ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ

ಉಡುಪಿ : ಪಾಪ ನಾಶಿನಿ ಎಂದೇ ಗುರುತಿಸಿಕೊಂಡ ಬೈಂದೂರು ವಿಧಾನ ಸಭಾ ಕ್ಷೇತ್ರದ ಜನರ ಜೀವನಾಡಿ ಕೊಲ್ಲೂರು ಸೌಪರ್ಣಿಕಾ ನದಿ ಶಾಪವಾಗಲಿದ್ದಾಳೆ... ಹೊಸ ಹೊಸ ಯೋಜನೆಗಳ ಪರಿಣಾಮ ಸೌಪರ್ಣಿಕಾ ಇನ್ನು ಹರಿಯೋದಿಲ್ಲ! ನಿಲ್ಲುತ್ತಾಳೆ!
ಮಳೆಗಾಲದಲ್ಲಿ ಮದಗಜ ಗಾಮಿನಿಯಾಗುವ ಸೌಪರ್ಣಿಕಾ ನದಿ ಕಡು ಬೇಸಿಗೆಯಲ್ಲಿ ಬಸವಹುಳುವಿನ ಹಾಗೆ ವಳುತ್ತಾಳೆ. ಕೊಡಚಾದ್ರಿ ತಟದಲ್ಲಿ ಹುಟ್ಟಿ ಅರಬ್ಬೀ ಸಮುದ್ರ ಸೇರುವ ಸೌಪರ್ಣಿಕಾ ನದಿ ನಂಬಿದವರಿಗೆ ಪಾಪ ನಾಶಿನಿ. ಆಯುರ್ವೇದ ತಿಳಿದೋರಿಗೆ ರೋಗ ಪರಿಹಾರಿಣಿ. ಇದೆಲ್ಲಕ್ಕೂ ಮಿಗಿಲಾಗಿ ಸೌಪರ್ಣಿಕಾ ನೂರಾರು ಹೆಕ್ಟೇರ್ ಹೊಲಕ್ಕೆ ನೀರುಣಿಸುತ್ತಾಳೆ. ಸಹಸ್ರಾರು ಮಂದಿಗೆ ಜೀವ ಜಲ, ವೈವಿದ್ಯ ಜಲಚರಗಳ ಆವಾಸಸ್ಥ್ಥಾ ಸೌಪರ್ಣಿಕಾ ನದಿ ಮುಂದಿನ ದಿನದಲ್ಲಿ ಹರಿಯೋದಿಲ್ಲಅಂದರೆ ಅಚ್ಚರಿ ಪಡಬೇಕಾಗಿಲ್ಲ.. ಆಲೂರು ಸಮೀಪ ಗುಂಡೂರಿನಲ್ಲಿ ಎಳುವ ಆಣೆಕಟ್ಟು ಮತ್ತು ಚೆಕ್ ಡ್ಯಾಂಮ್ ಅಡಾವುಡಿಗೆ ಸೌರ್ಪಣಿಕೆ ನದಿ ಸಮುದ್ರ ಸೇರೋದು ಕಷ್ಟ!ಮಶ್ಚಿಮ ಘಟ್ಟದಿಂದ ಅರಬ್ಬೀ ಸಮುದ್ರ ಸೇರೋಗುಂಟ ಪರಿಸರದಲ್ಲಿ ವೈಚಿತ್ರಗಳನ್ನು ಸೃಷ್ಟಿಸಿದ ಸೌರ್ಪಣಿಕೆ ಡ್ಯಾಂಮ್ ನಿರ್ಮಾಣದಿಂದ ಹಳ್ಳಹತ್ತಲಿದೆ. ಅದೆಲ್ಲಕ್ಕಿಂತಲೂ ಮುಗಿಲಾಗಿ ಪಸ್ಚಿಮ ಘಟ್ಟದ ಬುಡದಲ್ಲಿ ಹಿನ್ನೇರು ಶೇಖರಣೆಯಿಂದ ಇಡೀ ಘಟ್ಟದ ಬುಡಕ್ಕೆ ಗಂಡಾಂತರ ಕಟ್ಟಿಟ್ಟ ಬುತ್ತಿ.

