ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ

ಪುಟ್ಟಪ್ಪರ್ತಿ: ಸತ್ಯಸಾಯೀ ಬಾಬಾ ಇಹಲೋಕವನ್ನು ತ್ಯಜಿಸಿದ್ದಾರೆ. ಇದು ಅಸಂಖ್ಯ ಬಾಬಾ ಭಕ್ತರಿಗೆ ಒಂದು ಕಹಿಸುದ್ದಿ.ಶಾಕ್ ನೀಡಿದಂತಹ ಘಟನೆ. ಇದನ್ನು ಪುಟ್ಟಪರ್ತಿಯ ಸತ್ಯಸಾಯಿ ಟ್ರಸ್ಟ್ ಹೊರಗೆಡವಿದೆ. ಅದು ಇಂದು ... ಮಾರ್ಚ್ 28ರಂದು ಬಾಬಾ ಪುಟ್ಟಪರ್ತಿಯ ಸುಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿಂದ ನಂತರ ಪುಟ್ಟಪರ್ತಿಯಲ್ಲಿ ಕೇವಲ ನಿಗೂಢತೆ...ಭದ್ರತೆ ಮಾತ್ರ...ಹಾಗಾದರೆ ಪುಟ್ಟಪರ್ತಿಯ ಸತ್ಯಸಾಯೀ ಬಾಬಾ ದೈವಾದೀನರಾಗಿದ್ದು ಯಾವಾಗ? ಇವರ ಆರೋಗ್ಯ ವಿಚಾರದಲ್ಲಿ ಟ್ರಸ್ಟ್ ಹಲವು ವಿಚಾರಗಳನ್ನು ಮುಚ್ಚಿಟ್ಟಿದೆಯೇ...ಬಾಬಾ ಕೆಲ ದಿನಗಳ ಹಿಂದೆ ಇಹಲೋಕ ತ್ಯಜಿಸಿದ್ದಾರೆಯೇ...? ಮುಂತಾದ ಪ್ರಶ್ನೆ ಸಹಜವಾಗಿ ಮೂಡುತ್ತಿದೆ. ಇಂದು 7.40ಕ್ಕೆ ಪುಟ್ಟಪರ್ತಿ ಸತ್ಯಸಾಯೀ ಬಾಬ ತೀವ್ರ ಹೃದಯಾಘಾತದಿಂದ ನಿಧನಹೊಂದಿದ್ದಾರೆ ಎಂಬ ಮಾಹಿತಿ ಅಧಿಕೃತವಾಗಿ ಹೊರಬಿದ್ದಿದೆ. ಆದರೂ ಬಾಬಾ ಅವತಾರ ಕೊನೆಯಾಗಿದ್ದು ಇಂದೆ ಹೌದೇ ಎಂಬ ಮಿಲಿಯನ್ ಡಾಲರ್ ಪ್ರಶ್ನೆ ಸಹಸ್ರ ಸಹಸ್ರ ಸಂಖ್ಯೆಯ ಭಕ್ತಾಧಿಗಳಲ್ಲಿ ಮೂಡಿದೆ...ಅವತಾರ ಅಂತ್ಯ

ಪುಟ್ಟಪರ್ತಿಯಲ್ಲಿ ಬಾಬಾ ಅವರ ಈ ಅವತಾರ ಅಂತ್ಯಗೊಂಡಿದೆ. ಸತ್ಯಸಾಯೀ ಬಾಬಾ ಎಂದೇ ಜನಜನಿತರಾದ ಪುಟ್ಟಪರ್ತಿಯ ಬಾಬಾ ಜನಪರ ಕಾರ್ಯಗಳ ಮೂಲಕ ಪವಾಡಗಳ ಮೂಲಕ ಜನಪ್ರಿಯರಾಗಿದ್ದರು.ದೇವಮಾನವರೆನಿಸಿಕೊಂಡಿದ್ದರು. ಕೋಟ್ಯಾಂತರ ಭಕ್ತಾಧಿಗಳನ್ನು ದೇಶ ವಿದೇಶಗಳಲ್ಲಿ ಹೊಂದಿದ ಈ ದೇವ ಮಾನವ ಸತ್ಯಸಾಯೀ ಬಾಬಾ ಇಂದು ಭಕ್ತರನ್ನು ಬಿಟ್ಟು ತೆರಳಿದ್ದಾರೆ...ಸಾಯೀ ಬಾಬಾ ಕೊನೆಯುಸಿರೆಳೆದಿದ್ದಾರೆ.
ಆದರೆ ಇಡೀ ಪುಟ್ಟಪರ್ತಿಯೆಂಬ ಪುಟ್ಟ ಊರನ್ನು ಅತ್ಯಂತ ಅತ್ಯಾಧುನಿಕವಾಗಿ ಬೆಳೆಸಿದ ರೀತಿ ಸತ್ಯಸಾಯೀ ಬಾಬರಿಗೆ ಸಲ್ಲಬೇಕು. ಪುಟ್ಟ ಊರಿನಲ್ಲೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಏರ್ಪೋರ್ಟ್, ಡ್ಯಾಂ, ಮೂಲಭೂತ ಸೌಲಭ್ಯ, ಶಿಕ್ಷಣ ವ್ಯವಸ್ಥೆ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲೂ ಈ ಊರನ್ನು ಮಾದರಿ ರೀತಿಯಲ್ಲಿ ಬೆಳೆಸಿದ ಹೆಗ್ಗಳಿಕೆ ಬಾಬಾರದ್ದು. ಬಾಬಾ ಅವರ ಪವಾಡಗಳಿಂದಲೂ ಅವರೊಬ್ಬಶಕ್ತಿಯಾಗಿ, ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನೂ ತಲುಪಿ ಅವರ ಕಣ್ಣೀರೊರೆಸುವ ಕಾರ್ಯ ಮಾಡಿದ್ದರಿಂದ ಬಾಬಾ ನಿಜಾರ್ಥದ "ದೇವ ಮಾನವ" ಎನಿಸಿಕೊಂಡಿದ್ದಾರೆ.

