ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
6:14 PM

17ರಂದು ಉದ್ಘಾಟನೆ

Posted by ekanasu

ಪ್ರಾದೇಶಿಕ ಸುದ್ದಿ

ಶಿಕಾರಿಪುರ: ಶಿಕಾರಿಪುರ ಜನತೆಯ ಬಹು ಮಹತ್ವಾಕಾಂಕ್ಷೆಯ ಶ್ರೀ ಹುಚ್ಚೂರಾಯಸ್ವಾಮಿ ಕೆರೆ ಕಾಮಗಾರಿ,ಪುಷ್ಕರಣಿ,ಉದ್ಯಾನವನ ಮತ್ತಿತರರ ಹಲವು ಕಾಮಗಾರಿಗಳ ಉದ್ಘಾಟನೆಯು ಬರಲಿರುವ 17,18,19 ರಂದು ರಥೋತ್ಸವ ಜತೆಗೆ ಬಹು ಅದ್ದೂರಿಯಾಗಿ ನೆರವೇರಲಿದ್ದು,ಇದರ ಸಂಪೂರ್ಣ ಯಶಸ್ಸಿಗೆ ಅಧಿಕಾರಿಗಳ ಸಹಿತ ಜನಪ್ರತಿನಿಧಿಗಳು,ನಾಗರೀಕರು ಸಹಕರಿಸುವಂತೆ ಸಂಸದ ರಾಘವೇಂದ್ರ ಮನವಿ ಮಾಡಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಹಿರಿಯ ಅಧಿಕಾರಿಗಳು,ಜನಪ್ರತಿನಿಧಿಗಳು,ಪ್ರಮುಖರು,ವಿವಿಧ ಸಂಘ ಸಂಸ್ಥೆಗಳ ಸದಸ್ಯರ ಸಮ್ಮುಖದಲ್ಲಿ ನಡೆದ ಪೂರ್ವಸಿದ್ದತಾ ಸಭೆಯಲ್ಲಿ ಮಾತನಾಡಿದ ಅವರು ಇದೇ ದಿ.17 ರಿಂದ 19 ರ ವೆರೆಗೆ ಸತತ ಮೂರು ದಿನ ಈ ಭಾಗದ ಜನತೆಯ ಆರಾದ್ಯದೈವ ಶ್ರೀ ಹುಚ್ಚೂರಾಯ ಸ್ವಾಮಿ ರಥೋತ್ಸವದ ಜತೆಗೆ ಶಿಕಾರಿಪುರ ಸಾಂಸ್ಕೃತಿಕ ಉತ್ಸವವನ್ನು ಆಚರಿಸಲಾಗುವುದೆಂದರು.ಬಹು ಅದ್ದೂರಿ ಹಾಗೂ ಅರ್ಥಪೂರ್ಣವಾಗಿ ನಡೆಯಲಿರುವ ಕಾರ್ಯಕ್ರಮದಲ್ಲಿ ನಾಡಿನ ಖ್ಯಾತ ಕಲಾವಿದರು, ಹಾಸ್ಯ ಕಲಾವಿದರು,ನೃತ್ಯ ಕಲಾವಿದರಿಂದ ವಿವಿಧ ಕಾರ್ಯಕ್ರಮವನ್ನು ಸತತ ಆಯೋಜಿಸಲಾಗುವುದೆಂದರು.

ದಿ.17 ರಂದು ಜನತೆಯ ಬಹು ಉದ್ದೇಶಿತ ಕೆರೆ ಕಾಮಗಾರಿ,ಪುಷ್ಕರಣಿ,ಉದ್ಯಾನವನ,ಸಹಿತ 50 ಕ್ಕೂ ಅಧಿಕ ಕಾಮಗಾರಿಯ ಉದ್ಘಾ
ಟನೆ ನೆರವೇರಲಿದ್ದು,ಶ್ರೀ ದತ್ತ ಮಠದ ಬಳಿಯ ವಿಶಾಲ ಜಾಗದಲ್ಲಿ ಬೃಹತ್ ವೇದಿಕೆ ನಿರ್ಮಿಸಲಾಗುವುದು .ಮುಖ್ಯಮಂತ್ರಿಗಳ ಸಹಿತ ಹಲವು ಸಚಿವರು ಉತ್ಸವದಲ್ಲಿ ಭಾಗವಹಿಸಲಿದ್ದು ಸಂಜೆ ವೇಳೆಗೆ ಖ್ಯಾತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿರುವುದಾಗಿ ತಿಳಿಸಿದರು.18 ರ ಬೆಳಿಗ್ಗೆ ಬ್ರಹ್ಮ ರಥೋತ್ಸವದಲ್ಲಿ ರಾಜ್ಯದ ವಿವಿಧ ಖ್ಯಾತ ಕಲಾವಿದರ ಪೂಜಾ ಕುಣಿತದ ಸಹಿತ ಪಟ್ಟಣದ ಪ್ರಮುಖ ಬೀದಿಯಲ್ಲಿ ಶೋಭಾ ಯಾತ್ರೆ ಸಂಜೆ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ,19 ರಂದು ಸಂಜೆ ನಡೆಯಲಿರುವ ಹುಚ್ಚೂರಾಯನ ತೆಪ್ಪೋತ್ಸವದಲ್ಲಿ ಸಿಡಿಮದ್ದಿನ ಆರ್ಭಟದ ಜತೆಗೆ ನಂತರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಉತ್ಸವಕ್ಕೆ ತೆರೆ ಬೀಳಲಿರುವುದಾಗಿ ತಿಳಿಸಿದ ಅವರು ರಾಜ್ಯದ ವಿವಿಧ ಭಾಗದಿಂದ ಆಗಮಿಸುವ ಅಸಂಖ್ಯಾತ ಭಕ್ತರ ಭಾವನೆಗೆ ಧಕ್ಕೆಯಾಗದಂತೆ ಸ್ಥಳೀಯರು ಸಹಕರಿಸಲು ಮನವಿ ಮಾಡಿದರು.ಉತ್ಸವದ ಅಂಗವಾಗಿ ದೇವಸ್ಥಾನದಿಂದ ಶಿವಮೊಗ್ಗ ವೃತ್ತದವರೆಗೆ ಹಾಗೂ ಪಟ್ಟಣದ ಪ್ರಮುಖ ವೃತ್ತದಲ್ಲಿ ವಿದ್ಯುತ್ ದೀಪಾಲಂಕಾರಕ್ಕೆ ಸೂಚಿಸಿದ ಅವರು ದೇವಸ್ಥಾನದ ಸುತ್ತಮುತ್ತಲಿನ ರಸ್ತೆ,ಸ್ವಚ್ಚತೆ ಬಗ್ಗೆ ಲೋಕೋಪಯೋಗಿ ಇಲಾಖೆ ಎಇಇ ರಮೇಶ್ ರವರ ನೇತೃತ್ವದಲ್ಲಿ ಸಮಿತಿ ರಚಿಸಿಕೊಳ್ಳಲು ಅಧಿಕಾರಿಗಳಿಗೆ ಸಲಹೆ ನೀಡಿದರು.


ವರದಿ: ರಾಘವೇಂದ್ರ ಎಚ್.ಆರ್

0 comments:

Post a Comment