ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
3:13 PM

ವೀರಭದ್ರಾಸನ -3

Posted by ekanasu

ವೈವಿಧ್ಯ

ಈ ಆಸನಕ್ಕೆ ಪರಮೇಶ್ವರನ ಕೋಪದಿಂದ ಆವಿರ್ಭವಿಸಿದ ವೀರಭದ್ರ ಸ್ವಾಮಿಯ ಹೆಸರನ್ನು ಇಡಲಾಗಿದೆ. ಹಾಗೂ ಶಿವನ ಜಡೆಯ ಬಡಿತದಿಂದುದಿಸಿದ ವೀರಭದ್ರ ದೇವರ ಹೆಸರಿನಿಂದ ಈ ಆಸನ ಪ್ರಸಿದ್ಧವಾಗಿದೆ.ಅಭ್ಯಾಸಕ್ರಮ

ತಾಡಾಸನ ಸ್ಥಿತಿಗೆ ಬರಬೇಕು. ಉಸಿರನ್ನು ತೆಗೆದುಕೊಳ್ಳುತ್ತಾ ಎರಡು ಕೈಗಳನ್ನು ತಲೆಯ ಮೇಲೆ ಜೋಡಣೆ ಮಾಡಬೇಕು. ಆಮೇಲೆ ಸಮ ಉಸಿರಾಟದಲ್ಲಿ 2 ರಿಂದ 3 ಅಡಿಯಷ್ಟು ಕಾಲುಗಳನ್ನು ಅಗಲಿಸಿ ನಿಲ್ಲಬೇಕು. ಬಲಕಾಲನ್ನು 90ಡಿಗ್ರಿಗಳಷ್ಟು ತಿರುಗಿಸಿ, ಎಡಗಾಲನ್ನು ಸ್ವಲ್ಪ ಒಳಗಡೆ ಮಾಡಬೇಕು. ಆಮೇಲೆ ಉಸಿರನ್ನು ಬಿಡುತ್ತಾ ಬಲಮಂಡಿಯನ್ನು ಬಾಗಿಸಿ ನೆಲಕ್ಕೆ ಲಂಬವಾಗಿರುವಂತೆ ಜೋಡಿಸಿಟ್ಟ ಕೈಗಳನ್ನು ನೋಡಬೇಕು. ಎಡಕಾಲು ನೇರವಾಗಿರಬೇಕು. (ಚಿತ್ರದಲ್ಲಿರುವಂತೆ) ಈ ಸ್ಥಿತಿಯಲ್ಲಿ ಸುಮಾರು 20 ಸೆಕೆಂಡುಗಳ ಕಾಲ ಸಮ ಉಸಿರಾಟ ನಡೆಸುತ್ತಾ, ಇರಬೇಕು. ಮತ್ತು ಇದೇ ಭಂಗಿಯನ್ನು ಎಡಬದಿಯಲ್ಲಿ ಬಲಬದಿಯ ವಿಧಾನದಂತೆ ಅಭ್ಯಾಸ ಮಾಡಬೇಕು. ಅನಂತರ ವಿಶ್ರಾಂತಿ.

ಉಪಯೋಗಗಳು
ಈ ಆಸನದ ಅಭ್ಯಾಸದಿಂದ ಎದೆಯ ಭಾಗಕ್ಕೆ ಮತ್ತು ಕುತ್ತಿಗೆಗೆ ಮೃದುವಾದ ವ್ಯಾಯಾಮ ದೊರಕುತ್ತದೆ. ಹಾಗೂ ತೋಳುಗಳ, ಭುಜಗಳ ಮತ್ತು ಕಾಲುಗಳ ಪಡೆಸುತನ ಹೋಗಲಾಡಿಸುತ್ತದೆ. ಗರ್ಭಿಣಿ ಸ್ತ್ರೀಯರ ಸುಲಭ ಪ್ರಸವಕ್ಕೆ ಈ ಆಸನ ಬಹಳ ಸಹಾಯಕಾರಿಯಾಗುತ್ತದೆ. ಕೈ ಮತ್ತು ಕಾಲಿನ ನರಗಳ ಸೆಳೆತ ನಿವಾರಣೆಯಾಗುತ್ತದೆ.


- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ,

0 comments:

Post a Comment