ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಬೃಹತ್ ಉದ್ಯೋಗ ಮೇಳಕ್ಕೆ ಸಿದ್ಧತೆ ಪೂರ್ಣ

ಮೂಡಬಿದಿರೆ: ಆಳ್ವಾಸ್ ಎಜುಕೇಷನ್ ಫೌಂಡೇಷನ್ ಆಶ್ರಯದಲ್ಲಿ ಏಪ್ರಿಲ್ 9ರಿಂದ ಮೂರು ದಿನಗಳ ಬೃಹತ್ ಉದ್ಯೋಗಮೇಳ "ಆಳ್ವಾಸ್ ಪ್ರಗತಿ - 2011" ಪ್ರಾರಂಭಗೊಳ್ಳಲಿದೆ. ಮೂಡಬಿದಿರೆಯ ವಿದ್ಯಾಗಿರಿ ಆವರಣದಲ್ಲಿ ಏಪ್ರಿಲ್ 9,10 ಮತ್ತು 11ರಂದು ನಡೆಯುವ ಈ ಉದ್ಯೋಗ ಮೇಳಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದು , ರಾಜ್ಯದ ವಿವಿದೆಡೆಗಳಿಂದ ವಿದ್ಯಾರ್ಥಿಗಳು ಶುಕ್ರವಾರವೇ ಆಗಮಿಸತೊಡಗಿದ್ದಾರೆ. ಸುಮಾರು 150ರಷ್ಟು ವಿವಿಧ ಕಂಪೆನಿಗಳು ಉದ್ಯೋಗಮೇಳದಲ್ಲಿ ಭಾಗವಹಿಸಲಿದ್ದು ಕೆಲವೊಂದು ಕಂಪೆನಿಗಳು ಶುಕ್ರವಾರ ಸಂಜೆಯ ವೇಳೆಗೆ ಮೂಡಬಿದಿರೆ ವಿದ್ಯಾಗಿರಿಗೆ ಆಗಮಿಸಿದೆ.ಉದ್ಯೋಗಮೇಳ ಯಶಸ್ವಿಯಾಗಿ ನಡೆಸುವ ಉದ್ದೇಶದಿಂದ ಮೂಡಬಿದಿರೆಯ ವಿದ್ಯಾಗಿರಿಯಲ್ಲಿರುವ ಆಳ್ವಾಸ್ ಪದವಿ ಕಾಲೇಜಿನ ಸಂಪೂರ್ಣ ಕಟ್ಟಡವನ್ನೇ ಉದ್ಯೋಗಮೇಳಕ್ಕೆ ವ್ಯವಸ್ಥೆಗೊಳಿಸಲಾಗಿದೆ. ಒಂದೊಂದು ಕೊಠಡಿಗಳನ್ನು ಒಂದೊಂದು ಕಂಪೆನಿಯವರಿಗೆ ನೀಡಲಾಗಿದ್ದು ಜೊತಗೆ ಸಂಸ್ಥೆಯ ಉಪನ್ಯಾಸಕರು, ವಿದ್ಯಾರ್ಥಿಗಳು ಸಹಕರಿಸುತ್ತಿದ್ದಾರೆ.


ಬ್ಯಾಂಕಿಂಗ್, ವೈದ್ಯಕೀಯ, ಎಂಜಿನಿಯರಿಂಗ್, ಬಿ.ಪಿ.ಒ, ಕೆ.ಪಿ.ಒ, ಐ.ಟಿ, ಇನ್ಶೂರೆನ್ಸ್, ಅಟೋಮೊಬೈಲ್ ಸೇಲ್ಸ್ ಸೇರಿದಂತೆ ವಿವಿಧ ಸ್ತರದ ಹುದ್ದೆಗಳಿಗೆ ಈ ಉದ್ಯೋಗಮೇಳದಲ್ಲಿ ಅವಕಾಶ ಕಲ್ಪಿಸಲಾಗಿದೆ.
ವೊಕಾರ್ಡ್ , ಅಪೋಲೋ, ಯು.ಎ.ಇ.ಎಕ್ಸ್ಚೇಂಜ್, ಇನ್ಫೋಸಿಸ್, ದಿಯಾಟೆಕ್, ಕೊಟಕ್ ಮಹೀಂದ್ರಾ, ಆಕ್ಸಸ್ ಬ್ಯಾಂಕ್, ಬಯೋಕಾನ್,ಎಂ.ಸಿ.ಎಫ್, ತಾಜ್ ಮೊದಲಾದ ಪ್ರತಿಷ್ಠಿತ ಕಂಪೆನಿಗಳು ಈ ಮೇಳದಲ್ಲಿ ಭಾಗವಹಿಸಲಿದೆ. ಒಟ್ಟು 4000ಕ್ಕೂ ಮಿಕ್ಕಿದ ಉದ್ಯೋಗಾವಕಾಶ ಉದ್ಯೋಗಾಕಾಂಕ್ಷಿಗಳಿಗೆ ಲಭ್ಯವಾಗಲಿದೆ.ಇದೊಂದು ಬೃಹತ್ ಉದ್ಯೋಗಮೇಳವಾಗಿದ್ದು ಮೂಡಬಿದಿರೆ ಪರಿಸರದಲ್ಲಿ ಈ ಮಟ್ಟದಲ್ಲಿ ಮೊತ್ತ ಮೊದಲ ಬಾರಿಗೆ ಇಂತಹ ಮೇಳ ಆಯೋಜಿಸಲಾಗುತ್ತಿದೆ.



