ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ

ಸ್ಕಂದ ಕೃಪಾ ಗುರುಕುಲ ಉಚಿತ ವಸಂತ ವೇದ ಶಿಬಿರ

ವೇದ ಮೂರ್ತಿ ಚೂಂತಾರು ಕೃಷ್ಣಭಟ್ ಮತ್ತು ಪಾರ್ವತಿ ಭಟ್ ಇವರ ಸ್ಮರಣಾರ್ಥವಾಗಿ ನಡೆಯುವ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಚೂಂತಾರು, ಸ್ಕಂದ ಕೃಪಾ ಗುರುಕುಲದಲ್ಲಿ 3ನೇ ವರ್ಷದ ಉಚಿತ ವಸಂತ ವೇದ ಶಿಬಿರದ ನಡೆಯಿತು. ವೇದ ಮೂರ್ತಿ ಅರ್ತಡ್ಕ ಪ್ರಸನ್ನ ಉದ್ಘಾಟಿಸಿದರು. ಸಭೆಯ ಅಧ್ಯಕ್ಷತೆಯನ್ನು ರಾಮಕೃಷ್ಣ ಹೆಬ್ಬಾರ್ ಶೇಣಿ ಇವರು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಮುಂಡುಗಾರು ಸುಬ್ರಹ್ಮಣ್ಯ ಭಟ್ಟ ಮತ್ತು ಆನೇಕಾರ ರಾಮಚಂದ್ರ ಭಟ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವೇದಮೂರ್ತಿ ಚೂಂತಾರು ಶಿವಪ್ರಸಾದ ನಿರೂಪಿಸಿದರು.
ಶಿಬಿರ 38 ದಿನಗಳ ಕಾಲ ಶಿಬಿರ ನಡೆಯಲಿದೆ. ಶಿಬಿರದಲ್ಲಿ ವೇದಮಂತ್ರ, ಯೋಗ ತರಬೇತಿ, ಸಂಸ್ಕೃತ ಶ್ಲೋಕಗಳು ಕಲಿಸಲಾಗುತ್ತದೆ. ಅಂತರಾಷ್ಟ್ರೀಯ ಯೋಗ ತೀರ್ಪುಗಾರ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಇವರ ಮಾರ್ಗದರ್ಶನದಲ್ಲಿ ಯೋಗ ತರಬೇತಿ ನಡೆಯುತ್ತಿದೆ.ಶಿಬಿರಾರ್ಥಿಗಳ ಆರೋಗ್ಯ ತಪಾಸಣೆಯನ್ನು ಪಾವುಟಾಜೆ ಡಾ| ಪ್ರಕಾಶ ಭಟ್ ಇವರು ಉಚಿತವಾಗಿ ನಿರ್ವಹಿಸುತ್ತಿದ್ದಾರೆ.


ವರದಿ : ವೇದಮೂರ್ತಿ ಚೂಂತಾರು ಶಿವಪ್ರಸಾದ ಭಟ್

0 comments:

Post a Comment