ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಆಳ್ವಾಸ್ ಪ್ರಗತಿ - 2011 ಸಮಾಪ್ತಿಆಳ್ವಾಸ್ ಎಜುಕೇಷನ್ ಫೌಂಡೇಷನ್ ಅಧ್ಯಕ್ಷ ಡಾ.ಎಂ.ಮೋಹನ ಆಳ್ವರ ಮಾರ್ಗದರ್ಶನದಲ್ಲಿ ಆಳ್ವಾಸ್ ಪ್ರಗತಿ - 2011 ಯಶಸ್ವಿಯಾದ ಹರ್ಷದಲ್ಲಿ ಟೀಂ ಪ್ರಗತಿ. (ಎಡದಿಂದ ಬಲಕ್ಕೆ )ಪ್ಲೇಸ್ ಮೆಂಟ್ ಆಫೀಸರ್ ಅಮಿತ್ ಶೆಟ್ಟಿ, ಟೇಲೆಂಟ್ ಕ್ಯಾಪಿಟಲ್ ಕನೆಕ್ಟ್ ಮುಖ್ಯಸ್ಥ ಗಂಗಾಧರ್, ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಕುರಿಯನ್, ಆಳ್ವಾಸ್ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಹರೀಶ್ ಕೆ.ಆದೂರು, ಆಳ್ವಾಸ್ ಎಜುಕೇಷನ್ ಫೌಂಡೇಷನ್ ಟ್ರಸ್ಟಿ ವಿವೇಕ್ ಆಳ್ವ, ಪ್ಲೇಸ್ ಮೆಂಟ್ ಆಫೀಸರ್ ಸ್ಮಿತಾ ಐತಾಳ್ ಹಾಗೂ ಆಳ್ವಾಸ್ ಎಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ ದೀಪಕ್.


ಮೂಡಬಿದಿರೆ: ಆಳ್ವಾಸ್ ಪ್ರಗತಿ - 2011 ಸೋಮವಾರ ಸಾಯಂಕಾಲ ಸಮಾಪ್ತಿಗೊಂಡಿತು.3,500ಮಂದಿ ಉದ್ಯೋಗಮೇಳದಲ್ಲಿ ಉದ್ಯೋಗ ಪಡೆದು ಸಂತಸದಿಂದ ಮರಳಿದರು.
ನೆರೆಯ ಕೇರಳದ ಕಾಸರಗೋಡು ಸೇರಿದಂತೆ ಕರ್ನಾಟಕದ ಬಹುತೇಕ ಜಿಲ್ಲೆಗಳಿಂದ ಮೂರೂದಿನಗಳ ಕಾಲ ಅತ್ಯಧಿಕ ಸಂಖ್ಯೆಯಲ್ಲಿ ಉದ್ಯೋಗಾಕಾಂಕ್ಷಿಗಳು ಆಗಮಿಸಿದ್ದರು. ಉದ್ಯೋಗಮೇಳದ ಕೊನೆಯ ದಿನವಾದ ಸೋಮವಾರವೂ ಉದ್ಯೋಗಾಕಾಂಕ್ಷಿಗಳು ಅತ್ಯಧಿಕ ಸಂಖ್ಯೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು.

ಶಿಕ್ಷಣ ಸಂಸ್ಥೆಯೊಂದು ಸಮಾಜಿಕ ಕಳಕಳಿಹೊಂದಿ, ಅತ್ಯಂತ ವ್ಯವಸ್ಥಿತವಾಗಿ ಬೃಹತ್ ಸಂಖ್ಯೆಯಲ್ಲಿ ವಿವಿಧ ಸ್ತರಗಳ ಕಂಪೆನಿಗಳನ್ನು ಹೋಬಳಿ ಮಟ್ಟದ ಮೂಡುಬಿದಿರೆಗೆ ಕರೆತಂದು ಒಂದೇ ಸೂರಿನಡಿ ಎಲ್ಲಾರೀತಿಯ ಉದ್ಯೋಗಾವಕಾಶಗಳು ಉದ್ಯೋಗಾಕಾಂಕ್ಷಿಗಳಿಗೆ ದೊರಕುವಂತೆ ಸಂಘಟಿಸಿದ್ದು ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.

ಕೇವಲ ಆಳ್ವಾಸ್ ಸಂಸ್ಥೆಯಷ್ಟೇ ಅಲ್ಲದೆ, ರಾಜ್ಯದಾದ್ಯಂತದಿಂದ ಬಂದಂತಹ ಇತರ ವಿದ್ಯಾಸಂಸ್ಥೆಗಳಲ್ಲಿ ವಿದ್ಯಾರ್ಜನೆ ಗೈದ ವಿದ್ಯಾರ್ಥಿಗಳಿಗೂ ಸಂಪೂರ್ಣ ಉಚಿತ ಪ್ರವೇಶಾವಕಾಶ ಕಲ್ಪಿಸಿದ್ದು ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.

