ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಚಾರ

ಜಗತ್ತು ಬದಲಾಗುತ್ತಿದೆ...ಕ್ಷಣ ಕ್ಷಣವೂ... ಆದರೆ... ಬದಲಾಗುವ ಜಗತ್ತಿಗೆ ಮನುಷ್ಯಸ್ಪಂದನೆ ಹೇಗಿದೆ...? ಮನುಷ್ಯ ಎಷ್ಟರಮಟ್ಟಿಗೆ ಬದಲಾವಣೆಯ ಓಘಕ್ಕೆ ಸ್ಪಂದಿಸುತ್ತಿದ್ದಾನೆ...? ಸ್ಪಂದಿಸಿದ್ದಾನೆಯಾದರೂ ಯಾವ ರೀತಿಯ ಸ್ಪಂದನೆ ಆತನದ್ದು...? ಅದು ನಿತ್ಯ ಜೀವನದ ಸ್ಪಂದನೆಯೋ, ಅಥವಾ ಆಚಾರ ವಿಚಾರಗಳ ಸ್ಪಂದನೆಯೋ... ತಮ್ಮ ದಿನ ನಿತ್ಯದ, ಆಗುಹೋಗುಗಳ ನಡುವಿನ ಸ್ಪಂದನೆಯೋ...ಅಥವಾ ನಮ್ಮ ಅನ್ನದ ಪ್ರಶ್ನೆ ಬಂದಾಗ ಉಂಟಾಗುವ ಸ್ಪಂದನೆಯೋ...? ನಿಜಕ್ಕೂ ಈ ವಿಚಾರದ ಬಗ್ಗೆ ತೀವ್ರವಾದ ಚಿಂತನೆಯನ್ನು ಎಷ್ಟುಮಂದಿ ಮಾಡಿದ್ದಾರೆ...? ಉತ್ತರ ಮಾತ್ರ ಸ್ಪಷ್ಟ..."ಬೆರಳೆಣಿಕೆ"...ಹೌದು ನಾವು ಘಂಟಾಗೋಷವಾಗಿ ಹೇಳುತ್ತಿದ್ದೇವೆ.... ನಾವು ಬದಲಾಗುತ್ತಿದ್ದೇವೆ...ಬದಲಾವಣೆಯ ಜೊತೆಗೆ ನಾವು ಸ್ಪಂದಿಸುತ್ತಿದ್ದೇವೆ ಎಂಬುದಾಗಿ...ಆದರೆ ಆ "ಬದಲಾವಣೆ" ಮತ್ತು "ಸ್ಪಂದನೆ" ಎಂದರೇನು ಎಂಬ ಬಗ್ಗೆಯೇ ನಮಗರಿವಿರುವುದಿಲ್ಲ...! ಇದು ವಿಚಿತ್ರವಾದರೂ ಸತ್ಯ!.ಇಂದು ಜಗತ್ತು ಬದಲಾಗುತ್ತಿದೆ ಎಂಬ ಮಾತು ಎಲ್ಲೆಡೆ ಕೇಳಿಬರುತ್ತಿದೆ. ಹೌದು ಜಗತ್ತು ಬದಲಾಗುತ್ತಿದೆ. ಈ ಬದಲಾವಣೆಯ ರೀತಿಯೇನು? ಬದಲಾವಣೆ ಅಂದಾಕ್ಷಣ ಅದು ಮಾನವಕೇಂದ್ರಿತ ಬದಲಾವಣೆಯೋ ಅಥವಾ ನೈಸರ್ಗಿಕ ಬದಲಾವಣೆಯೋ...? ನೈಸರ್ಗಿಕ ಬದಲಾವಣೆಯಾಗಿದ್ದೇ ಆದಲ್ಲಿ ಅದಕ್ಕೆ ಮಾನವನ "ಕೈವಾಡ"ಇದೆಯೋ...ಎಂಬ ಬಗ್ಗೆಯೂ ಚಿಂತನೆ ಮಾಡಬೇಕಾಗಿದೆ. ಆದರೆ ಮೇಲ್ನೋಟಕ್ಕೆ ಜನಜೀವನದ ಆಚಾರ - ವಿಚಾರಗಳಲ್ಲಿ ಬದಲಾವಣೆ ಸ್ಪಷ್ಟವಾಗಿ ಕಾಣುತ್ತಿದೆ. ಇದನ್ನೇ ಸಾಮಾನ್ಯ ಮಾತುಗಳಲ್ಲಿ "ಬದಲಾಗುತ್ತಿದ್ದೇವೆ" ಎಂಬ ಒಕ್ಕಣೆಯೊಂದಿಗೆ ಹೇಳಲಾಗುತ್ತಿದೆ.

