ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
1:57 PM

ನಿದ್ದೆ...

Posted by ekanasu

ಈ ಕನಸು ಅವಾರ್ಡ್

ನಿದ್ದೆಯಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ.ಆರಾಮಾಗಿ ನಿದ್ದೆ ಮಾಡೋದು ಬಹುತೇಕರು ಕಾಣೋ ಕನಸು, ಅದರಲ್ಲೂ ವಿದ್ಯಾರ್ಥಿಗಳಿಗೂ ನಿದ್ದೆಗೂ ಅವಿನಾಭಾವ ಸಂಬಂಧ.ಕ್ಲಾಸು ನಡೆಯಬೇಕಾದರೆ ನಿದ್ದೆ ಓಡೋಡಿ ಬರುತ್ತದೆ. ಬೇಡಬೇಡವೆಂದರೂ ಕೂತಲ್ಲೆ ಕಣ್ಣೆಳೆಯುತ್ತದೆ. ತಾನಾಗಿಯೆ ಮುಚ್ಚಿಹೋಗುತ್ತಿರುವ ಕಣ್ಣುಗಳನ್ನು ಅರೆತೆರೆದಿಟ್ಟುಕೊಂಡು ಸುಸ್ತುಬಿದ್ದುಹೋಗಿರುತ್ತಾರೆ ವಿದ್ಯಾರ್ಥಿಗಳು.
ಹೀಗೆ ಅವಶ್ಯವಿದ್ದಾಗ ಕೆಲವೊಮ್ಮೆ ಅನಾವಶ್ಯವಿದ್ದಾಗಲೂ ಕಾಡುವ ನಿದ್ದೆ ಬದುಕಿನಲ್ಲಿ ಒಂದು ಮೂಲಭೂತ ಅಗತ್ಯ. ಹಸಿವು ನೀರಡಿಕೆಯಷ್ಟೇ ಅಗತ್ಯವಾದ ನಿದ್ದೆ ಜೀವನದಲ್ಲಿ ನವೋಲ್ಲಾಸ ಮೂಡಿಸುವುದರಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಒಬ್ಬ ಮನುಷ್ಯನಿಗೆ ಜೀವನದಲ್ಲಿ ಆರು ಗಂಟೆಗಳ ನಿದ್ದೆ ಅವಶ್ಯಕ. ರಾತ್ರಿ ಬೇಗನೆ ಮಲಗಿ ಬೆಳಗ್ಗೆ ಬೇಗ ಎದ್ದರೆ ಆರೋಗ್ಯಕ್ಕೆ ಒಳ್ಳೆಯದು ಎಂದು ಹಿಂದಿನಿಂದಲೂ ಕೇಳಿಕೊಂಡು ಬಂದ ಮಾತು. ಆದರೆ ಇತ್ತೀಚೆಗೆ ಯಾಕೊ ಈ ಅಭ್ಯಾಸ ಜನರಲ್ಲಿ ಕಡಿಮೆಯಾಗುತ್ತಿದೆ.ಬದಲಾಗುತ್ತಿರುವ ಜೀವನಶೈಲಿಯೇ ಇಂದು ನಮ್ಮ ನಿದ್ದೆಯನ್ನು ಎಡವಟ್ಟುಗೊಳಿಸುತ್ತದೆ. ನಿದ್ರಿಸಬೇಕಾದ ಸಮಯದಲ್ಲಿ ನಿದ್ದೆ ಮಾಡದಿರುವುದು, ಮನಸ್ಸಾದಾಗ ಕಾಲವಲ್ಲದ ಕಾಲದಲ್ಲಿ ನಿದ್ದೆ ಮಾಡುವುದು ಸಾಮಾನ್ಯವಾಗಿದೆ.ಲೇಟ್ ನೈಟ್ ಪಾರ್ಟಿಗಳು, ಮಿಡ್ ನೈಟ್ ಟಿ.ವಿ ಕಾರ್ಯಕ್ರಮಗಳು, ರಾತ್ರಿಪಾಳಿ ಕೆಲಸಗಳು, ಹೀಗೆ ಹಲವು ರೀತಿಯ ಜೀವನಶೈಲಿಗಳು ಆರೋಗ್ಯಕರ ನಿದ್ದೆಯನ್ನು ನಮ್ಮಿಂದ ದೂರ ಮಾಡುತ್ತಿದೆ.
ನಿದ್ರಾಹೀನತೆ ಹಲವಾರು ರೋಗಗಳಿಗೆ ಮೂಲಕಾರಣ. ದೇಹಾಲಸ್ಯ, ಜೀರ್ಣಕ್ರಿಯೆಯ ಏರುಪೇರು, ಮುಂತಾದುವುಗಳಿಗೆ ಕಾರಣವಾಗುವಂತಹ ನಿದ್ದೆ ಕೆಲವೊಮ್ಮೆ ನಮ್ಮ ನಿತ್ಯ ಚಟುವಟಿಕೆಗಳ ಏರುಪೇರಿಗೂ ಕಾರಣವಾಗುತ್ತದೆ.
ಆರೋಗ್ಯಕರ ಜೀವನಕ್ಕೆ ಸಮತೋಲಿತ ನಿದ್ರೆ ಅತೀ ಅಗತ್ಯ. ಸಕಾಲದಲ್ಲಿ ಸರಿಯಾದ ಪ್ರಮಾಣದಲ್ಲಿ ನಿದ್ರಿಸುವುದು ಒಳಿತು. ಹಾಗಾಗಿ ಚೆನ್ನಾಗಿ ನಿದ್ರೆ ಮಾಡಿ...ರೋಗಗಳಿಂದ ದೂರವಿರಿ.

- ಸನತ್ ಕುಮಾರ್
ಪ್ರಥಮ ಎಮ್.ಸಿ.ಜೆ, ಎಸ್. ಡಿ.ಎಮ್.ಸಿ,ಉಜಿರೆ.

0 comments:

Post a Comment