ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಆಟ - ಅವಲೋಕನ

ಬೆಂಗಳೂರು: ನಿರೀಕ್ಷೆ ಹುಸಿಯಾಗದಿರಲಿ...ಭಾರತ ಗೆಲ್ಲಲಿ...ಈ ಅಂಶ ಎಲ್ಲರ ಮನೆ ಮನದಲ್ಲಿ ಮೂಡಿಬರುತ್ತಿದೆ. ಆರಂಭಿಕ ಆಟಗಾರರ ವೈಫಲ್ಯದ ನಡುವೆಯೂ ತಂಡದ ನಾಯಕ ಎಂ.ಎಸ್. ಧೋನಿ ಇದೀಗ ಭರವಸೆಯ ಆಟವಾಡುತ್ತಿದ್ದಾರೆ. 32ಓವರ್ ಗಳನ್ನು ಪೂರೈಸಿರುವ ಭಾರತ ತಂಡ ಮೂರು ವಿಕೆಟ್ ನಷ್ಟಕ್ಕೆ 165ರನ್ ಕಲೆಹಾಕುವಲ್ಲಿ ಯಶಸ್ವಿಯಾಗಿದೆ. ತಂಡದ ಭರವಸೆಯ ಆಟಗಾರ ಗೌತಮ್ ಗಾಂಭೀರ್ 97 ಎಸೆತಗಳಲ್ಲಿ 79ರನ್ ಒಟ್ಟುಗೂಡಿಸಿ ತಂಡಕ್ಕೆ ಆಸರೆಯಾಗಿದ್ದಾರೆ.ಇದೀಗ ಕ್ರಿಕೆಟ್ ಪ್ರಿಯರ ಮನದಲ್ಲಿ ಢವ ಢವ ಪ್ರಾರಂಭಡೊಂಡಿದೆ. ಅತ್ಯಂತ ಕಾತರ, ಕುತೂಹಲ, ನಿರೀಕ್ಷೆಯ ಆಟ ನಡೆಯುತ್ತಿದೆ. ಭಾರತ ಗೆಲ್ಲಲಿ ಎಂಬ ಭಾವನೆ ಎಲ್ಲರ ಮನದಲ್ಲಿ ಮೂಡುತ್ತಿದೆ. ಶ್ರೀಲಂಕಾ ತಂಡದ ವ್ಯವಸ್ಥಿತ ಕ್ಷೇತ್ರ ನಿರ್ವಹಣೆ ಭಾರತ ತಂಡಕ್ಕೆ ದೊಡ್ಡ ತೊಡಕಾಗುತ್ತಿದೆ. ಉತ್ತಮ ಬೌಲಿಂಗ್ , ಫೀಲ್ಡಿಂಗ್ ನಿಂದಾಗಿ ಭಾರತ ಸುಲಭ ಜಯ ಸಾಧಿಸಲು ಅಸಾಧ್ಯವಾಗುತ್ತಿದೆ.
ಏನೇ ಆಗಲಿ ಭಾರತ ತಂಡ ಗೆಲ್ಲಲೇ ಬೇಕು. ಭಾರತಕ್ಕೆ 2011ರ ವಿಶ್ವಕಪ್ ದೊರಕಲೇ ಬೇಕು. ಇದು ಭಾರತೀಯರ ಆಸೆ.ಅದು ಈಡೇರಲಿ.

0 comments:

Post a Comment