* * *
ಇದು ದುರಂತ...
ಜಪಾನ್ ದೇಶ ಬಲಿಷ್ಠವಾದಂತಹ "ಚಿಂತನಾ"ಶಕ್ತಿಯನ್ನೊಳಗೊಂಡ ರಾಷ್ಟ್ರ. ತಮ್ಮ ಚಿಂತನೆಯ ಮೂಲಕ ಪ್ರಗತಿಸಾಧಿಸುವಲ್ಲಿ ಸಫಲಹೊಂದಿದ್ದಷ್ಟೇ ಅಲ್ಲದೆ ಅನೇಕ ರಾಷ್ಟ್ರಗಳ ಕೆಂಗಣ್ಣಿಗೂ ಗುರಿಯಾಗಿವೆ. ಏನೇ ಇರಲಿ... ಜಪಾನ್ ಪ್ರಭಾವೀ ದೇಶ ಎಂಬುದನ್ನು ವಿಶ್ವವೇ ಒಪ್ಪಿಕೊಂಡಿದೆ. ಅಲ್ಲಿನ ಪ್ರಗತಿ, ಯೋಚನಾ ಕ್ರಮ, ಆಚಾರಗಳು, ನಡೆ, ನುಡಿ, ವ್ಯವಸ್ಥೆ ಹೀಗೆ ಪ್ರತಿಯೊಂದು ಕೂಡಾ... ಆದರೆ ಇದೇ ಜಪಾನ್ ಇತ್ತೀಚೆಗೆ "ಪ್ರಕೃತಿಯ ಮುಂದೆ ಸೋಲನ್ನೊಪ್ಪಿಕೊಂಡಿತು". ಇದು ಸತ್ಯವಲ್ಲವೇ...? ಹಾಗಾದರೆ ಜಪಾನ್ ಎಷ್ಟು ಮುಂದುವರಿದಿದ್ದರೂ ಏನು ಪ್ರಯೋಜನವಾಯಿತು...? ಹಾಗಾದರೆ ಪ್ರಕೃತಿಯ ಚೆಲ್ಲಾಟವನ್ನು ಈ ಜಪಾನ್ ಸಹಿಸಿಕೊಳ್ಳಲು ಸಾಧ್ಯವಾಗಿಲ್ಲ... ವಿಜ್ಞಾನ, ತಂತ್ರಜ್ಞಾನ, ಆವಿಷ್ಕಾರಗಳೆಲ್ಲವೂ ಮನುಷ್ಯಕೇಂದ್ರಿತವೆಂಬುದು ಸಾಬೀತಾದಂತಾಯಿತು...ಅಲ್ಲವೇ...? ಇಡೀ ವಿಶ್ವವೇ ಬೆರಗಾಗಿ ದಿಟ್ಟಿಸುವಂತಹ ಮಹತ್ಕಾರ್ಯಗಳನ್ನು ಮಾಡಿದ ಜಪಾನ್ ; ಕೇವಲ ಪ್ರಕೃತಿಯ ಆಟಕ್ಕೆ ಬಲಿಯಾಗಿದ್ದು ಮಾತ್ರ ಖೇದಕರ...ಅಂದು ಬೆರಗಾಗಿ ನೋಡಿದ ಅದೇ ವಿಶ್ವ ಇಂದು ಮತ್ತೊಮ್ಮೆ ಬೆರಗಾಗಿ ಜಪಾನ್ ನಂತಹ ರಾಷ್ಟ್ರವೂ ಇಂತಹ ತೊಂದರೆಯನ್ನೆದುರಿಸುವಲ್ಲಿ ವಿಫಲವಾಯಿತಲ್ಲ ಎಂಬಂತೆ ಮತ್ತೊಮ್ಮೆ ದಿಟ್ಟಿಸಿತು...ಬೆರಗಾಯಿತು...

