ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
7:13 PM

ವಿಸ್ಮಯ ವಿಶ್ವ

Posted by ekanasu

ಸಾಹಿತ್ಯ

ಒಂದು ಸುಂದರ ಮುಂಜಾನೆ
ಪ್ರಕೃತಿ ಬಿಚ್ಚಿಡುತ್ತಿರುವ
ಅಮೂಲ್ಯ ಖಜಾನೆ
ಮೂಡಣ ದಿಗಂತದಲಿ
ಮೋಡಗಳ ಆಟ
ಪುಟಿಯುತಿರುವ ಪ್ರಥಮ
ಕಿರಣಗಳ ಮಾಟಅದ್ಭುತ ರಂಗು ರಂಗಿನ ದೃಶ್ಯ
ಮನಸೆಳೆವ ನಿಸರ್ಗ ರಹಸ್ಯ
ಮರಗಳ ಹಚ್ಚ ಹಸಿರು
ನಾದಮಯ ಎಲೆಗಳ ಉಸಿರು
ಹಕ್ಕಿಗಳ ಇಂಚರ
ಮುಂಜಾನೆ ತಂಗಾಳಿಯ ಸಡಗರ
ಸೃಷ್ಟಿಯಾಯಿತು
ಕಲಾತ್ಮಕ ಪರಿಸರ
ಸೃಷ್ಟಿಕರ್ತನೇ ಅದೆಷ್ಟೊಂದು
ಸುಂದರ ನಿನ್ನ ವಿಶ್ವ!
ಕಂಡು ಬೆರಗಾದೆನು
ಈ ವಿಸ್ಮಯ ವಿಶ್ವ.

- ಜಬೀವುಲ್ಲಾ ಖಾನ್

0 comments:

Post a Comment