ಇನ್ನಷ್ಟು ವ್ಯವಸ್ಥಿತ

ಉದ್ಯೋಗಮೇಳವನ್ನು ಇನ್ನಷ್ಟು ವ್ಯವಸ್ಥಿತವಾಗಿ ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ರೀತಿಯಲ್ಲಿ ಸಂಘಟಿಸು ಇರಾದೆ ಆಳ್ವಾಸ್ ಸಮೂಹ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ ಆಳ್ವರದ್ದು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿರುವ ಪ್ಲೇಸ್ ಮೆಂಟ್ ಸೆಲ್ ಮೂಲಕ ನಿರಂತರವಾಗಿ ವಿವಿಧ ಕಂಪೆನಿಗಳ ಸಂಪರ್ಕದೊಂದಿಗೆ ವರ್ಷದುದ್ದಕ್ಕೂ ಆಯ್ಕೆ ಪ್ರಕ್ರಿಯೆ ನಡೆಸುವ ಬಗ್ಗೆ ರೂಪುರೇಷೆ ಸಿದ್ಧಪಡಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ತಿಳಿಸಿದ್ದಾರೆ. ಈಗಾಗಲೇ ಆಳ್ವಾಸ್ ನುಡಿಸಿರಿ, ಆಳ್ವಾಸ್ ವಿರಾಸತ್ ನಂತಹ ರಾಜ್ಯ, ರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿ ನಡೆಸಿಕೊಂಡು ಬಂದ ಆಳ್ವಾಸ್ ಸಂಸ್ಥೆಯು ಮುಂದಿನ ದಿನಗಳಲ್ಲಿ "ಆಳ್ವಾಸ್ ಪ್ರಗತಿ" ಉದ್ಯೋಗಮೇಳವನ್ನು ವರ್ಷಂಪ್ರತಿ ರಾಜ್ಯಮಟ್ಟದಲ್ಲಿ ಸಂಘಟಿಸಲಿದೆ ಎಂದು ಹೇಳಿದರು.

ತೃಪ್ತಿ ತಂದಿದೆ : ಡಾ.ಆಳ್ವ

ಆಳ್ವಾಸ್ ಪ್ರಗತಿ ಉದ್ಯೋಗ ಮೇಳ ತೃಪ್ತಿ ತಂದಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ತಿಳಿಸಿದ್ದಾರೆ. ಶಿಕ್ಷಣ ಸಂಸ್ಥೆಯೊಂದು ಪರಿಪೂರ್ಣ ಎನಿಸಬೇಕಾದರೆ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ವಿದ್ಯಾಥರ್ಿಗಳ ಭವಿಷ್ಯಕ್ಕೆ ಪೂರಕವಾದಂತ ಉದ್ಯೋಗ ಭದ್ರತೆಯನ್ನು ನೀಡಿದಾಗ ಮಾತ್ರ; ಆ ಕಾರ್ಯವನ್ನು ನಮ್ಮ ಸಂಸ್ಥೆ ಮಾಡುತ್ತಿರುವುದು ನಿಜಕ್ಕೂ ತೃಪ್ತಿ ತಂದಿದೆ ಎಂದು ಡಾ.ಆಳ್ವ ತನ್ನ ಮನದಾಳದ ಮಾತುಗಳನ್ನಾಡಿದರು.


ಉದ್ಯೋಗ ವಿವರಗಳು
ಮೊದಲ ದಿನ : 1664
ದ್ವಿತೀಯ ದಿನ : 1256
ತೃತೀಯ ದಿನ : 580
ಒಟ್ಟು : 3500


ಉತ್ಪಾದನಾ ವಿಭಾಗ : 436
ಫಿನಾನ್ಸ್/ ಇನ್ಶ್ಯೂರೆನ್ಸ್ : 62
ಐ.ಟಿ. : 322
ರೀಟೈಲ್ : 415
ಹಾಸ್ಟಿಟಲ್ / ಹಾಸ್ಟಿಟಾಲಿಟಿ : 553
ಮಾನವ ಸಂಪನ್ಮೂಲ (ಎಚ್.ಆರ್) : 72
ಕೆ.ಪಿ.ಒ : 616
ಬಿ.ಪಿ.ಒ. 1024

ವಿದೇಶದಲ್ಲಿ ಉದ್ಯೋಗಾವಕಾಶ ಪಡಕೊಂಡವರು : 32


ಮಂಗಳೂರಿನ ಮೊತ್ತ ಮೊದಲ ಕನ್ನಡ ಅಂತರ್ಜಾಲ ಸುದ್ದಿತಾಣ ಈ ಕನಸು.ಕಾಂ ಈ ರಾಜ್ಯಮಟ್ಟದ ಉದ್ಯೋಗಮೇಳದ ಮಾಧ್ಯಮ ಸಹಭಾಗಿತ್ವವನ್ನು ವಹಿಸಿತ್ತು.

1 comments:

Rekha B.Shetty said...

well done keep it up

Post a Comment