9.30ಕ್ಕೆ ಚಾಲನೆ
ಉದ್ಯೋಗಮೇಳಕ್ಕೆ ಏಪ್ರಿಲ್9ಶನಿವಾರ ಬೆಳಗ್ಗೆ ಚಾಲನೆ ದೊರಕಲಿದೆ. ಬೆಳಗ್ಗೆ 9.30ಕ್ಕೆ ಉದ್ಯಮಿ ಡಾ.ಬಿ.ಆರ್ ಶೆಟ್ಟಿ ಉದ್ಯೋಗಮೇಳಕ್ಕೆ ಚಾಲನೆ ನೀಡಲಿದ್ದಾರೆ. ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ, ಶಾಸಕ ಕೆ.ಅಭಯಚಂದ್ರ ಜೈನ್ ಉಪಸ್ಥಿತರಿರುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ಎಂ.ಮೋಹನ ಆಳ್ವ ವಹಿಸಲಿದ್ದಾರೆ.


ರಾಜ್ಯದೆಲ್ಲೆಡೆಯಿಂದ ಉದ್ಯೋಗಾಕಾಂಕ್ಷಿಗಳು

ಆಳ್ವಾಸ್ ಪ್ರಗತಿ 2011ರಲ್ಲಿ ರಾಜ್ಯದ 20ಸಾವಿರಕ್ಕೂ ಮಿಕ್ಕಿದ ಉದ್ಯೋಗಾಕಾಂಕ್ಷಿಗಳು ಮೂರು ದಿನಗಳಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಮಂಗಳೂರು ವಿ.ವಿ,ವಿಶ್ವೇಶ್ವರಯ್ಯ ಟೆಕ್ನಾಲಜೀಸ್, ಕುವೆಂಪು ವಿ.ವಿ., ಮತ್ತು ರಾಜೀವಗಾಂಧಿ ವಿ.ವಿ.ಗಳ ಆಶ್ರಯದಲ್ಲಿ ಬರುವ ಕಾಲೇಜುಗಳ ವಿದ್ಯಾರ್ಥಿಗಳು ಈ ಮೇಳದಲ್ಲಿ ಭಾಗವಹಿಸುವರು.
ರಾಜ್ಯದ ಎಲ್ಲಾ ಜಿಲ್ಲೆಗಳಿಂದಲೂ ಉದ್ಯೋಗಾಕಾಂಕ್ಷಿಗಳು ಈಗಾಗಲೇ ನೋಂದಣಿ ನಡೆಸುತ್ತಿದ್ದು , ಉದ್ಯೋಗಾಕಾಂಕ್ಷಿಗಳ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.



ಇನ್ನೂ ನೋಂದಣಿಗೆ ಅವಕಾಶ
ಉದ್ಯೋಗಮೇಳದಲ್ಲಿ ಭಾಗವಹಿಸುವ ಉದ್ಯೋಗಾಕಾಂಕ್ಷಿಗಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಭಾವಚಿತ್ರ,ಸ್ವ ವಿವರ,ಸೂಕ್ತ ದಾಖಲೆಗಳೊಂದಿಗೆ ಸ್ಥಳದಲ್ಲೇ ನೋಂದಾವಣೆ ಮಾಡಬಹುದು. ಆನ್ ಲೈನ್, ಎಸ್.ಎಂ.ಎಸ್ ಮೂಲಕವೂ ನೋಂದಾವಣೆಗೆ ಅವಕಾಶ ಕಲ್ಪಿಸಲಾಗಿದೆ. ಪದವಿ ಪೂರೈಸಿದ, ಅಂತಿಮ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ, ಐ.ಟಿ.ಐ, ಪಾಲಿಟೆಕ್ನಿಕ್, ಇತರೆ ಡಿಪ್ಲೋಮಾ ಪದವಿ ಪೂರೈಸಿದ, ಹಾಗೂ ಅಂತಿಮವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾಥರ್ಿಗಳು ಈ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ.


