ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಆಳ್ವಾಸ್ ಪ್ರಗತಿ - 2011
ಮುಂಜಾನೆಯಿಂದಲೇ ಉದ್ಯೋಗಾಕಾಂಕ್ಷಿಗಳ ಆಗಮನ...

ಮೂಡಬಿದಿರೆ: ಆಳ್ವಾಸ್ ಎಜುಕೇಷನ್ ಫೌಂಡೇಷನ್ ಆಶ್ರಯದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಉದ್ಯೋಗ ಮೇಳ ಆಳ್ವಾಸ್ ಪ್ರಗತಿ - 2011 ಕ್ಕೆ ದ್ವಿತೀಯ ದಿನವೂ ಮುಂಜಾನೆಯಿಂದಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬೆಂಗಳೂರು, ಮೈಸೂರು, ಬೆಳಗಾವಿ, ನೆರೆಯ ಕಾಸರಗೋಡು ಸೇರಿದಂತೆ ರಾಜ್ಯದೆಲ್ಲೆಡೆಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಿಂದ ದ್ವಿತೀಯ ದಿನವೂ ಉದ್ಯೋಗಾಕಾಂಕ್ಷಿಗಳು ಆಗಮಿಸಿದ್ದು ಉದ್ಯೋಗಪಡೆಯುವ ತವಕದಲ್ಲಿ ಸರತಿ ಸಾಲಿನಲ್ಲಿ ಸಂದರ್ಶನ ಕೊಠಡಿಗಳ ಮುಂದೆ ಜಮಾಯಿಸಿದ್ದಾರೆ.
ಐ.ಬಿ.ಎಂ, ಟಿ.ಎನ್.ಟಿ, ಕ್ಯಾಡ್ಬರಿ, ಸೌತ್ ಇಂಡಿಯನ್ ಬ್ಯಾಂಕ್ ಮೊದಲಾದ ಪ್ರತಿಷ್ಠಿತ ಕಂಪೆನಿಗಳು ದ್ವಿತೀಯ ದಿನದ ಉದ್ಯೋಗಮೇಳದಲ್ಲಿ ಭಾಗವಹಿಸಿದ್ದು ಉದ್ಯೋಗಾಕಾಂಕ್ಷಿಗಳಿಗೆ ಹರ್ಷತಂದಿದೆ.


ಬ್ಯಾಂಕಿಂಗ್, ವೈದ್ಯಕೀಯ, ಎಂಜಿನಿಯರಿಂಗ್, ಬಿ.ಪಿ.ಒ, ಕೆ.ಪಿ.ಒ, ಐ.ಟಿ, ಇನ್ಶೂರೆನ್ಸ್, ಅಟೋಮೊಬೈಲ್ ಸೇಲ್ಸ್ ಸೇರಿದಂತೆ ವಿವಿಧ ಸ್ತರದ ಸುಮಾರು 147ಕಂಪೆನಿಗಳು ಉದ್ಯೋಗಮೇಳಲ್ಲಿ ಭಾಗವಹಿಸಿ ವಿವಿಧ ರೀತಿಯಲ್ಲಿ ಸಂದರ್ಶನ ಕಾರ್ಯ ನಡೆಸಿ ಆಯ್ಕೆ ನಡೆಸುತ್ತಿದೆ.
ಎಂಫಸಿಸ್, ಯು.ಎ.ಇ.ಎಕ್ಸ್ಚೇಂಜ್, ಇನ್ಫೋಸಿಸ್, ದಿಯಾಟೆಕ್, ಕೊಟಕ್ ಮಹೀಂದ್ರಾ, ಆಕ್ಸಸ್ ಬ್ಯಾಂಕ್, ಎಂ.ಸಿ.ಎಫ್, ಐ.ಬಿ.ಎಂ, ವಿಪ್ರೋ,ಸುಝಲೋನ್,ಟೆಕ್ ಮಹೀಂದ್ರಾ ಮೊದಲಾದ ಪ್ರತಿಷ್ಠಿತ ಕಂಪೆನಿಗಳು ಸೇರಿದಂತೆ ಸುಮಾರು 147ಕಂಪೆನಿಗಳು ಈ ಮೇಳದಲ್ಲಿ ಭಾಗವಹಿಸಿವೆ. ಇದೊಂದು ಬೃಹತ್ ಉದ್ಯೋಗಮೇಳವಾಗಿದ್ದು ಮೂಡಬಿದಿರೆ ಪರಿಸರದಲ್ಲಿ ಈ ಮಟ್ಟದಲ್ಲಿ ಮೊತ್ತ ಮೊದಲ ಬಾರಿಗೆ ಇಂತಹ ಮೇಳ ಆಯೋಜಿಸಲಾಗುತ್ತಿದೆ.

0 comments:

Post a Comment