ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ಅವಾರ್ಡ್
'ಆನಂದಮಯ ಈ ಜಗ ಹೃದಯ ಏತಕೆ ಭಯ ಮಾನೋ ಸೂರ್ಯೋದಯ ಚಂದ್ರೋದಯ ಎಲ್ಲಾ ದೇವರ ದಯ ಕಾಣೋ'. ಎಂದು ರಸಋಷಿ ಕುವೆಂಪು ಅವರು ಹಾಡಿನ ಮೂಲಕ ತಿಳಿಸಿದ್ದಾರೆ. ಮನುಷ್ಯನಿಗೆ ತಿಳಿಯದಂತಹ ಅನೇಕ ನಿಗೂಢಗಳು ಸೌರಮಂಡಲದಲ್ಲಿ ಅಡಗಿದೆ. ಆದರೆ ಇಂದು ವಿಜ್ಞಾನ ಬೆಳೆದಂತೆಲ್ಲಾ ಅನೇಕ ಹೊಸ ಹೊಸ ವಿಷಯಗಳನ್ನು ಕಂಡು ಹಿಡಿಯುವುದರಲ್ಲಿ ವಿಜ್ಞಾನಿಗಳು ಯಶಸ್ವಿಯಾಗುತ್ತಿದ್ದಾರೆ.

ಚಿಕ್ಕ ಮಕ್ಕಳಿಗೆ ಚಂದ್ರನೆಂದರೆ ತುಂಬಾ ಇಷ್ಟ, ಮಕ್ಕಳನ್ನು ಊಟ ಮಾಡಿಸಲು ಅನೇಕ ತಾಯಂದಿರು ಚಂದ್ರನನ್ನು ತೋರಿಸುತ್ತಾರೆ, ಅಲ್ಲದೆ ಅನೇಕೆ ಪೌರಾಣಿಕ ಕಥೆಗಳಲ್ಲೂ ಕೂಡ ಚಂದ್ರನ ಬಗ್ಗೆ ತಿಳಿಯುತ್ತೇವೆ. ಶ್ರೀರಾಮನು ತನಗೆ ಚಂದ್ರಬೇಕೆಂದು ಹಟಹಿಡಿದಾಗ ಮಂಥರೆಯು ಕನ್ನಡಿಯನ್ನು ಹಿಡಿದು ಚಂದ್ರನನ್ನು ತೋರಿಸಿದಳು. ಕವಿಗಳಿಗೆ ಕೂಡ ಚಂದ್ರ ಅತ್ಯಂತ ಪ್ರೀತಿಯ ವಿಷಯ.ಅಲ್ಲದೆ ಪ್ರಕೃತಿಯು ಕೂಡ ಚಂದ್ರನನ್ನು ಮೆಚ್ಚುತ್ತದೆ. ಹೇಗೆಂದರೆ ತುಂಬಿದ ಹುಣ್ಣಿಮೆಯ ದಿನ ಕಡಲು ಉಕ್ಕುತ್ತದೆ. ಹೀಗೆ ಚಂದ್ರ ಎಲ್ಲರಿಗೂ ಪ್ರೀತಿಯ ಗ್ರಹವಾಗಿ ಕಾಣುತ್ತಿದ್ದಾನೆ. ಚಂದ್ರ ವಿಜ್ಞಾನಿಗಳಿಗೂ ಕೂಡ ಅತ್ಯಂತ ಪ್ರೀತಿಯ ವಿಷಯ. ಅವನಲ್ಲಿ ಅನೇಕ ನಿಗೂಡಗಳು ಅಡಗಿದೆ ಅದು ಹೇಗೆ ಎಂದು ನೋಡೊಣ.

ಚಂದ್ರನಲ್ಲಿ ನೀರಿಲ್ಲ ವಾತವರಣವಿಲ್ಲ ಈ ಬರಡು ಆಕಾಶಕಾಯದಿಂದ ನಮಗೇನು ಪ್ರಯೋಜನವಿಲ್ಲ ಅಂತ ತಿಳಿದ ವಿಜ್ಞಾನಿಗಳು 1972ರ ನಂತರ ಚಂದ್ರನ ಬಗ್ಗೆ ಆಸಕ್ತಿಕಳೆದುಕೊಂಡರು. ಮತ್ತೆ ದೀರ್ಘಕಾಲದ ನಂತರ 1994ರಲ್ಲಿ ಲೆಮೆಂಟೈನ್ ಎಂಬ ಅಮೇರಿಕಾದ ಉಪಗ್ರಹ ಚಂದ್ರನ ಸುತ್ತ ಪ್ರದಕ್ಷಿಣಿ ಹಾಕಿ ಹಲವು ಫೋಟೋಗಳನ್ನು ಭೂಮಿಗೆ ಕಳುಹಿಸಿತು. ಅದು ಕಳುಹಿಸಿದ ಒಂದು ಫೋಟೋದ ಅಧ್ಯಯನ ಮಾಡುವಾಗ ಚಂದ್ರನ ದಕ್ಷಿಣ ಧ್ರುವದ ಬಳಿ ಇರುವ ಒಂದು ಹೊಂಡದಲ್ಲಿ ಮಂಜುಗಡ್ಡೆ ಇರುವಂತೆ ಕಂಡಿತು. ಇದನ್ನು ಖಚಿತಪಡಿಸುವುದಕ್ಕಾಗಿ 1998ರಲ್ಲಿ ಅಮೇರಿಕಾದ ನಾಸಾದ ವಿಜ್ಞಾನಿಗಳು ಲೂನರ್ ಪ್ರಾಸ್ವೆಕ್ಟರ್ ಎಂಬ ಉಪಗ್ರಹವನ್ನು ಚಂದ್ರನ ಬಳಿ ಕಳುಹಿಸಿದರು. ಒಂದೂವರೆ ವರ್ಷ ಚಂದ್ರನ ಸುತ್ತ ಪ್ರದಕ್ಷಿಣೆ ಹಾಕಿ ಇದು ತೆಗೆದ ಸಾವಿರಾರು ಫೋಟೋ ಚಂದ್ರನ ಧ್ರುವ ಪ್ರದೇಶದಲ್ಲಿ ಧಾರಾಳ ಮಂಜುಗಡ್ಡೆ ಇದೆ ಎಂಬುದನ್ನು ಖಚಿತಗೊಳಿಸಿತು.