ಏಳಲಿದೆ ಡ್ಯಾಂ
ಸುಮಾರು 52 ಕೋಟಿ ರೂ. ವೆಚ್ಚದಲ್ಲಿ ಡ್ಯಾಂಮ್ ತೆಲೆಯೆತ್ತಲಿದೆ. ವರಾಹಿ ನಿರಾವರಿ ಯೋಜನೆ ಇಲಾಖೆ ಡ್ಯಾಂಮ್ ದೇಖಾರೇಖೆಗೆ ನಿಂತಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದ್ದಿದ್ದು, ಕಾಮಗಾರಿ ಕೂಡಾ ಚಾಲೂ ಆಗಿದೆ. ಕಾಮಗಾರಿಯ ಹಿನ್ನೆಲೆಯಲ್ಲಿ ಬಂಡೆಗಳ ಒಡೆಯಲು ಉಪಯೋಗಿಸುವ ಸ್ಪೋಟದ ಸದ್ದಿಗೆ ಪಶು,ಪ್ರಾಣಿ, ಮಕ್ಷಿಗಳು ದಿಕ್ಕಾಪಾಲು.

ಹಿಂದೊಮ್ಮೆ ಸೌಪರ್ಣಿಕಾ ನದಿಗೆ ಡ್ಯಾಂಮ್ ಕಟ್ಟವ ಕೆಲಸವನ್ನು ಸಣ್ಣ ನೀರಾವರಿ ಇಲಾಖೆ ಕೈಗೆತ್ತಿಕೊಂಡಿತ್ತು. ಡ್ಯಾಂಮ್ ಹಿನ್ನೀರು ಕೊಲ್ಲೂರು ದೇವಸ್ಥಾನಕ್ಕೂ ಅಪಾಯ ತರಲಿದೆ ಎಂಬ ಹಿನ್ನೆಲೆಯಲ್ಲಿ ಕಾಮಗಾರಿ ಹೆಲ್ಡ್ಅಫ್ ಆಗಿತ್ತು. ಪ್ರಸಕ್ತ ವರಾಹಿ ನಿರಾವರಿ ಇಲಾಖೆ ಗಫ್ಚುಪ್ಪಾಗಿ ಸರ್ವೇ ನಡೆಸಿ, ಪರಿಸರದ ನಾಗರಿಕರಿಗೂ ಮಾಹಿತಿ ನೀಡದೆ ಕಾಮಗಾರಿಗೆ ಹಸಿರು ನಿಶಾನೆ ನೀಡಿದೆ.

ಸುಮಾರು 18 ಮಿಟರ್ ಎತ್ತರ ನಿರ್ಮಾಣವಾಗುವ ಆಣೆಕಟ್ಟು ಗುಂಡೂರಿನಿಂದ ಹಿಡಿದು ಜಡಕಲ್, ಕೊಲ್ಲೂರು ವರಗೆ ಹಿನ್ನೀರಿನ ದಾಂಗುಡಿ ಇಡಲಿದೆ ಎನ್ನೋದು ಪರಿಸರ ಪ್ರೇಮಿಗಳ ವಾದ. ಡ್ಯಾಂಮ್ ಹಿನ್ನೀರು ಪಶ್ಚಿಮ ಘಟ್ಟದ ಮಡಿಲಲ್ಲಿ ಬರುವ ಅಪೂರ್ವ ದೃಶ್ಯಾವಳಿಗಳಿಗೆ ತಿಲಾಂಜಲಿ ಇಡಲಿದೋ ಅನ್ನೋದು ನಿರ್ವಿವಾದ.
ಆಣೆಕಟ್ಟಿನ ಹಿಂದೆ ಬೈಂದೂರು ಪರಿಸರದ ನೀರಿನ ದಾಹ ತಣಿಸುವ ಉದ್ದೇಶವಿದೆ. ಜೊತೆಗೆ ವಿದ್ಯುತ್ ಉತ್ಪಾದನೆಗೂ ಅವಕಾಶವಿದೆ. ಆದರೆ ಹಸಿರು ಮನೆಯನ್ನ ಮಣ್ಣು ಮಾಡಿ ಪಶ್ಚಿಮ ಘಟ್ಟದ ಅಸ್ತಿತ್ವವನ್ನೇ ಅಲುಗಾಡಿಸುವ ಈ ಯೋಜನೆ ಎಷ್ಟು ಸಮಂಜಸ ಎನ್ನೋ ಪ್ರಶ್ನೆ ಪ್ರಸಕ್ತ ಹುಟ್ಟಿಕೊಂಡಿದೆ.

