ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಪುಟ್ಟಪರ್ತಿ: ಸತ್ಯಸಾಯೀ ಬಾಬಾ ಅವರು ದೈವಾಧೀನರಾಗಿ ದಿನ ಕಳೆದಿದೆ. ಬಾಬಾರ ಭಕ್ತವೃಂದ ವಿಶ್ವದಾದ್ಯಂತದಿಂದ ಪಸರಿಸಿದ್ದು; ವಿವಿದೆಡೆಗಳಿಂದ ಭಕ್ತಾಧಿಗಳು ಪಾರ್ಥಿವ ಶರೀರದ ಅಂತಿಮ ದರ್ಶನಕ್ಕಾಗಿ ಆಗಮಿಸುತ್ತಿದ್ದಾರೆ. ಸುಮಾರು 50ಸಾವಿರಕ್ಕೂ ಅಧಿಕ ಮಂದಿ ಈಗಾಗಲೇ ಬಾಬಾ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ್ದಾರೆ. ಭಾರತೀಯ ಕ್ರಿಕೆಟ್ ತಾರೆ ಸಚಿನ್ ತೆಂಡುಲ್ಕರ್ ಸೇರಿದಂತೆ ವಿವಿಧ ಗಣ್ಯರು ಇಂದು ಅಂತಿಮ ದರ್ಶನ ಪಡೆದರು.ಬಾಬಾ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ನಾಲ್ಕು ಕಿಲೋಮೀಟರ್ ದೂರದಿಂದಲೇ ಸರತಿ ಸಾಲಿನಲ್ಲಿ ಭಕ್ತವೃಂದ ಕಾದು ದರ್ಶನ ಭಾಗ್ಯ ಪಡೆಯುತ್ತಿದೆ. ಬಾಬಾ ಮತ್ತೆ ಹುಟ್ಟಿ ಬಂದೇ ಬರುತ್ತಾರೆಂಬ ಅಚಲ ನಂಬಿಕೆ, ವಿಶ್ವಾಸ ಬಾಬಾ ಅವರ ಭಕ್ತವೃಂದದಲ್ಲಿದೆ. ಬುಧವಾರ ಬಾಬಾ ಅವರ ಅಂತ್ಯಕ್ರಿಯೆ ನಡೆಯಲಿದೆ.

0 comments:

Post a Comment