ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ಅವಾರ್ಡ್
ಸಾಂಸ್ಕೃತಿಕ ನಗರಿ ಮೈಸೂರಿನ ಹೆಸರಿನೊಂದಿಗೆ ಅನೇಕ ವಸ್ತುಗಳು ತಳುಕು ಹಾಕಿಕೊಂಡಿದೆ. ಅದರಲ್ಲಿ ಮೈಸೂರ್ ಝೂ, ಮೈಸೂರ್ ಮಲ್ಲಿಗೆ, ಮೈಸುರು ಟಾಂಗಾ, ಮೈಸೂರು ಅರಮನೆ, ಮೈಸೂರ್ ಸ್ಯಾಂಡಲ್ ಮತ್ತು ಮೈಸೂರು ವೀಳ್ಯದೆಲೆ ಹೀಗೆ ಅನೇಕ ಹೆಸರುಗಳು ಮೈಸೂರಿನೊಂದಿಗೆ ಬೆರೆತಿವೆ. ಅವುಗಳ ಜೊತೆ ಜೊತೆಯಲ್ಲ್ಲಿ ಎಲ್ಲರ ಬಾಯಲ್ಲೂ ಮೂಡುವ ಮತ್ತೊಂದು ಹೆಸರೇ ಮೈಸೂರು ಪಾಕ್...ಇದು ಅತ್ಯಂತ ರುಚಿಕರ ವಿಶ್ವ ವಿಖ್ಯಾತ .ಹೆಸರು ಕೇಳಿದರೇ ಬಾಯಲ್ಲಿ ನೀರೂರಿಸುವ ಇದರ ಸ್ವಾದ ಸವಿದೇ ಅರಿಯಬೇಕು.


ಈ ಸಿಹಿ ತಿಂಡಿಯ ಹೆಸರಿನ ಹಿಂದೆ ಸಣ್ಣ ಕುತೂಹಲಕಾರಿ ಕಥೆ ಇದೆ. ಹೆಸರು ಕೇಳಿದರೆ ಬಾಯಲ್ಲಿ ನೀರೋರಿಸೂವ ಮೈಸೂರು ಪಾಕಿಗೂ ಮೈಸೂರಿಗೂ ಎಲ್ಲಿಲ್ಲದ ಸಬಂಧ! ಏಕೆಂದರೆ ಮೈಸೂರು ಪಾಕ್ ಪ್ರಥಮವಾಗಿ ತಯಾರಾಗಿದ್ದು ಮೈಸೂರು ಅರಮನೆಯಲ್ಲಿ, ಮೈಸೂರು ಅರಮನೆಯು ಅಥಿತಿ ಸತ್ಕಾರಕ್ಕೆ ಹೆಸರುವಾಸಿ, ಹಾಗಾಗೀ ಯಾವಾಗಲು ಪಂಚ ಭ್ಷಕ್ಯ ಪರಮಾನ್ನ ತಯಾರಾಗುತ್ತಲೇ ಇರುತ್ತಿತು.