ನಿಗೂಢತೆಯೇ ಸಂಶಯಕ್ಕೆ ಕಾರಣ
ಸತ್ಯಸಾಯೀ ಬಾಬಾ ಲಕ್ಷಾಂತರ ಮಂದಿಯ ಬಾಳು ಬೆಳಗಿದವರು. ಸಹಸ್ರಾರು ಕುಟುಂಬಗಳಿಗೆ ವಿವಿಧ ರೀತಿಯಲ್ಲಿ ಆಧಾರ ನೀಡಿದವರು. ಲಕ್ಷಾಂತರ ಮಂದಿಗೆ ಆರೋಗ್ಯ ಕಲ್ಪಿಸಿದವರು. ಭಕ್ತರಿಂದ ದೇವ ಮಾನವ ಎಂದೇ ಪೂಜಿಸಲ್ಪಟ್ಟವರು. ಇಂತಹ ವ್ಯಕ್ತಿ ಸಾವು ಬದುಕಿನ ಹೋರಾಟ ನಡೆಸಿದ್ದಾರೆ ಎಂಬುದು ಮಾತ್ರ ಖೇದಕರ ಅಂಶ.
ಅನೇಕರ ಬಾಳಿಗೆ ಬೆಳಗಾದ, ಅನಾರೋಗ್ಯವನ್ನು ಪವಾಡರೀತಿಯಲ್ಲಿ ಪಾರುಮಾಡಿದ ದೇವ ಮಾನವ ಸ್ವತಃ ಅನಾರೋಗ್ಯದಿಂದ ಬಳಲಿ ಬಳಲಿ ಬೆಂಡಾಗಿ ಸಾವನ್ನಪ್ಪಿದ್ದಾರೆ ಎಂದರೆ ಭಕ್ತರಿಗಷ್ಟೇ ಅಲ್ಲ ಸಾಮಾನ್ಯ ಮನುಷ್ಯರಿಗೂ ನಂಬಲಸಾಧ್ಯ ಸನ್ನಿವೇಶ.
ಬಾಬಾ ಅವರು ಆಸ್ಪತ್ರೆಗೆ ದಾಖಲಾಗಿ 28ದಿನಗಳ ನಂತರ ನಿಧನದ ಸುದ್ದಿಯನ್ನು ಸತ್ಯಸಾಯೀ ಟ್ರಸ್ಟ್ ಇಂದು ಬೆಳಗ್ಗೆ ಅಧಿಕೃತ ಘೋಷಣೆ ಮಾಡಿದೆ. ಆದರೆ ಬಾಬಾ ಹಲವು ದಿನಗಳ ಹಿಂದೆ ನಿಧನರಾಗಿದ್ದರು. ಟ್ರಸ್ಟ್, ಟ್ರಸ್ಟಗೆ ಸಂಬಂಧಿಸಿದ ವ್ಯಕ್ತಿಗಳು ಈ ಒಂದು ಸುದ್ದಿಯನ್ನು ಮುಚ್ಚಿಟ್ಟಿದ್ದಾರೆ ಎಂಬ ಮಾತು ಈಗ ದಟ್ಟವಾಗುತ್ತಿದೆ. ಬಾಬಾ ಅವರ ನಿಧನ ಯಾವಾಗ ಸಂಭವಿಸಿದೆ ಎಂಬ ಬಗ್ಗೆ ಅಧಿಕೃತ ಮಾಹಿತಿಯಿಲ್ಲ.ಆದರೆ ಟ್ರಸ್ಟ್ ಇಂದು ಬೆಳಗ್ಗೆ 7.40ಕ್ಕೆ ಬಾಬಾ ಅವರು ಕೊನೆಯುಸಿರೆಳೆದರು ಎಂಬ ಮಾಹಿತಿ ರವಾನಿಸಿದೆ.
ಬಾಬಾ ಅವರು ದಾಖಲಾಗಿದ್ದ ಆಸ್ಪತ್ರೆಯೊಳಗ್ಗೆ ಯಾರೊಬ್ಬರಿಗೂ ಪ್ರವೇಶಕ್ಕೆ ಅವಕಾಶ ನೀಡದಿದ್ದುದು ಈ ಎಲ್ಲಾ ಗುಮಾನಿಗೆ ಪ್ರಮುಖ ಕಾರಣವಾಗಿದೆ. ಬಾಬಾ ಅವರಿಗೆ ದೇಶ ವಿದೇಶಗಳಿಂದ ಬರುತ್ತಿದ್ದ ಕಾಣಿಕೆಗಳು, ಟ್ರಸ್ಟ್ ನ ಆಸ್ತಿ ಕಬಳಿಸುವ ಹುನ್ನಾರ ನಡೆದಿದೆ ಎಂಬ ಅಂಶವೂ ದಟ್ಟವಾಗುತ್ತಿದ್ದು ಇದೆಲ್ಲದುರ ಕಾರಣದಿಂದಾಗಿ ಈ ಎಲ್ಲಾ ಸಂದೇಹಗಳು ದಟ್ಟವಾಗಿದೆ. ಏನೇ ಆದರೂ ಬಾಬಾ ಅವರ ಸಾವಿನ ಕುರಿತಾಗಿ ಎದ್ದಿರುವ ಸಂದೇಹವನ್ನು ಅತ್ಯಂತ ಸ್ಪಷ್ಟವಾಗಿ ಬಹಿರಂಗಗೊಳಿಸಬೇಕಾಗಿದೆ.

0 comments:

Post a Comment