ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
6:28 PM

ಭಾವನೆ...ವೇದನೆ...

Posted by ekanasu

ಸಾಹಿತ್ಯ

ಎಲ್ಲಾ ಮರೆತೊಮ್ಮೆ ನಕ್ಕುಬಿಡು
ಆದಾಗದಿದ್ದರೆ ಅತ್ತುಬಿಡು
ಮನದೊಳಿಟ್ಟು ಕೊರಗಬೇಡ
ಶೂನ್ಯಕ್ಕೆ ದೃಷ್ಠಿಯಿಕ್ಕ ಬೇಡ
ಅತ್ತುಬಿಡು ಇಲ್ಲವೇ ನಕ್ಕುಬಿಡು...ಬಿರುಗಾಳಿ ಇದ್ದರೇನು ದೀಪ ಹಚ್ಚು
ಯಾರಿಗೆ ಯಾರೂ ಶತ್ರುವಲ್ಲ
ಗಾಳಿ ಬೀಸಬೇಕು, ದೀಪ ಬೆಳಗಬೇಕು
ಬದುಕಿಗೆ ಕತ್ತಲೆಯು ಉತ್ತರವಲ್ಲ

ಬಾಳಿನ ಬಾಗಿಲು ತೆರೆ ಭರವಸೆಯ
ಬೆಳಕು ಪ್ರತಿಬಿಂಭಿಸಲಿ ಒಳಗೆ
ಧೂಳು ಮೈಚಾಚದೆ ಮನೆಯೊಳಗೆ
ಒದ್ದು ಓಡಿಸು ಹೊರಗೆ

ಎಚ್ಚೆತ್ತ ಅನುಮಾನಗಳ ಹಲ್ಲುಮುರಿ
ನಿಂದೆ ಅಪವಾದಗಳ ಸೊಕ್ಕುಮುರಿ
ಶೃಂಗರಿಸಿಡು ಸೋಲು - ಗೆಲುವು, ಕಷ್ಟ ಸುಖ
ಮುನ್ನುಗ್ಗುವುದಾದರೆ ಸಿಗಲಾರದೆ ಗುರಿ?

ಬಂದದ್ದೆಲ್ಲಾ ಬರಲೆಂದು ನಕ್ಕು
ಎದೆಯೊಳಗೊಂದ ಕಲ್ಲನಿಕ್ಕು
ಹರಿವ ನದಿ ನಿಂತಲ್ಲೇ ನಿಂತರೆ
ಸೇರುವುದೇ ಕಡಲ ?
ಸುಡುವ ಕೆಂಡ ಮಡಿಲಲಿದ್ದರೆ
ಸುಡದಿರುವುದೇ ಒಡಲ...?

- ಸೌಮ್ಯ , ಸಾಗರ.

0 comments:

Post a Comment