ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ಅವಾರ್ಡ್

ಕೈ ಕಾಲು ಕಣ್ಣು ಎಲ್ಲ ನೆಟ್ಟಗಿದ್ದು,
ಅನ್ನ ಸಾರು ಪಲ್ಯವೆಲ್ಲ ತಟ್ಟೆಲಿದ್ದು,
ನಿನ್ನ ಕಾರ್ಯ ಮಾಡಲೇನು ರಟ್ಟೆ ಮುರಿದು,
ಕೇಳು ನೀ ಜನರ ಗೋಳು ಸುತ್ತ ಕಟ್ಟೆ ಹೊಡೆದು.

ಕಾಯುತ್ತಿವೆ ಜೀವಗಳು ಅತೀವ ನೊಂದು,
ಬೇಡಿವೆ ಬಾಳಿನಲಿ ಅವು ಬೆಳಕನ್ನೊಂದು,
ನೀನಾಗ ಬೇಕಂತೆ ಅವರಿಗೆ ಅಮೃತ ಬಿಂದು,
ನೋಡುತ್ತಿವೆ ದಾರಿಯನು ನೀ ಬರುವೇ ಎಂದು.


ಭೂತಾಯಿ ಕೂಗಿಹಳು ಬಾರೋ ಕಂದ,
ನೋಡು ನನ್ನ ಪಾಡು ಎಂದಳು ನೋವಿನಿಂದ,
ಮಕ್ಕಳೇ ಕೆಡಸಿಹರು ನನ್ನ ಅಂದ: ಚಂದ,
ಇನ್ನು ನಿಮಗೆಲ್ಲ ಗತಿಯವನೇ ಮುಕುಂದ.

ಸುಖದ ಸುಪ್ಪತ್ತಿಗೆಯಿಂದ ಮೇಲೆದ್ದು ನೋಡು,
ಗೋಚರಿಸುವುದು ನಿನಗೆ ಸುತ್ತ ಕತ್ತಲಿನ ಕಾಡು,
ಒಳಹೊಕ್ಕು ಭೀತಿಯ ನಿರ್ಮೂಲನೆ ಮಾಡು,
ಆಗುವುದು ಈ ಜಗ ರಸಭರಿತ ಬೀಡು.

-ರಾಚಕು.
(ರಾಕೇಶ್ ಚಂದ್ರ ಕುಮಾರ್, ಬೆಂಗಳೂರು. )
rb.e. electrical student,PESIT,bengaluru.

0 comments:

Post a Comment