ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
11:45 PM

ಬದ್ಧಕೋಣಾಸನ

Posted by ekanasu


ಮಹಿಳೆಯರಿಗೆ ಈ ಆಸನ 'ವರದಾನ'

ಅಭ್ಯಾಸ ಕ್ರಮ

ಬದ್ಧ ಎಂದರೆ ಕಟ್ಟುವುದು. ಕೋಣವೆಂದರೆ ಮೂಲೆ. ಈ ಭಂಗಿಯಲ್ಲಿ ನೆಲದ ಮೇಲೆ ಕುಳಿತು ಹಿಮ್ಮಡಿಗಳನ್ನು ಗುದ, ಗುಹ್ಯಸ್ಥಾನಗಳ ನಡುವೆ ಅಳವಡಿಸಿ ಕಾಲ್ಬೆರಳುಗಳನ್ನು ಕೈಯಿಂದ ಹಿಡಿಯಬೇಕು. ಯೋಗ ಗುರುಗಳ ಸಲಹೆ, ಸೂಚನೆಯಂತೆ ಈ ಆಸನವನ್ನು ಕಲಿಯಬೇಕು.ಉಪಯೋಗಗಳು

ಸ್ತ್ರೀಯರಿಗೆ ತಲೆದೋರುವ ಮುಟ್ಟಿನ ದೋಷಗಳನ್ನು ಈ ಆಸನದ ಅಭ್ಯಾಸದಿಂದ ಬೇಗನೆ ಪರಿಹರಿಸಿಕೊಳ್ಳಬಹುದು. ಗರ್ಭಿಣಿ ಸ್ತ್ರೀಯರು ಶಿಸ್ತು ಬದ್ಧವಾಗಿ ಕ್ರಮವತ್ತಾಗಿ ಈ ಆಸನವನ್ನು ಅಭ್ಯಾಸ ಮಾಡುವುದರಿಂದ ಪ್ರಸವ ವೇದನೆ ಬಹು ಮಟ್ಟಿಗೆ ತಗ್ಗಿ ಸುಖ ಪ್ರಸವವಾಗಲು ಈ ಆಸನ ತುಂಬಾ ಸಹಕಾರಿಯಾಗುತ್ತವೆ ಮತ್ತು ಮೂತ್ರ ವಿಸರ್ಜನೆಯಲ್ಲಿ ತೊಂದರೆಗಳನ್ನು ಅನುಭವಿಸುವವರಿಗೆ ಈ ಆನಸ ಅತ್ಯುತ್ತಮ ಫಲಕಾರಿ.

ಕಿಬ್ಬೊಟ್ಟೆ ಮತ್ತು ಬೆನ್ನಿನ ಭಾಗ ಇವುಗಳಿಗೆಲ್ಲಾ ಸಾಕಷ್ಟು ರಕ್ತ ಪರಿಚಲನೆಯಾಗಿ ಅವೆಲ್ಲವು ಹುರುಪುಗೊಂಡು ಶಕ್ತಿಯನ್ನು ಗಳಿಸುವುವು. ಹಾಗೂ ಈ ಆಸನವು ಮೂತ್ರಪಿಂಡಗಳು, ಮೂತ್ರಕೋಶ ಮತ್ತು ಜನನೇಂದ್ರಿಯ ಇವನ್ನು ಆರೋಗ್ಯ ಸ್ಥಿತಿಯಲ್ಲಿಡುತ್ತದೆ. ಕಾಲಿನ ನರಗಳ ಸೆಳೆತ ಮಲಬದ್ಧತೆ ಸಮಸ್ಯೆ ಪರಿಹರಿಸಿಕೊಳ್ಳಲು ಬದ್ಧಕೋಣಾಸನ ಉಪಯುಕ್ತವಾಗಿದೆ. ಒಟ್ಟಿನಲ್ಲಿ ಹೇಳುವುದಾದರೆ ಮಹಿಳೆಯರಿಗೆ ಈ ಆಸನ 'ವರದಾನ' ಇದ್ದಂತಹ ಭಂಗಿಯಾಗಿದೆ.

- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ,
ನಿವೃತ್ತ ಸೀನಿಯರ್ ಹೆಲ್ತ್ ಇನ್ಸ್ಪೆಕ್ಟರ್

0 comments:

Post a Comment