು ನಾಚಿಕೊಳ್ಳಬೇಕಾದ ಬಹುಮುಖ್ಯ ಅಂಶ ಇದು. ಇಂದು ಮೊಬೈಲ್ ಎಷ್ಟು ಒಳಿತನ್ನು ಮಾಡುತ್ತಿದೆಯೋ ಅಷ್ಟೇ ಪ್ರಮಾಣದಲ್ಲಿ ಕೆಡುಕನ್ನು ಮಾಡುತ್ತಿದೆ. ಇಂದಿನ ಜನತೆ ಇಡೀ ಜೀವನವನ್ನು ಮೊಬೈಲ್ ಜೊತೆ ಕಳೆಯುತ್ತಾ ತಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ತಮ್ಮ ಕೈಯ್ಯಾರೆ ಹಾಳು ಮಾಡಿಕೊಳುತ್ತಿದ್ದಾರೆ. ಎಷ್ಟೋ ಸಂಬಂಧಗಳು ಹೇಳ ಹೆಸರಿಲ್ಲದಂತೆ ನಾಶವಾಗುತ್ತಿವೆ. ನಮ್ಮ ಸೃಜನ ಶೀಲತೆಯನ್ನು ಮೊಬೈಲ್ ಕೆಡಿಸುತ್ತಿವೆ. ಹಿಂದೊಂದು ಕಾಲದಲ್ಲಿ ಪತ್ರ ಬರೆಯುವ ಹವ್ಯಾಸ ಇತ್ತು. ಇದರಿಂದ ವ್ಯಕ್ತಿಯ ಭಾವನೆಗಳು ಮನಪೂರ್ವಕವಾಗಿ ವ್ಯಕ್ತವಾಗುತ್ತಿತ್ತು.


ಒಂದು ಸ್ವಲ್ಪ ಮಟ್ಟಿಗೆ ಸಾಹಿತ್ಯಿಕವಾಗಿ ಕೂಡಾ ಆತನಲ್ಲಿ ಅಭಿವೃದ್ದಿ ಕಾಣುತ್ತಿತ್ತು. ಇಂದು ಮೊಬೈಲ್ ಬಂದ ಮೇಲೆ ಎಷ್ಟೋ ಅಕ್ಷರ ತಪ್ಪು, ಪದಬಳಕೆಯಲ್ಲಿ ಎಡವಟ್ಟು ಹೀಗೆ...ಮೊಬೈಲ್ ಕೊಡುಗೆ ಇದು...ಇಷ್ಟೇ ಅಲ್ಲ...ಎಲ್ಲವೂ ಅರ್ಧಂಬರ್ಧ ಎಂಬಂತೆ...ಒಂದಕ್ಷರದ ಬಳಕೆ! ಪರೀಕ್ಷೇಗಳಲ್ಲಿ ಮತ್ತು ನಿಜ ಜೀವನದ ಪತ್ರ ವ್ಯವಹಾರಗಳಲ್ಲಿ ಪದಗಳ ಬಳಕೆ ತಪ್ಪಾಗಿ ಕಂಡು ಬರುತ್ತಿದೆ. ವಾಹನ ಡ್ರೈವ್ ಮಾಡುತ್ತಿರುವ ಸಂದರ್ಭದಲ್ಲಿ ಮೊಬೈಲ್ ಬಳಸುವುದು ಅಪಾಯಕಾರಿ ಸಂಗತಿ. ಮೊಬೈಲ್ ಕೇವಲ ನಮ್ಮನ್ನು ಹಾಳುಮಾಡುವುದಲ್ಲದೆ ಪ್ರಾಕೃತಿಕ ಮತ್ತು ಸಾಮಾಜಿಕ ಪರಿಸರವನ್ನು ನಾಶ ಪಡಿಸುತ್ತಿದೆ.


ಹಲವಾರು ಜೀವ ಸಂಕುಲಗಳು ಮಾಯವಾಗುತ್ತಿವೆ. ಉದಾ: ಗುಬ್ಬಚ್ಚಿ ಎಂಬ ಪಕ್ಷಿ ಇಂದು ಮರೆಯಾಗಿದೆ.
ಯುವಜನತೆ ಅಮೂಲ್ಯವಾದ ಸಮಯದಲ್ಲಿ ಕರ್ತವ್ಯ ಮರೆತು ತಮ್ಮ ಭವಿಷ್ಯವನ್ನು ತಾವೇ ಹಾಳುಮಾಡಿಕೊಳ್ಳುತ್ತಿದ್ದಾರೆ. ಕೇವಲ ಒಂದು ಚಿಕ್ಕ ಮೆಸೇಜ್ ಒಬ್ಬನ ಜೀವ ತೆಗೆಯಬಹುದು ಮತ್ತು ಇಡೀ ಕುಟುಂಬವನ್ನು ನಾಶ ಮಾಡಬಹುದು.ವಿದ್ಯಾರ್ಥಿಗಳು ಓದುವ ಬದಲು ರಾತ್ರಿ ಇಡೀ ಕಾಲ್, ಮೆಸೇಜ್ ಮಾಡುತ್ತಾ ವ್ಯರ್ಥ ಜೀವನ ನಡೆಸುತ್ತಿದ್ದಾರೆ. ಮೊಬೈಲ್ನಿಂದಾಗಿ ಮೆದುಳು ಕ್ಯಾನ್ಸರ್ ರೋಗ ಬರುತ್ತಿದೆ.
ಇಷ್ಟೆಲ್ಲಾ ಕೆಟ್ಟ ಪರಿಣಾಮಗಳು ಮೊಬೈಲ್ನಿಂದಾಗಿ ಉಂಟಾಗುತ್ತಿವೆ. ಹಾಗೆಂದ ಮಾತ್ರಕ್ಕೆ ಒಳ್ಳೆಯ ವಿಷಯಗಳು ಇಲ್ಲಾ ಅಂತ ಅಲ್ಲ. ಎಷ್ಟು ಬೇಕೋ ಅಷ್ಟು ಮಾತ್ರ ಮೊಬೈಲ್ ಉಪಯೋಗಿಸಿ ಚಂದದ ಜೀವನ ನೆಡೆಸಿ .

-ದರ್ಶನ್ ಎಂ, ಕಮ್ಮಾರಗಟ್ಟೆ,
ಪ್ರಥಮ ಪತ್ರಿಕೋದ್ಯಮ,ಆಳ್ವಾಸ್ ಕಾಲೇಜು,
ಮೂಡುಬಿದಿರೆ.

0 comments:

Post a Comment