ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಎಲ್ಲರ ಊಹೆಯಂತೆಯೇ ಬಾಬಾ ಹಲವು ದಿನಗಳ ಹಿಂದೆಯೇ ಮೃತಪಟ್ಟಿದ್ದಾರೆ...ಹೌದು ...ಅಚ್ಚರಿಯಾದರೂ ಇದು ಸತ್ಯವೇ ಇರಬಹುದು ಎಂಬುದು ಇತ್ತೀಚೆನ ಕೆಲವೊಂದು ಸಂಗತಿಗಳನ್ನು ಪರಾಂಬರಿಸಿ ನೋಡುವಾಗ ತಿಳಿಯುತ್ತದೆ.


ಸತ್ಯಸಾಯೀ ಬಾಬಾ ಅವರು ಮೃತಪಟ್ಟಿರುವುದನ್ನು ಅಧಿಕೃತವಾಗಿ ಘೋಷಿಸಿದ್ದು ಬೆಳಗ್ಗೆ 7.40ಕ್ಕೆ. ಆ ತನಕ ಸತ್ಯಸಾಯೀ ಬಾಬಾ ಅವರು ಯಾವ ರೀತಿಯಿದ್ದಾರೆ; ಹೇಗಿದ್ದಾರೆ ಎಂಬುದನ್ನು ಅಸ್ಪಷ್ಟಮಾಹಿತಿಯನ್ನಷ್ಟೇ ನೀಡುವ ಮೂಲಕ ಟ್ರಸ್ಟ್ ಹಾಗೂ ಸಂಬಂಧಿತ ಮಾಹಿತಿದಾರರು ನೀಡಿದರೇ ವಿನಃ ಬಾಬಾ ರನ್ನು ಅವರ ಬಂಧುಗಳಿಗಾಗಲೀ, ಭಕ್ತವೃಂದಕ್ಕಾಗಲೀ ನೋಡುವ ಸೌಭಾಗ್ಯ ನೀಡಿಲ್ಲ. ಅಷ್ಟಕ್ಕೂ ಆಸ್ಪತ್ರೆಯೊಳಗೆ ಪ್ರವೇಶಕ್ಕೂ ಅವಕಾಶವಿದ್ದಿರಲಿಲ್ಲ. ಅವೆಲ್ಲಕ್ಕಿಂತ ಮುಖ್ಯವಾಗಿ ಬಾಬಾ ಅವರ ಮೃತದೇಹಕ್ಕೆ ಪೂರ್ತಿಯಾಗಿ ಬಟ್ಟೆ ಆವರಿಸಲಾಗಿದ್ದು ಕಣ್ಣಿನ ಭಾಗವನ್ನಷ್ಟನ್ನು ಹೊರತುಪಡಿಸಿದರೆ ಉಳಿದ ಯಾವುದೇ ಭಾಗವನ್ನು ತೋರಿಸಲಾಗಿಲ್ಲ. ಇದಕ್ಕೆ ಕಾರಣವೇನು? ಈ ರೀತಿ ಮಾಡಿದ್ದು ಎಷ್ಟರ ಮಟ್ಟಿಗೆ ಸರಿ? ಇದು ಬಾಬಾ ಅವರ ಭಕ್ತವೃಂದ ಕೇಳುವ ಪ್ರಶ್ನೆಯಾಗಿದೆ. ಈ ಎಲ್ಲಾ ಸಂದೇಹಗಳನ್ನು ಅವಲೋಕಿಸುವಾಗ ಬಾಬಾ ಇಂದು ನಿಧನರಾದದ್ದು ಸತ್ಯವೇ ಎಂಬ ಪ್ರಶ್ನೆ ಧುತ್ತೆಂದು ಉದ್ಭವಿಸುತ್ತಿದೆ.

ಬಾಬಾ ಅವರ ಮೃತದೇಹವನ್ನು ಪ್ರಶಾಂತಿ ನಿಲಯಂ ನಲ್ಲಿರುವ ಕುಲ್ವಂತ್ ಹಾಲ್ ನಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ. ಬುಧವಾರ ಈ ಅಂತ್ಯಕ್ರಿಯೆಯ ವಿಧಿ ವಿಧಾನಗಳು ನಡೆಯಲಿವೆ. ಆಂಧ್ರಪ್ರದೇಶದಲ್ಲಿ ನಾಲ್ಕು ದಿನಗಳ ಶೋಕಾಚರಣೆ ನಡೆಯಲಿದೆ. ಸರಕಾರಿ ರಜೆ ಘೋಷಿಸಲಾಗಿದೆ. ಆದರೆ ಬಾಬಾ ಅವರು ನಿಜವಾಗಿಯೂ ದೈವಾದೀನರಾಗಿದ್ದು ಯಾವಾಗ?
ಕೊನೆಯ ಪಕ್ಷ ಬಾಬಾ ಅವರ ಮುಖ ದರ್ಶನಕ್ಕೂ ಅವಕಾಶ ನೀಡದಿರುವುದಕ್ಕೆ ಕಾರಣವೇನು? ಎಲ್ಲವನ್ನು ನಿಗೂಢವಾಗಿ ನಡೆಸುತ್ತಿರುವುದರ ಹಿಂದಿನ ರಹಸ್ಯಗಳೇನು...? ಇವೆಲ್ಲವೂ "ಮಿಲಿಯನ್ ಡಾಲರ್"ಪ್ರಶ್ನೆಯಾಗಿ ಉಳಿದಿದೆ.

0 comments:

Post a Comment