ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
8:23 PM

ಸಿಹಿ ಕಹಿ ದಿನಗಳು

Posted by ekanasu

ಸಾಹಿತ್ಯ

ಇರುವುದಿಲ್ಲ ಆ ದಿನ
ಉಳಿಯುವುದು ಆ ನೆನಪು
ತುಂಬಾ ದೂರದಿಂದ ನಡೆದು ಬಂದೆ
ಎಣಿಸಲಸಾಧ್ಯ ಆ ಹೆಜ್ಜೆ
ಅದೆಷ್ಟೊಂದು ತಿರುವು ಬಾಳ ಪಥದಲಿ
ಗೊಂಬೆಯಾದೆನು ಸಮಯದ ಕೈಯಲಿ
ಬಯಸಿದ್ದೆಲ್ಲ ನಡೆಯಲಿಲ್ಲನಡೆದಿದ್ದೆಲ್ಲ ಕಹಿ ಸತ್ಯ
ದೇವರಿದ್ದಾನೆ ಎಂಬುವುದಕ್ಕೆ ಸಾಕ್ಷಿ
ಮೌನ ಮಗ್ನವಾಯಿತು ಮನಸ್ಸು
ಚಿಕ್ಕವರಾಗಿದ್ದಾಗ ದೊಡ್ಡವರಾಗುವ ಚಿಂತೆ
ದೊಡ್ಡವರಾದಾಗ ಚಿಂತೆಗಳ ಕಂತೆ
ಬಾಲ್ಯ, ಯೌವ್ವನ, ವೃದ್ಧಾಪ್ಯ
'ನಾಲ್ಕು ದಿನಗಳ ಜೀವನ'
ಕೇಳಲೆಷ್ಟು ಚೆನ್ನ ಈ ಬಾಯಿಮಾತು
ವರ್ಷಗಳು ಉರುಳಿದವು ಆ ನಾಲ್ಕು
ದಿನ ಕಳೆಯಲು
ಐದನೆ ದಿನವೇ ಸಾವು
ಮುಕ್ತಾಯವಾಯಿತು ಬಾಳ ಪುಟವು

- ಜಬೀವುಲ್ಲಾ ಖಾನ್

0 comments:

Post a Comment