* * *
ದಾಸ್ಯದತ್ತ...
ಭಾರತ ಮುಂದುವರಿಯುತ್ತಿರುವ ರಾಷ್ಟ್ರ.ಇಲ್ಲಿನ ಜನಸಂಖ್ಯೆಯಲ್ಲಿ ನಿರಂತರ ಮುಂದುವರಿಕೆಯಿದೆ...ಆದರೆ ಚಿಂತನೆ-ಸಮಗ್ರ ಅನುಷ್ಠಾನದಲ್ಲಿ ಇತರ ರಾಷ್ಟ್ರಗಳಿಗೆ ಹೋಲಿಸದರೆ ಒಂದಷ್ಟು ಹಿಂದೆ. ಅಭಿವೃದ್ಧಿಗೆ ಹಿನ್ನಡೆ...ಕಾರಣ; ನಿರಂತರ ಕಾಲೆಳೆಯುವ ಮಂದಿ...ರಾಜಕೀಯ ಮೇಲಾಟ...ಕಿತ್ತಾಟ... ಕೇವಲ ಸ್ವಪ್ರತಿಷ್ಠೆ, ಬೆಳವಣಿಯಷ್ಟೇ ನಮ್ಮ ರಾಷ್ಟ್ರದ ಬಹುಪಾಲು ಮಂದಿಯ ಕನಸು. (ಈ ವಿಚಾರವನ್ನು ನೋಡಿದರೆ ದೇಶದ ಬಗ್ಗೆ ಕಿಂಚಿತ್ತೂ ಅಭಿಮಾನ ಇಲ್ಲ ಎಂಬ ಮಾತು ಬರುತ್ತದೆ ಎಂಬ ಸತ್ಯಗೊತ್ತಿದೆ. ಆದರೆ ಸತ್ಯ ಎಂದಿಗೂ ಸತ್ಯವೇ ಅಲ್ಲವೇ...?!) ನಮ್ಮ ನೆರೆಯ ರಾಷ್ಟ್ರಗಳು ಸಾಕಷ್ಟು ತಂತ್ರಜ್ಞಾನದಲ್ಲಿ ಮುಂದುವರಿದಿದ್ದಾರೆ. ತಮ್ಮ ನೆಲೆ ಗಟ್ಟಿಮಾಡಿಕೊಳ್ಳುವ ನಿರಂತರ ಪ್ರಯತ್ನದಲ್ಲಿದ್ದಾರೆ. ಭಾರತ ಸನಾತನ ಸಂಸ್ಕೃತಿ ಭಾಷೆ, ಸಂಸ್ಕಾರಗಳನ್ನೊಳಗೊಂಡ ರಾಷ್ಟ್ರವಾಗಿದೆಯಾದರೂ ಇಂದು ಇದನ್ನೆಲ್ಲಾ ನಿರ್ಲಕ್ಷಿಸುತ್ತಿದ್ದರೆ ವಿದೇಶೀಯರು ಇದರ ಬೆಲೆಯರಿತು ಇದರ ಅಧ್ಯಯಾನಾಸಕ್ತಿಯನ್ನು ಕೈಗೊಂಡಿದ್ದಾರೆ;ಕೈಗೊಳ್ಳುತ್ತಿದ್ದಾರೆ...ತನ್ಮೂಲಕ ಆಯಾ ರಾಷ್ಟ್ರಗಳು ಸುಭದ್ರವಾಗುತ್ತಿವೆ. ಆದರೆ ದುರ್ಧೈವ ವಶಾತ್ ವಿದೇಶೀಯರ ಅನುಕರಣೆಗೆ ಮಣೆಹಾಕುತ್ತಾ ಹಾಕುತ್ತಾ ನಾವು ದಾಸ್ಯದತ್ತ ಮತ್ತೆ ಮರಳುತ್ತಿದ್ದೇವೆ...ಇದು ದುರಂತ...

0 comments:

Post a Comment