ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಪುತ್ತೂರು: ವಿಶ್ವದಾದ್ಯಂತ ಎಂಡೋಸಲ್ಫಾನ್ ನಿಷೇಧಗೊಂಡಿದೆ.ಇದಕ್ಕೆ ಸಂಪೂರ್ಣ ಜನತೆ ಸಂಭ್ರಮಿಸುತ್ತಿದ್ದಾರೆ. ಮಹಾಮಾರಿ ಎಂಡೋಸಲ್ಫಾನ್ ನಿಂದಾಗಿ ಹಲವು ಕುಟುಂಬಗಳು ತೀವ್ರ ತೊಂದರೆಯನ್ನನುಭವಿಸಿದೆ. ಎಂಡೋ ಮಾರಿಯಿಂದ ಜೀವನ ಪೂರ್ತಿ ನೋವನ್ನನುಭವಿಸುತ್ತಿರುವ, ಎಂಡೋ ಮಾರಿಗೆ ಬಲಿಯಾದ ಅನೇಕಾನೇಕ ಜೀವಗಳಿಗೆ ಎಂಡೋ ನಿಷೇಧದಿಂದ ಮುಕ್ತಿ ಸಿಕ್ಕಿದಂತಾಗುವುದರಲ್ಲಿ ಸಂದೇಹವಿಲ್ಲ. ಎಂಡೋ ಮಾರಿಯ ನಿಷೇದಕ್ಕೆ ಭಾರತದಾದ್ಯಂತ ಸೇರಿದಂತೆ ಕರ್ನಾಟಕ, ದಕ್ಷಿಣ ಕನ್ನಡದಲ್ಲಿ ತೀವ್ರ ಹರ್ಷ ವ್ಯಕ್ತವಾಗಿದೆ. ಪುತ್ತೂರಿನಲ್ಲಿ ಹರ್ಷ ವ್ಯಕ್ತವಾಗಿದೆ. ಕಳೆದ ಅನೇಕ ವರ್ಷಗಳಿಂದ ನಡೆಯುತ್ತಿದ್ದ ಹೋರಾಟಕ್ಕೆ ಯಶ ಸಿಕ್ಕಿದೆ ಎಂದು ಹೋರಾಟಗಾರರು ಪ್ರತಿಕ್ರಿಯಿಸಿದ್ದಾರೆ.ಪುತ್ತೂರು ತಾಲೂಕು ಸೇರಿದಂತೆ ಹಲವು ಪ್ರದೇಶಗಳಲ್ಲಿ ಎಂಡೋಸಲ್ಫಾನ್ ಸಿಂಪಡಣೆಯಿಂದಾಗಿ ವಿವಿದ ಕಡೆ ಹಲವಾರು ಕಾಯಿಲೆಗಳಿಂದ ಜನರು ಬಳಲುತ್ತಿದ್ದರು. ಹೀಗಾಗಿ ಎಂಡೋಸಲ್ಫಾನ್ನಂತಹ ವಿಷಕಾರಿ ವಸ್ತು ಭಾರತದಲ್ಲಿ ನಿಷೇಧಗೊಳ್ಳಬೇಕು ಎಂಬ ಪ್ರಬಲವಾದ ಬೇಡಿಕೆ ವ್ಯಕ್ತವಾಗಿತ್ತು. ಹೀಗಿದ್ದರೂ ಭಾರತವು ಈ ಬಗ್ಗೆ ಗಮನಹರಿಸಿರಲಿಲ್ಲ. ಆದರೆ ಕರ್ನಾಟಕದಲ್ಲಿ ಕಳೆದ 4 ತಿಂಗಳಿನಿಂದ ಎಂಡೋಸಲ್ಫಾನ್ ಮಾರಾಟ ನಿಷೇಧಗೊಂಡಿತ್ತು.ಇಡೀ ದೇಶದಲ್ಲಿ ಎಂಡೋ ನಿಷೇಧವಾಗಬೇಕೆಂದು ಪ್ರತಿಭಟನೆ ವ್ಯಕ್ತವಾಗಿತ್ತು. ಶುಕ್ರವಾರದವರೆಗೆ ಸ್ಟಾಕ್ಹೋಂನಲ್ಲಿ ನಡೆದ ಸಭೆಯಲ್ಲಿ ಎಂಡೋವಿರುದ್ಧ ಭಾರತ ಮಾತನಾಡಬೇಕೆಂಬ ಒತ್ತಾಯವೂ ಕೇಳಿಬಂದಿತ್ತು. ಇದೀಗ ಎಲ್ಲಾ ದೇಶಗಳು ಎಂಡೋವಿರುದ್ದ ಮಾತನಾಡಿದ್ದರ ಪರಿಣಾಮವಾಗಿ ಇಡೀ ವಿಶ್ವದಲ್ಲೇ ಎಂಡೋಸಲ್ಫಾನ್ ಮಾರಾಟ ನಿಷೇಧಗೊಂಡಿದೆ.

ಈ ನಿಷೇಧಕ್ಕೆ ಎಂಡೋಸಲ್ಫಾನ್ ವಿರುದ್ದ ಹೋರಾಟಗಾರರಾದ ಪಟ್ರಮೆಯ ಶ್ರೀಧರ ಗೌಡ , ಸಾಮಾಜಿಕ ಕಾರ್ಯಕರ್ತ ಸಂಜೀವ ಗೌಡ ಕಬಕ , ಬಳಕೆದಾರರ ಹಿತರಕ್ಷಣಾ ವೇದಿಕೆಯ ಪುತ್ತೂರಿನ ಸಂಚಾಲಕ ಸಂಘದ ಡಾ.ನಿತ್ಯಾನಂದ ಪೈ ,ಸಂತಸ ವ್ಯಕ್ತಪಡಿಸಿದ್ದಾರೆ.ಸಂತ್ರಸ್ತರಿಗೆ ಪರಿಹಾರ ನೀಡುವ ಕೆಲಸವನ್ನು ಇನ್ನು ಸರಕಾರ ಮಾಡಬೇಕಾಗಿದೆ ಎಂದು ಇದೇ ವೇಳೆ ಒತ್ತಾಯಿಸಿಲಾಗಿದೆ.

- ಮಹೇಶ್ ಪುಚ್ಚಪ್ಪಾಡಿ.

0 comments:

Post a Comment