ಸರ್ವನಾಶವಾಗಲಿದೆ ಪರಿಸರ
ಆಣೆಕಟ್ಟು ಕಟ್ಟೋದ್ರಿಂದ ಪರಿಸರ ಎಕ್ಕುಟ್ಟು ಹೋಗಲಿದೆ. ನೂರಾರು ಎಕ್ರೆ ಪ್ರದೇಶಕ್ಕೆ ನೀರುಣಿಸುತ್ತದೆ ಡ್ಯಾಂಮ್ ಎನ್ನಲಾದರೂ ಅಷ್ಟ ಸಂಖ್ಯೆ ಅರಣ್ಯವನ್ನು ಆಪೋಷನ ಮಾಡಲಿದೆ. ಅದೆಲ್ಲಕ್ಕಿಂತ ದೊಡ್ಡ ಅಪಾಯವೆಂದರೆ ಪಶ್ಚಿಮ ಘಟ್ಟದಲ್ಲಿರುವ ಸೂಕ್ಷ್ಮ ಜೀವಗಳ ಮಾರಣ ಹೋಮ ನಡೆಯಲಿದೆ. ನದಿ ಬದಿಯ ಊರುಗಳು ಮುಳುಗಡೆಯಾಗಲಿದೆ. ಹಾಗಾಗಿ ಮುಳುಗಡೆಯಾಗುವ ಜಾಗವೆಷ್ಟು, ಹಾಳಾಗುವ ಹಸಿರೆಷ್ಟು, ಹಿನ್ನೀರಿನ ಪ್ರನಾಣವೆಷ್ಟು ಎನ್ನೋ ಮಾಹಿತಿ ಸಿಗೋದಿಲ್ಲ. ಇಲಾಖೆ ಅಕಾರಿಗಳನ್ನು ಕೇಳಿದರೆ ಅವರು ಜಾಣಕುರುಡರ ಹಾಗೆ ವರ್ತಿಸುತ್ತಾರೆ. ಒಂದೆಡೆ ಹಸಿರು ಕವಚ ರಚಿಸುವ ಯೋಜನೆ ಅದರ ಬೆನ್ನಲ್ಲೇ ಹಸಿರನ್ನು ಉಸಿರು ಕಟ್ಟಿ ಕೊಲ್ಲುವ ಕಾಯಕ ಒಟ್ಟಾರೆ ಪ್ರಕೃತಿ ನಮ್ಮ ಆಟದ ಬೊಂಬೆ.

ಆಣೆಕಟ್ಟಿನ ಹಿನ್ನೀರಿನಿಂದ ತಂಪೂ ತಂಪೂ ಕೂಲ್ ಕೂಲ್ ಆನೆಝರಿ ಮುಳುಗಡೆಯಾಗುತ್ತದೆ. ಮೇಗಣಿ, ಮಾವಿನಕಾರು, ಮೊದಲಾದ ಪ್ರದೇಶಕ್ಕೆ ಸಂಚಕಾರ. ಇದರೊಟ್ಟಿಗೆ ಜಡ್ಕಲ್ ಹಾಲ್ಕಲ್ ಪ್ರದೇಶ ಕೂಡಾ ಸೇರಿಕೊಳ್ಳುತ್ತದೆ. ಈಗೇಗಲೇ ಬಂಟ್ವಾಡಿ ಸಮೀಪಿ ನಿರ್ಮಿಸಿದ ಕಿಂಡಿ ಆಣೆಕಟ್ಟಿನಿಂದ ರೈತರು ಪಡಬಾರದ ಪಾಡುಪಡುತ್ತಿದ್ದು, ಗುಂಡೂರು ಆಣೆಕಟ್ಟು ಜನರ ತಲೆ ಮೇಲೆ ಕಲ್ಲು ಚಪ್ಪಡಿ ಎಳೆಯಲಿದೆ.
ಆಣೆಕಟ್ಟು ಕಟ್ಟೋದ್ರಿಂದ ಪಶ್ಚಮ ಘಟ್ಟದಲ್ಲಿ ಕೇಳಿಬರುತ್ತಿದ್ದ ವಿಸ್ಲಿಂಗ ಥ್ರಸ್ಟ್ ಮತ್ತು ಶಮಾ ಹಕ್ಕಿಗಳ ಗಾನ ಮೇಳ ಕೇಳೋಕೆ ಸಿಗೂದಿಲ್ಲ. ಆನೆಝರಿಯ ಜುಳುಜುಳು ನಿನಾದ ಕನಸಾಗಲಿದೆ. 200 ಎಕ್ರೆಗೂ ಮಿಕ್ಕ ಜಾಗದಲ್ಲಿರುವ ಹಸಿರು ಒಣಗಿಹೋಗಲಿದೆ. ಹಾಗೆ ಪಶ್ಚಿಮ ಘಟ್ಟದ ಸೂಕ್ಷ್ಮೀ ಜೀವಿಗಳು ನೂರಾರು ಬಗೆಯ ಔಷಧ ಸಸ್ಯಗಳು ಹೆಮ್ಮರಗಳು ನಾಮಾವಶೇಷ ಹೊಂದಲಿದೆ. ಕಾಡು ಪ್ರಾಣಿಗಳನ್ನು ಕೊಲ್ಲೂರು ಶ್ರೀ ಮೂಕಾಂಬಿಕೆ ದೇವಿಯೇ ಕಾಯಬೇಕು.

