ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ
ಬೆಂಗಳೂರು: ಝೀ ಕನ್ನಡ ಈ ಮಾಸದಾದ್ಯಂತ ಹಮ್ಮಿಕೊಂಡಿರುವ ರಾಜೋತ್ಸವದ ಅಂಗವಾಗಿ ಡಾ. ರಾಜ್ ಕುಮಾರ್ ಅವರ ವಿಶೇಷ ಚಲನಚಿತ್ರೋತ್ಸವ ರಾಜ್ ಹುಟ್ಟು ಹಬ್ಬದ ದಿನವಾದ ಏಪ್ರಿಲ್ 24 ರಂದು ನಡೆಯಲಿದೆ. ಡಾ. ರಾಜ್ ಕುಮಾರ್ ನಟಿಸಿರುವ ನಾಲ್ಕು ಚಿತ್ರಗಳನ್ನು ಬೆಂಗಳೂರಿನ ನವರಂಗ ಮತ್ತು ತ್ರಿವೇಣಿ ಚಿತ್ರಮಂದಿರದಲ್ಲಿ ಪ್ರದರ್ಶಿಸಲಾಗುವುದು. ಬಂಗಾರದ ಮನುಷ್ಯ, ಗಂಧದಗುಡಿ, ಬಬ್ರುವಾಹನ ಮತ್ತು ಜೀವನಚೈತ್ರ ಚಿತ್ರ ಪ್ರದರ್ಶನ ಕಾಣಲಿದೆ.ದಿನಾಂಕ ಚಿತ್ರಮಂದಿರ ಸಮಯ ಚಲನಚಿತ್ರ
24.04.2011 ಭಾನುವಾರ ನವರಂಗ ಬೆಳಗ್ಗೆ 10 ಬಂಗಾರದ ಮನುಷ್ಯ
24.04.2011 ಭಾನುವಾರ ನವರಂಗ ಮಧ್ಯಾಹ್ನ 01 ಗಂಧದಗುಡಿ
24.04.2011 ಭಾನುವಾರ ತ್ರಿವೇಣಿ ಸಂಜೆ 04 ಬಬ್ರುವಾಹನ
24.04.2011 ಭಾನುವಾರ ತ್ರಿವೇಣಿ ರಾತ್ರಿ 7 ಜೀವನಚೈತ್ರ

ಈ ಚಿತ್ರೋತ್ಸವಕ್ಕೆ ಪ್ರವೇಶ ಸಂಪೂರ್ಣ ಉಚಿತವಾಗಿದ್ದು ಆಸಕ್ತರು ಝೀ ಕನ್ನಡ ಕಛೇರಿಗೆ ಭೇಟಿ ನೀಡಿ ನಿಯಮಿತ ಪಾಸುಗಳನ್ನು ಪಡೆಯಬಹುದು.

0 comments:

Post a Comment