ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಕಳೆದ ಕೆಲದಿನಗಳಿಂದ ರಾಜಧಾನಿ ಬೆಂಗಳೂರಿನಲ್ಲಿ ದಾಂಧಲೆ ಎಬ್ಬಿಸಿದ ಮಳೆರಾಯ ಇದೀಗ ಕರಾವಳಿಯತ್ತ ಕೃಪೆತೋರಿದ್ದಾನೆ. ಕರಾವಳಿಯ ಜನತೆ ಇಂದು ಬೆಳಗ್ಗೆ ಹಾಸಿಗೆಯಿಂದೇಳುತ್ತಲೇ ಮಳೆರಾಯನ ದರುಷನ ಭಾಗ್ಯ ಲಭಿಸಿದೆ. ಮುಂಗಾರು ಮಳೆಯನ್ನು ನೆನಪಿಸುವಂತೆ ಧಾರಾಕಾರವಾಗಿ ಮಳೆಯಾಗಿದೆ. ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ ವಿವಿಧೆಡೆಗಳಲ್ಲಿ ಮಳೆ ಬಿರುಸಿನಿಂದ ಸುರಿದಿದೆ. ಕಳೆದೆರಡು ದಿನಗಳಿಂದ ನೆರೆಯ ಕೇರಳದ ಕೆಲವು ಭಾಗಗಳಲ್ಲೂ ಮಳೆಯಾಗಿದೆ. ಮೋಡಕವಿದ ವಾತಾವರಣ ಮುಂದುವರಿದಿದೆ.ಗುಡುಗು,ಸಿಡಿಲು,ಗಾಳಿಯ ಅಬ್ಬರವೂ ಅಧಿಕವಾಗಿತ್ತು.

0 comments:

Post a Comment