ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಆಟ - ಅವಲೋಕನ
ಮೊದಲ ವಿಕೆಟ್ ಪತನ...ಸಂತಸದಲ್ಲಿ ಭಾರತ ತಂಡ.

ಬೆಂಗಳೂರು/ಮಂಗಳೂರು: ಸರ್ವರ ಕಾತರದ ವಿಶ್ವಕಪ್ ಫೈನಲ್ ಪಂದ್ಯ ಪ್ರಾರಂಭಗೊಂಡಿದೆ. ಎರಡು ಬಾರಿ ಟಾಸ್, ಕೈಕೊಟ್ಟ ಬ್ಯಾಟ್...ಅಂತೂ ಇಂತೂ ಫೈನಲ್ ಕ್ರಿಕೆಟ್ ಪಂದ್ಯಾಟ ನಡೆಯುತ್ತಿದೆ. ಕ್ರಿಕೆಟ್ ಪಂದ್ಯಾಟದಲ್ಲಿ ಭಾರತ ಫೀಲ್ಡಿಂಗ್ ನಡೆಸುತ್ತಿದ್ದು ಉತ್ತಮ ಕ್ಷೇತ್ರ ನಿರ್ವಹಣೆ ತೋರುತ್ತಿದೆ. ಶ್ರೀಲಂಕಾ ತಂಡದ ನಾಯಕ ನಾಯಕ ಕುಮಾರ ಸಂಗಕ್ಕಾರ ಅವರು ಟಾಸ್ ಗೆದ್ದಿದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಮೊದಲನೇ ಬಾರಿ ಸಂಗಕ್ಕಾರ ಏನು ಹೇಳಿದ್ದಾರೆ ಎಂದು ತಿಳಿಯದೆ ಎರಡನೇ ಬಾರಿ ವಿಶೇಷ ನಾಣ್ಯವನ್ನು ಚಿಮ್ಮಯಾಯಿತು. ಎರಡನೇ ಬಾರಿ ವಿಶೇಷ ಟಾಸ್ ನಲ್ಲಿ ಗೆದ್ದಿದ್ದು ಶ್ರೀಲಂಕಾ ಹಾಗೂ ಶ್ರೀಲಂಕಾ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.
ಆದರೆ ಅತ್ಯಂತ ಜಾಗರೂಕತೆಯ ಆಟವನ್ನು ಶ್ರೀಲಂಕಾ ತಂಡ ನಡೆಸುತ್ತಿದೆ.

ಎಲ್ಲರ ದೃಷ್ಠಿ ಟಿ.ವಿಯತ್ತ...
ಇಡೀ ವಿಶ್ವವೇ ಇಂದು ಟಿ.ವಿಯತ್ತ ಇದೆಯೋ ಎಂಬಂತಾಗಿದೆ. ಉಸಿರು ಬಿಗಿಹಿಡಿದು ಇಂದು ಕ್ರಿಕೆಟ್ ನೋಡುವ ದೃಶ್ಯ ಸಾಮಾನ್ಯವಾಗಿದೆ. ಪ್ರತಿಯೊಂದು ಮನೆ, ಅಂಗಡಿಯೊಳಗಿನ ಟಿ.ವಿ.ಮುಂದೆ ಜನ ಜಮಾಯಿಸಿದ್ದಾರೆ.ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಯಾರ ಕೊರಳಿಗೆ ವಿಜಯಲಕ್ಷ್ಮೀ ಹಾರ ಹಾಕುವಳೋ ಎಂಬ ಕಾತರ, ಕುತೂಹಲ ಕ್ರಿಕೆಟ್ ಪ್ರೇಮಿಗಳದ್ದಾಗಿದೆ.
ಒಟ್ಟಿನಲ್ಲಿ ವಿಶ್ವಕಪ್ ಕ್ರಿಕೆಟ್ ಪಂದ್ಯ ಹತ್ತಾರು ಕುತೂಹಲದೊಂದಿಗೆ ಮುಂದುವರಿದಿದೆ.

ಬೆಟ್ಟಿಂಗ್ ಭರಾಟೆ
ಫೈನಲ್ ಪಂದ್ಯ ಆರಂಭಗೊಳ್ಳುತ್ತಿದ್ದಂತೆಯೇ ಬೆಟ್ಟಿಂಗ್ ಭರಾಟೆ ಜೋರಾಗಿದೆ. ಅತ್ಯಂತ ಕನಿಷ್ಠಮೊತ್ತದಿಂದ ಮೊದಲ್ಗೊಂಡು ಗರಿಷ್ಠಮೊತ್ತದ ತನಕದ ಬೆಟ್ಟಿಂಗ್ ನಡೆಯುತ್ತಿದೆ.

0 comments:

Post a Comment