ಕರಾವಳಿ ಅವಳಿ ಜಿಲ್ಲೆಯಲ್ಲಿ ಉದ್ಯಮಿಗಳ ಕಾರ್ಬಾರ್ ನಿಂದ ಜನ ನಿದ್ದೆ ಕಳೆದುಕೊಂಡಿದ್ದಾರೆ. ಥರಹೇವಾರಿ ಕಂಪಿನಿಗಳು ರೈತರ ನೂರಾರು ಎಕ್ರೆ ಜಮೀನನ್ನು ಆರೋಷನ ತೆಗೆದುಕೊಂಡಿವೆ. ಯುಪಿಸಿಲ್ ವಿರುದ್ದ ರೈತರು ಬಡಿದಾಡುತ್ತಿದ್ದಾರೆ. ಇದೆಲ್ಲದರೊಟ್ಟಿಗೆ ಆಣೆಕಟ್ಟು ಮತೊಂದು ಜಟಿಲ ಸಮಸ್ಯೆ ಸೃಷ್ಟಿಸುತ್ತಿದೆ. ಒಂದೆಡೆ ಪ್ರಕೃತಿಯ ಮುನಿಸಿನ ಸುಮಾಮಿ ಭೀತಿ, ಮತ್ತೊಂದೆಡೆ ಪಶ್ಚಿಮ ಘಟ್ಟದ ಮಗ್ಗಲ್ಲಿ ತೆಲೆಯೆತ್ತುತ್ತಿರುವ ಆಣೆಕಟ್ಟು. ಸಮುದ್ರ ತೀರವೂ ಸುರಕ್ಷಿತವಾಗಿಲ್ಲ. ಇತ್ತ ಆಣೆಕಟ್ಟಿನಿಂದ ಪಶ್ಚಿಮ ಘಟ್ಟವೂ ಸುಕ್ಷತೆಯಿಂದ ಜಾರಿಕೊಳ್ಳುತ್ತಿದೆ. ಆಣೆಕಟ್ಟಿನ ಹಿನ್ನೀರಿಗೆ ಘಟ್ಟ ಕುಶಿದರೆ ಕರಾವಳಿ ಜನರಿಗೆ ಅರಬ್ಬಿ ಸಮದ್ರವೇ ಗತಿ. ಮಣ್ಣಿನ ಗೋಡೆ ಮಗ್ಗಲ್ಲಲ್ಲಿ ನೀರು ನಿಲ್ಲಿಸಿದರೆ ಅದಷ್ಟು ಸುರಕ್ಷಿತ. ಪಶ್ಚಿಮ ಘಟ್ಟಕ್ಕೆ ಅಪಾಯತಪ್ಪಿದಲ್ಲ. ಮುಂಚಿಹೋಗೋದಕ್ಕಿಂತ ಎಚ್ಚೆತ್ತರೆ ಒಳಿತು.

-ಶ್ರೀಪತಿ ಹೆಗಡೆ ಹಕ್ಲಾಡಿ

0 comments:

Post a Comment