ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಆಟ - ಅವಲೋಕನ
ಬೆಂಗಳೂರು: ಥೂ...ಭಾರತದ ಕ್ರಿಕೆಟ್ ತಂಡ ಅಂದರೆ ಹೀಗೇನೇ...ಈ ಮಾತು ಮತ್ತೊಮ್ಮೆ ಸಾಬೀತಾಗುವಂತಾಗಿದೆ. ಕಾರಣ ವಿಶ್ವಕಪ್ ಫೈನಲ್ ಪಂದ್ಯಾಟದಲ್ಲಿ ಭಾರತದ ಕಳಾಹೀನ ಬ್ಯಾಟಿಂಗ್ ಪ್ರದರ್ಶನ. ಟಾಸ್ ಗೆದ್ದು ಫೀಲ್ಡಿಂಗ್ ಆರಿಸಿದ ಶ್ರೀಲಂಕಾ ತಂಡ 275ರನ್ ಗಳ ಗುರಿಯನ್ನು ಭಾರತಕ್ಕೆ ನೀಡಿತು. ಇದನ್ನು ಬೆನ್ನಟ್ಟ ಹೊರಟ ಭಾರತ ಆರಂಭದಲ್ಲೇ ಆಘಾತಕ್ಕೀಡಾಗಿದ್ದು ವಿಪರ್ಯಾಸ.
ಭಾರತ ತಂಡದ ಪ್ರಮುಖ ಆಧಾರಗಳಾಗಿದ್ದ ವೀರೇಂದ್ರ ಸೆಹ್ವಾಗ್ ಹಾಗೂ ಸಚಿನ್ ತಂಡೂಲ್ಕರ್ ತಮ್ಮ ಕಳಾಹೀನ ಬ್ಯಾಟಿಂಗ್ ಪ್ರದರ್ಶನದ ಮೂಲಕ ಕ್ರಿಕೆಟ್ ಪ್ರೇಮಿಗಳ ಆಕ್ರೋಷಕ್ಕೆ ಗುರಿಯಾದರು. ಭಾರತ ವಿಶ್ವಕಪ್ ಗೆಲ್ಲುತ್ತದೆ ಎಂಬ ಭರವಸೆ ಹೊತ್ತ ಲಕ್ಷಾಂತರ ಮಂದಿಯ ಮನದಲ್ಲಿ ಭಾರತ ತಂಡದ ಬಗೆಗಿನ ಆಸಕ್ತಿ ಕುಗ್ಗಿಹೋಯಿತು.ಹೇಗಿದ್ದರೂ ಹಣ ಸಿಗುತ್ತದಲ್ಲ...
ಭಾರತ ತಂಡಕ್ಕೆ ಹೇಗಿದ್ದರೂ ಹಣ ಸಿಗುತ್ತದಲ್ಲ ಎಂಬ ಭಾವನೆ ಮೂಡಿದೆ. ವಿಶ್ವಕಪ್ ಗೆಲ್ಲಬೇಕು, ದೇಶಕ್ಕೆ ಇದೊಂದು ಪ್ರತಿಷ್ಠೆ ಎಂಬ ಭಾವನೆ ಈ ತಂಡದವರಲ್ಲಿ ಇಲ್ಲ ಎಂಬುದು ಸ್ಪಷ್ಟ. ಕಾರಣ ಜವಾಬ್ದಾರಿಯುತ ಆಟ ಆಡದಿರುವುದೇ ಇದಕ್ಕೊಂದು ನಿದರ್ಶನ. ಭಾರತ ತಂಡದ ಪ್ರತಿಯೊಬ್ಬ ಆಟಗಾರರೂ ಮುಂದಿನ ದಿನಗಳಲ್ಲಿ ಯಾವುದೇ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳಬಾರದೆಂಬ ಫರ್ಮಾನು ಹೊರಡಿಸಬೇಕು. ಹಾಗೂ ಆಟದಲ್ಲಿ ಸೋತದ್ದೇ ಆದರೆ ಆ ಆಟಗಾರರಿಗೆ ತೀವ್ರ ದಂಡ ವಿಧಿಸಬೇಕು. ಹೀಗೆ ಮಾಡಿದ್ದೇ ಆದಲ್ಲಿ ಒಂದಷ್ಟು ಆ ಕಾರಣಕ್ಕಾದರೂ ಉತ್ತಮ ಪ್ರದರ್ಶನ ತೋರಿಸುತ್ತಾರೆನ್ನಬಹುದೇನೋ.

ಶ್ರೀಲಂಕಾ ತಂಡದ ಜವಾಬ್ದಾರಿಯುತ ಆಟವನ್ನು ನೋಡಿಯಾದರೂ ಭಾರತ ತಂಡ ಪಾಠ ಕಲಿಯಬೇಕು. ದೇಶಭಕ್ತಿ, ಕ್ರೀಡಾ ಸ್ಪೂರ್ತಿ, ಸಾಧನೆಯ ಛಲ ಆಟಗಾರರಲ್ಲಿರಬೇಕು. ಬದಲಾಗಿ ಕೇವಲ ಹಣ ಗಳಿಸುವುದಷ್ಟೇ ಎಂಬ ಭಾವನೆ ಬಿಟ್ಟು, ತಮ್ಮ ಜವಾಬ್ದಾರಿಯನ್ನು ಅರಿತು ಆಡಿದ್ದೇ ಆದಲ್ಲಿ ಗೆಲುವು ಸಾಧ್ಯವಿದೆ.
ಒಟ್ಟಾರೆಯಾಗಿ ಕೋಟ್ಯಾಂತರ ಮಂದಿಯ ಹರಕೆ, ಹಾರೈಕೆಗಾದರೂ ಭಾರತ ತಂಡ ಮರ್ಯಾದೆ ನೀಡಬೇಕಾಗಿದೆ. ಜವಾಬ್ದಾರಿಯುತ ಆಟ ಪ್ರದರ್ಶಿಸಬೇಕಾಗಿದೆ.

0 comments:

Post a Comment