ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಸಾಹಿತ್ಯ

ಜೀವನದ ಒಂದು ಹಂತದಲಿ
ಸ್ನೇಹ ಉಳಿಯಿತು ಕೇವಲ ನೆನಪಿನಲಿ
ಹಳೆಯ ಸ್ನೇಹದ ನೆನಪಾಯಿತು
ಸುಮ್ಮನೆ ಕಣ್ಣಲಿ ನೀರು ಹರಿಯಿತು
ಇಬ್ಬರ ಬಾಯಲಿ ಎಂಜಿಲ ತುತ್ತು
ಸ್ನೇಹದ ಕಡಲಲಿ ನೆನಪಿನ ಮುತ್ತು
ಆ ದಿನಗಳು ಮತ್ತೆ ಬರುವುದಿಲ್ಲ...


ಆ ಸಂತಸ ಮತ್ತೆ ತರುವುದಿಲ್ಲ
ನನ್ನನ್ನು ಅರ್ಥಮಾಡಿಕೊಂಡವರು
ನನ್ನ ಉಸಿರಾಗಿದ್ದವರು
ಹಗಲಿರುಳು ಜೊತೆಗಿದ್ದವರು
ಎಲ್ಲಕ್ಕಿಂತ ಮಿಗಿಲಾಗಿದ್ದವರು
ಬದುಕಿನ ರಥವನು ಹತ್ತಿ
ಕಾಲದ ಸುಳಿಯಲಿ ಸಿಲುಕಿ
ತೇಲಿ ಹೋದರು, ನನ್ನ ಸ್ನೇಹಿತರು
ಕಣ್ಣಿಲ್ಲದವನು ಕುರುಡ
ಸ್ನೇಹಿತರಿಲ್ಲದವನು ಅನಾಥ.

- ಜಬೀವುಲ್ಲಾ ಖಾನ್

0 comments:

Post a Comment