ಅರಮನೆಯ ಪಾಕಶಾಲೆಯಂತು ಯಾವಾಗಲು ಘಂ ಎನ್ನುತ್ತಿತು ಎಂಬುದು ಪ್ರತೀತಿ. ಹೊಸ ಹೊಸ ತಿಂಡಿಗಳ ಆವಿಷ್ಕಾರ ಸಹ ನಡೆಯುತಿದ್ದವು. ಅರಮನೆಯ ಮುಖ್ಯ ಅಡುಗೆ ಬಾಣಸಿಗರಾದ ಮಾದಪ್ಪ ಯಾವಾಗಲು ಹೊಸ ರುಚಿಗೆ ಹೆಸರುವಾಸಿ, ಒಮ್ಮೆ ಆತ ತುಪ್ಪಕ್ಕೆ ಸಕ್ಕರೆ ಮತ್ತು ಕಡ್ಲೆ ಹಿಟ್ಟನ್ನು ಬೆರೆಸಿ ಒಂದು ಹೊಸ ಸಿಹಿ ತಿಂಡಿಯನ್ನು ತಯಾರಿಸಿದರಂತೆ. ಅದು ಬಲು ರುಚಿಕರವಾಗಿಯು ಇತ್ತು.
ಅದಕ್ಕೆ ಯಾವ ಹೆಸರು ಇಡಬೇಕೆಂದು ಯೋಚಿಸಿದಾಗ ಸಮರ್ಪಕ ಹೆಸರು ದೊರಕದಾಯಿತು... ಭೋಜನದ ಸಮಯಕ್ಕೆ ಸರಿಯಾಗಿ ಏಲ್ಲಾ ಅಡುಗೆಎ ಸಿದ್ದತೆಗಳು ಮುಗಿದ್ದಿದವು, ಓಡೆಯರು, ಅಥಿತಿಗಳು, ಮತ್ತು ರಾಜ ಪರಿವಾರದವರು ಭೋಜನಕ್ಕೆ ಕುಳಿತರು.
ಮಾದಪ್ಪ ತಾನು ಮಾಡಿದ ಸಿಹಿತಿಂಡಿಯನ್ನು ಏಲ್ಲರಿಗೂ ಬಡಿಸಿದರಂತೆ.ಎಲ್ಲಾರು ಬಾಯಿ ಚಪ್ಪರಿಸಿಕೊಂಡು ತಿಂದರು. ಅದೆ ಸಮಯಕ್ಕೆ ಓಡೆಯರು ಮಾದಪ್ಪನನ್ನು ಕರೆದು ಇದರ ರುಚಿಯು ಅದ್ಭುತವಾಗಿದ್ದು ಈ ತಿಂಡಿಯ ಹೆಸರೇನೆಂದು ಕೇಳಿದರು. ತೊದಲುತ್ತ ಮೈಸೂರ ಪಾಕು ಎಂದರಂತೆ. ಆ ಹೆಸರು ಹೇಳುವುದಕ್ಕು ಕಾರಣವಿದೆ, ಈ ತಿಂಡಿಯು ಮೊದಲ ಬಾರಿಗೆ ತಯಾರಗಿದ್ದು ಮೈಸೂರು ಅರಮನೆಯಲ್ಲಿ ಆದ ಕಾರಣ ಈ ಹೆಸರನ್ನು ಸೂಚಿಸಿದ್ದರಂತೆ!. ಅಲ್ಲಿಂದ ಮುಂದೆ ಈ ತಿಂಡಿ ಮೈಸೂರ ಪಾಕ್ ಎಂದೆ ಪ್ರಾಖ್ಯಾತಿ ಹೊಂದಿತ್ತು.
ಈ ಹೆಸರು ಮೈಸೂರು ರಾಜ್ಯದ ಹೆಸರಿಗೆ ಮತ್ತಷ್ಟು ಕೀರ್ತಿ ತಂದಿತ್ತು. ಇದಲ್ಲದೆ ಈ ತಿಂಡಿ ಪ್ರಪಂಚದ ಮೂಲೆ ಮೂಲೆ ಯಲ್ಲಿಯು ಪ್ರಚಾರ ಪಡೆಯಿತು.
ಇದು ಒಂದು ಕಥೆಯಾದರೆ ಇನ್ನೊಂದು ಕಥೆಯು ಸಹ ಪ್ರಚಲಿತದಲ್ಲಿದೆ.
ಮೈಸೂರ್ ಪಾಕ್ ಹಿಂದೆ ಮೆಸುರ ಪಾಕ ಎಂದು ಕರೆಯುತ್ತಿದ್ದರೆಂಬ ಪ್ರತೀತಿ. ಕಾಲಕ್ರಮೆಣ ಇದು ಮೈಸೂರ್ ಪಾಕ್ ಎಂದು ಪ್ರಚಾರ ಪೆಡೆಯಿತು.
ಈ ಹೇಳಿಕೆ ಹಿಂದೆ ಸತ್ಯವು ಇರಬಹುದು ಎಕೆಂದರೆ ಈ ಸಿಹಿ ತಿಂಡಿಯು ಮೈಸೂರು ಭಾಗದಲ್ಲಿ ಹೆಚ್ಚು ಪ್ರಸಿದ್ದಿ ಪಡೆದಿತು. ಅದಲ್ಲದೆ ಈ ತಿಂಡಿಯನ್ನು ತಯಾರಿಸುವ ನುರಿತ ಅಡುಗೆ ಭಟ್ಟರು ಮೈಸೂರು ಪ್ರಾಂತ್ಯದಲ್ಲಿ ಇದ್ದ ಕಾರಣ ಈ ಸಿಹಿ ತಿಂಡಿಗೆ ಮೈಸೂರ ಪಾಕ್ ಎಂದೆ ಹೆಸರು ಬಂದಿರಬಹುದು. ಏನೇ ಇರಲಿ ಇದರ ರುಚಿ ಮಾತ್ರ ಸೂಪರ್!

-ಶ್ರೀನಿಧಿ.ಎಸ್
ಪ್ರಥಮ ಪತ್ರೀಕೋದ್ಯಮ ,ಮಾನಸ ಗಂಗೋತ್ರಿ, ಮೈಸೂರು

0 comments:

Post a Comment