ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
9:48 AM

ಮಳೆ...ನಿರೀಕ್ಷೆ...

Posted by ekanasu

ಸಾಹಿತ್ಯ

ಮುಗಿಲ ಮೊದಲ ಮುತ್ತಿನ ಹನಿಯನು ಪಡೆಯುವ ತವಕ..
ಬೆಂದ ಒಡಲ ಕರೆಯಿದು ಕೇಳು ಓ ಜಲಕನಕ..
ನಿನ್ನನೆ ಕಾಯುತ ಕಾತರದಿಂದು
ಇಳೆಗೆ ನೀ ಬಾರೆ ಓ ಅಮೃತಬಿಂದು
ನಿನ್ನದೇ ಕನಸನು ಧರೆ ಕಾಣುತ್ತಿರುವಾಗ...ಜಲಲ ಜಲ ಧಾರೆ
ಧುಮ್ಮಿಕ್ಕಿ ಬಾರೆ
ಅಳುವ ಮೊಗದ ನೋವು ಕೊಚ್ಚಿ ಹೋಗಲಿ
ನಲಿವು ನಗು ತಾರೆ
ಧಾವಂತ ನೀರೆ
ಅಳುಕು ಮರೆತು ಹಾಡು ಶುರುವಾಗಲಿ
ಸೋತು ಸುಣ್ಣಾಗಿದೆ
ಸಾಕು ಈ ಧಗೆ
ನಿನ್ನದೇ ಕನಸಲಿ ಧರೆ ನಿದ್ರಿಸುತಿರುವಾಗ...

ಹಸಿರು ಬಣ್ಣವನು
ಬೇಗ ಮರಳಿಸಿನ್ನು
ಹೊತ್ತಿದ ಮರದಿ ಚಿಗುರು ಒಡೆಯಲಿ
ತುಕ್ಕು ಹಿಡಿದ ಹಾಗೆ
ಅಂದವಿಲ್ಲದ ಬಗೆ
ಬತ್ತಿದ ಕೆರೆಲಿ ನೀರು ಹರಿಯಲಿ
ನಾಳೆಯ ಮಳೆಯಲಿ ನೆನೆದು
ಇಂದು ನಗುತಿರಲು
ನಿನ್ನದೇ ಕನಸನು ಧರೆ ಕಾಣುತ್ತಿರುವಾಗ...

- ಚಿನ್ಮಯ ಬಾಯಾರು.

0 comments:

Post a Comment