ಈ ಮಂಜುಗಡ್ಡೆ ನೀರಿನ ಮಂಜುಗಡ್ಡೆಯಾದರೆ ಬಿಸಿ ಮಾಡಿ ನೀರು ಪಡೆಯಬಹುದು. ಮಾತ್ರವಲ್ಲ ನೀರನ್ನು ವಿಭಜಿಸಿ ಆಮ್ಲಜನಕ ಮತ್ತು ಜಲಜನಕ ಪಡೆಯಬಹುದು. ಈ ಆಮ್ಲಜನಕ ಮತ್ತು ನೀರು ಉಪಯೋಗಿಸಿ ಚಂದ್ರನಲ್ಲಿ ವಾಸಿಸಬಹುದು ಈ ಆಮ್ಲಜನಕ ಮತ್ತು ಜಲಜನಕವನ್ನು ರಾಕೆಟ್ ಇಂಧನವಾಗಿ ಬಳಸಿ ರಾಕೆಟನ್ನು ಮುಂದೆ ಚಂದ್ರನ ಮೇಲಿಂದ ಅಂತರ್ಗ್ರಹದ ಪ್ರಯಾಣಕೂಡ ಮಾಡಬಹುದು ಹೀಗೆ ಚಂದ್ರನಿಂದ ಬಹಳ ಪ್ರಯೋಜನ ಪಡೆಯಲು ಸಾಧ್ಯ ಎಂಬ ಆಲೋಚನೆ ವಿಜ್ಞಾನಿಗಳಿಗೆ ಬಂತು. ಹಾಗಾಗಿ ಚಂದ್ರನ ಬಳಿಗೆ ಅನೇಕ ವ್ಯೋಮ ಸಂಶೋಧನೆಗಳನ್ನು ಕಳುಹಿಸಲು ಕೆಲವು ದೇಶದವರು ತಯಾರಿನಡೆಸಿದರು ಅಷ್ಟರಲ್ಲಿ ಡಾ||ಎ.ಪಿ.ಜಿ. ಅಬ್ದುಲ್ ಕಲಾಂ ಅವರ ಕನಸಿನ ಕೂಸಾದ ' ಚಂದ್ರಯಾನ-1 2003ರಲ್ಲಿ ಇದರ ಬಗ್ಗೆ ಚಿಂತನೆ ನಡೆಸಲಾಯಿತು. ಚಂದ್ರಯಾನದ ಮುಖ್ಯ ಉದ್ದೇಶ ಚಂದ್ರನಲ್ಲಿ ಹೀಲಿಯಂ-3 ಇದೆ ಎಂದು ಹೇಳಲಾಗಿದೆ. ಇದನ್ನು ವಿದ್ಯುತ್ ಉತ್ಪಾದನೆಗೆ ಬಳಸಬಹುದು ಮತ್ತು ಅನೇಕ ವಿಷಯಗಳನ್ನು ತಿಳಿಯುವುದಕ್ಕಾಗಿ ಭಾರತೀಯರು 2008ರಲ್ಲಿ ಚಂದ್ರಯಾನ-1 ಎಂಬ ಉಪಗ್ರಹವನ್ನು ಕಳುಹಿಸಿಯೇ ಬಿಟ್ಟರು. 2009ರಲ್ಲಿ ಬೇರೆ ಯಾವ ದೇಶದವರು ಮಾಡದೆ ಇರುವ ಸಾಧನೆಯನ್ನು ಚಂದ್ರಯಾನ-1 ಮಾಡಿತು. ಅದೇ ಚಂದ್ರನ ಮೇಲೆ ನೀರಿನ ಅಣುಗಳ ಪತ್ತೆ. ಕೂಡಲೇ ಅಮೇರಿಕಾದಮ ಒಂದು ರಾಕೆಟ್ ಬಾಂಬನ್ನು ಚಂದ್ರನ ಧ್ರುವ ಪ್ರದೇಶದ ಒಂದು ಆಳವಾದ ಗುಳಿಯಲ್ಲಿ ಸಿಡಿಸಿ ಅಲ್ಲಿಯ ಮಂಜುಗಡ್ಡೆ ನೀರಿನದೆ ಎಂಬುದನ್ನು ಖಚಿತಗೊಳಿಸಿದರು.

- ನಿಶಾ
ಪ್ರಥಮ ಬಿ.ಎಸ್ಸಿ (ಪಿ.ಸಿ.ಎಂ)
ಆಳ್ವಾಸ್ ಮೂಡಬಿದಿರೆ.

1 comments:

manjula.g I B.com... bengaluru said...

nisha really superb idea and you have expressed it very well.......... and definitely your language is good to read....... keep it up and keep continuing.........happy new year and wish you a bright and colourful future....

Post a Comment