ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಮೊದಲ ದಿನವೇ 1664ಹುದ್ದೆಗಳಿಗೆ ಆಯ್ಕೆ




ಮೂಡಬಿದಿರೆ: ಆಳ್ವಾಸ್ ಎಜುಕೇಷನ್ ಫೌಂಡೇಷನ್ ಆಶ್ರಯದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಉದ್ಯೋಗ ಮೇಳ ಆಳ್ವಾಸ್ ಪ್ರಗತಿ - 2011 ಕ್ಕೆ ರಾಜ್ಯದೆಲ್ಲೆಡೆಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಿಂದ ಉದ್ಯೋಗಾಕಾಂಕ್ಷಿಗಳು ಆಗಮಿಸಿದ್ದು ಮೊದಲ ದಿನದಂದು ಮಂದಿ 1664ಮಂದಿ ವಿವಿಧ ಕ್ಷೇತ್ರಗಳಲ್ಲಿ ಆಯ್ಕೆಗೊಂಡಿದ್ದಾರೆ. ಬೆಂಗಳೂರು, ಬಾಗಲಕೋಟೆ,ಬಳ್ಳಾರಿ ಸೇರಿದಂತೆ ಕನರ್ಾಟಕದ ವಿವಿಧ ಜಿಲ್ಲೆಗಳಿಂದ ಉದ್ಯೋಗಮೇಳದಲ್ಲಿ ಭಾಗವಹಿಸಿದ್ದಾರೆ.


ಉದ್ಯೋಗಮೇಳದಲ್ಲಿ ಸುಮಾರು 15,500ಸಾವಿರದಷ್ಟು ಬೃಹತ್ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಮೊದಲ ದಿನ ಭಾಗವಹಿಸಿದ್ದು ಈ ಪೈಕಿ ಸುಮಾರು8ಸಾವಿರದಷ್ಟು ಮಹಿಳೆಯರು.ಹಾಗೂ 7ಸಾವಿರದಷ್ಟು ಪುರಷ ಪ್ರತಿನಿಧಿಗಳು ಭಾಗವಹಿಸಿದ್ದಾರೆ.
ಬ್ಯಾಂಕಿಂಗ್, ವೈದ್ಯಕೀಯ, ಎಂಜಿನಿಯರಿಂಗ್, ಬಿ.ಪಿ.ಒ, ಕೆ.ಪಿ.ಒ, ಐ.ಟಿ, ಇನ್ಶೂರೆನ್ಸ್, ಅಟೋಮೊಬೈಲ್ ಸೇಲ್ಸ್ ಸೇರಿದಂತೆ ವಿವಿಧ ಸ್ತರದ ಸುಮಾರು 147ಕಂಪೆನಿಗಳು ಉದ್ಯೋಗಮೇಳಲ್ಲಿ ಭಾಗವಹಿಸಿ ವಿವಿಧ ರೀತಿಯಲ್ಲಿ ಸಂದರ್ಶನ ಕಾರ್ಯ ನಡೆಸಿ ಆಯ್ಕೆ ನಡೆಸುತ್ತಿದೆ.
ಎಂಫಸಿಸ್, ಯು.ಎ.ಇ.ಎಕ್ಸ್ಚೇಂಜ್, ಇನ್ಫೋಸಿಸ್, ದಿಯಾಟೆಕ್, ಕೊಟಕ್ ಮಹೀಂದ್ರಾ, ಆಕ್ಸಸ್ ಬ್ಯಾಂಕ್, ಎಂ.ಸಿ.ಎಫ್, ಐ.ಬಿ.ಎಂ, ವಿಪ್ರೋ,ಸುಝಲೋನ್,ಟೆಕ್ ಮಹೀಂದ್ರಾ ಮೊದಲಾದ ಪ್ರತಿಷ್ಠಿತ ಕಂಪೆನಿಗಳು ಈ ಮೇಳದಲ್ಲಿ ಭಾಗವಹಿಸಿವೆ. ಒಟ್ಟು 4000ಕ್ಕೂ ಮಿಕ್ಕಿದ ಉದ್ಯೋಗಾವಕಾಶ ಉದ್ಯೋಗಾಕಾಂಕ್ಷಿಗಳಿಗೆ ಲಭ್ಯವಾಗಲಿದೆ.


ಇದೊಂದು ಬೃಹತ್ ಉದ್ಯೋಗಮೇಳವಾಗಿದ್ದು ಮೂಡಬಿದಿರೆ ಪರಿಸರದಲ್ಲಿ ಈ ಮಟ್ಟದಲ್ಲಿ ಮೊತ್ತ ಮೊದಲ ಬಾರಿಗೆ ಇಂತಹ ಮೇಳ ಆಯೋಜಿಸಲಾಗುತ್ತಿದೆ.
ಐ.ಬಿ.ಎಂ, ಟಿ.ಎನ್.ಟಿ, ಕ್ಯಾಡ್ಬರಿ, ಸೌತ್ ಇಂಡಿಯನ್ ಬ್ಯಾಂಕ್ ಮೊದಲಾದ ಪ್ರತಿಷ್ಠಿತ ಕಂಪೆನಿಗಳು ದ್ವಿತೀಯ ದಿನದ ಉದ್ಯೋಗಮೇಳದಲ್ಲಿ ಭಾಗವಹಿಸಲಿವೆ.

0 comments:

Post a Comment