ಆಳ್ವಾಸ್ ಎಜುಕೇಷನ್ ಫೌಂಡೇಷನ್ ಶಿಕ್ಷಣ ,ಸಾಹಿತ್ಯ,ಕಲೆ,ಸಂಸ್ಕೃತಿ, ಕ್ರೀಡಾ ಕ್ಷೇತ್ರಗಳಿಗೆ ಹೆಚ್ಚಿನ ಒತ್ತು ನೀಡುತ್ತಾ ಬಂದಿದೆ. ಆಳ್ವಾಸ್ ನುಡಿಸಿರಿ,ಆಳ್ವಾಸ್ ವಿರಾಸತ್ ಮೂಲಕ ಈಗಾಗಲೇ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಈ ಸಂಸ್ಥೆ ಇದೀಗ ಶಿಕ್ಷಣಕ್ಷೇತ್ರಕ್ಕೆ ಮತ್ತಷ್ಟು ಕೊಡುಗೆ ನೀಡುವ ನಿಟ್ಟಿನಲ್ಲಿ "ಉದ್ಯೋಗಮೇಳ"ವನ್ನು ಆಯೋಜಿಸುತ್ತಿರುವುದು ಗಮನಾರ್ಹ.
ಆಳ್ವಾಸ್ ಎಜುಕೇಷನ್ ಫೌಂಡೇಷನ್ 2009 -10ರ ಸಾಲಿನಲ್ಲಿ ಮೊದಲ ಬಾರಿಗೆ ಮೂಡಬಿದಿರೆಯಲ್ಲಿ ಪ್ರಗತಿ ಉದ್ಯೋಗಮೇಳವನ್ನು ಆಯೋಜಿಸಿತು. ಸುಮಾರು 38ಕಂಪೆನಿಗಳು ಭಾಗವಹಿಸಿದ್ದು 1500 ಹುದ್ದೆಗಳಿಗೆ ಆಯ್ಕೆನಡೆದಿತ್ತು. ಸಂಸ್ಥೆಯ 300 ವಿದ್ಯಾರ್ಥಿಗಳು ಈ ಮೇಳದಲ್ಲಿ ಉದ್ಯೋಗಪಡೆಯುವಲ್ಲಿ ಯಶಸ್ವಿಯಾಗಿದ್ದರು. ಸುಮಾರು 3,500 ವಿದ್ಯಾರ್ಥಿಗಳು ವಿವಿಧೆಡೆಗಳಿಂದ ಈ ಮೇಳದಲ್ಲಿ ಭಾಗವಹಿಸಿ ಪ್ರಯೋಜನ ಪಡೆದಿದ್ದರು. ಈ ಮೇಳದ ಯಶಸ್ಸಿನ ಬೆನ್ನಲ್ಲೇ ಈ ಬಾರಿ ದೊಡ್ಡ ಮಟ್ಟದಲ್ಲಿ ಉದ್ಯೋಗಮೇಳ ಆಯೋಜಿಸಲಾಗುತ್ತಿದೆ. ಅತ್ಯಂತ ವ್ಯವಸ್ಥಿತವಾಗಿ, ಶಿಸ್ತುಬದ್ಧವಾಗಿ, ಸಂಪೂರ್ಣ ಉಚಿತವಾಗಿ ಈ ಮೇಳ ನಡೆಯಲಿದ್ದು, ಉದ್ಯೋಗಾಕಾಂಕ್ಷಿಗಳ ಆಯ್ಕೆಗನುಗುಣವಾದಂತಹ ಉದ್ಯೋಗ ಕಲ್ಪಿಸುವ ಕಾರ್ಯಕ್ರಮ ಇದಾಗಲಿದೆ.

1 comments:

Anonymous said...

All the best for ALVAS PRAGATHI 2011.. prajwal..

Post a Comment