ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ಅವಾರ್ಡ್

"ನನಗೆ ಒಂದು ವಿಷಯ ಮಾತ್ರ ಚೆನ್ನಾಗಿ ತಿಳಿದಿದೆ. ಅದೇನೆಂದರೆ ನಾನೂ ತಿಳಿದದ್ದು ಏನೇನೂ ಅಲ್ಲ" ಖ್ಯಾತ ತತ್ವಜ್ಞಾನಿ ಅರಿಸ್ಟಾಟಲ್ ಅವರ ಈ ಮಾತು ಎಂದೆಂದಿಗೂ ಪ್ರಸ್ತುತ. ಜೀವನದಲ್ಲಿ ಜವಾಬ್ದಾರಿಗಳನ್ನು ಹೊತ್ತು ಸರಳವಾಗಿ, ಶ್ರದ್ಧೆಯಿಂದ ಪ್ರಾಮಾಣಿಕವಾಗಿ ಬದುಕುವುದನ್ನು ಶಿಕ್ಷಣದಿಂದ ಕಲಿಯಬೇಕು. ಇನ್ನೂ ಕಲಿಯುವುದು ಬಾಕಿ ಇದೆ... ತುಂಬಾ ಇದೆ... ನಾನು ಕಲಿತದ್ದು ಏನೇನೂ ಅಲ್ಲ ಎಂಬ ತಿಳುವಳಿಕೆಯೇ ನಿಜವಾದ ಶಿಕ್ಷಣ. ತನ್ನ ತಪ್ಪುಗಳನ್ನು ತಿದ್ದಿಕೊಂಡು ಇತರರ ತಪ್ಪುಗಳನ್ನು ಕ್ಷಮಿಸುವ ಮಟ್ಟಕ್ಕೆ ಬೆಳೆದು ನಮ್ಮತನದಲ್ಲಿ ಬದಲಾವಣೆ ತಂದು ನಮ್ಮಲ್ಲಿ ಸರ್ವಾಂಗೀಣ ಪ್ರಗತಿ ತರುವುದೇ ನಿಜವಾದ ಶಿಕ್ಷಣ. ಜೀವನದ ಸವಾಲುಗಳನ್ನು ಎದುರಿಸಲು ಸಿದ್ಧರಾಗುವ ಮಾರ್ಗವೇ ಶಿಕ್ಷಣ. ಉಳಿದವರನ್ನು ಗೌರವಿಸಿ ತಾವೂ ಗೌರವಕ್ಕೆ ಅರ್ಹತೆ ಪಡೆಯುವ ಜೀವನ ವಿಧಿಯೇ ನಿಜಾರ್ಥ ಶಿಕ್ಷಣ ಎನಿಸುತ್ತದೆ.ವ್ಯಕ್ತಿ ಶಕ್ತಿಯಾಗಿ, ಸಂಸ್ಥೆಯಾಗಿ ಬೆಳೆಯಲು ಈ ಹವ್ಯಾಸ ಅತ್ಯಗತ್ಯ. ವಿಕಾಸ, ಪ್ರಗತಿ, ವಿಕಸನ, ಅಭಿವೃದ್ಧಿ ,ಬೆಳೆಯುವಿಕೆ ಇತ್ಯಾದಿ ಆಯಾಮಗಳಲ್ಲಿ ಆಸಕ್ತಿ ಹೊಂದಿದವರು ಓದಲೇಬೇಕು... ಓದುತ್ತಿರಬೇಕು... ಓದುತ್ತಲೇ ಜ್ಞಾನ ಸಂಗ್ರಹಿಸಿ ಅದನ್ನು ಪ್ರಸರಣಗೊಳಿಸುವತ್ತ ಬೆಳೆಯಬೇಕು. ನಾವು ಬೆಳೆಯುತ್ತ... ಉಳಿದವರನ್ನು ಬೆಳೆಯಗೊಡುತ್ತಾ ...ವಿಕಾಸ ಪಥದಲ್ಲಿ ಮುನ್ನುಗ್ಗುವುದು ಓದಿನ ಆಶಯ. ನಮ್ಮ ಋಷಿ ಸಂಸ್ಕೃತಿಯೂ ಇದೇ ಜೀವನ ಮೌಲ್ಯಗಳನ್ನು ಬೋಧಿಸುತ್ತಾ ಬಂದಿದ್ದು ಅದು ಇಂದಿಗೂ ಪ್ರಸ್ತುತ.

ಯಾವುದೇ ಕ್ಷೇತ್ರದಲ್ಲಿ ಬೆಳೆಯಬೇಕೆಂದಿರುವ ವ್ಯಕ್ತಿ ಜ್ಞಾನಾರ್ಜನೆಗಾಗಿ ಅದನ್ನು ಸದುಪಯೋಗಪಡಿಸಿಕೊಳ್ಳಲು ಓದಬೇಕು. ವೃತ್ತಿಯ ಹೊರಗೆ ವಿವಿಧ ಪ್ರವೃತ್ತಿಯನ್ನು ಬೆಳೆಸಿಕೊಂಡವರು ಅಥವಾ ಬೆಳೆಸಿಕೊಳ್ಳಲು ಇಚ್ಛಿಸುವವರು ಆಯಾ ಕ್ಷೇತ್ರಗಳಲ್ಲಿ ಹೆಚ್ಚಿನ ಪರಿಣತಿ ಹೊಂದಲು ಓದಲೇಬೇಕು. ಇದು ಉತ್ತಮ ಹವ್ಯಾಸವಾಗಿ ಆಸಕ್ತಿಯ ವಿಷಯವಾಗಿ ಪರಿವರ್ತನೆ ಹೊಂದಬೇಕು. ಆಗ ಸಾಧನೆಗೆ ಅದು ಪೂರಕ, ಪ್ರೇರಕ ಮತ್ತು ಸಹಾಯಕ. ಓದುವ ಹವ್ಯಾಸ ನಮ್ಮ ಮನಸ್ಸಿನ ಜಡತನಕ್ಕೆ ಉತ್ತಮ ಔಷಧ. ಓದನ್ನು ಪ್ರೀತಿಸುವ ವ್ಯಕ್ತಿ ಎಂದಿಗೂ ಒಂಟಿಯಾಗಲಾರ.

- ಛಾಯ, ಪ್ರಥಮ ಬಿ.ಎ.

1 comments:

Abhirama Hegde said...

ಬರವಣಿಗೆ ತುಂಬಾ ಇಷ್ಟವಾಯಿತು..ಉತ್ತಮ ಪ್ರಯತ್ನ.

Post a Comment