ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ಅವಾರ್ಡ್

ಮನುಷ್ಯನು ತಾನು ದುಃಖದಿಂದ ಇರಲು ಕಾರಣ ಅಸೆ ಎಂಬುದು ಅವನಿಗೆ ಗೊತ್ತು. ಆದರೆ ಅತನು ತನ್ನ ಅಸೆಯನ್ನು ಕಡಿಮೆ ಮಾಡಿಕೊಂಡಿದ್ದನೆಯೇ...ಖಂಡಿತಾ ಇಲ್ಲ. ಉದಾಹರಣೆಗೆ ಒಬ್ಬ ನೀರುದ್ಯೋಗಿಗೆ ಕೆಲಸದ ಅಸೆ. ಅದೇ ಕೆಲಸ ಸಿಕ್ಕ ನಂತರ ಅವನಿಗೆ ಮತ್ತೆ ದೊಡ್ಡ ಕೆಲಸದಕ್ಕೆ ಹೋಗುವ ಅಸೆ. ಹಾಗೆಯೇ ನವ ದಂಪತಿಗೆ ಗಂಡು ಮಗುವನ್ನು ಪಡೆಯಬೇಕೆಂಬ ಅಸೆ... ಈ ಆಸೆಗಳು ಪೂರೈಸದಾಗ ಎಷ್ಟೋ ಸಂಸಾರಗಳು ಒಡೆದು ಹೋದ ಉದಾಹರಣೆಗಳು ಸಾಕಷ್ಟಿವೆ...ಅಸೆಯೆಂಬುದು ಮಾನವನ ಸಹಜ ಗುಣ ಅದು ಇತಿ ಮಿತಿಯಾಗಿದ್ದರೆ ಚೆನ್ನ. ಅಹಿಂಸಾವಾದಿಯಾದ ಬುದ್ದನು ಅಸೆಯೇ ದುಃಖಕ್ಕೆ ಕಾರಣ ಎಂದು ಜಗತ್ತಿಗೆ ಹೇಳಿದ... ಒಬ್ಬ ಸಾಮಾನ್ಯ ಮಹಿಳೆ ಮೊದಲು ಒಂದು ಸೀರೆ ನೋಡಿ ಅದನ್ನು ಬಯಸುತ್ತಾಳೆ. ನಂತರ ಅದಕ್ಕಿಂತ ಹೆಚ್ಚಿನ ಬೆಲೆಯ ಸೀರೆಗೆ ಆಕರ್ಷಿತಳಾಗುತ್ತಾಳೆ. ನಂತರ ಇನ್ನು ಅಧಿಕ ಬೆಲೆಯ ಸೀರೆ... ಹೀಗೆ ಮುಂದುವರಿಯುತ್ತದೆ ಆಕೆಯ ಆಸೆಯ ಬೆಟ್ಟ. ಪ್ರತಿಯೊಬ್ಬ ಮನುಷ್ಯ ತನ್ನ ಜೀವನದಲ್ಲಿ ಅದು ಬೇಕು...ಇದು ಬೇಕೆಂದು ಆಸೆ ಪಡುತ್ತಲೇ ಇರುತ್ತಾನೆ. ಒಂದು ಸಿಕ್ಕಾಗ ಇನ್ನೊಂದರತ್ತ ಆಸೆ ಹೊರಳುತ್ತದೆ. ಆಶಿಸಿದ ವಸ್ತುವನ್ನು ಪಡೆಯಲು ಹಪಹಪಿಸುತ್ತಾನೆ. ಕೆಲವೊಮ್ಮೆ ಹಣದ ಅಭಾವದಿಂದ ಸಾಲದ ಮೊರೆಹೋಗುತ್ತಾನೆ. ನಂತರ ಸಾಲದ ಮೇಲೆ ಸಾಲ ಬೆಳೆದು ಅದನ್ನು ತೀರಿಸಲಾಗದೆ ಪೇಚಿಗೆ ಸಿಲುಕುತ್ತಾನೆ.ಆಸೆಯೇ ಈ ಸಾಲಕ್ಕೆ ಮೂಲಕ ಕಾರಣ ಎಂಬ ನೋವಿನಿಂದ ಪರಿತಪಿಸುತ್ತಾನೆ.

ಆಸೆ ಇರಲಿ.ಆದರೆ ಅದು ಅತಿಯಾಗಬಾರದು. ಅತಿಯಾದರೆ ಅಮೃತವೂ ವಿಷ ಎಂಬಂತೆ. ನಮ್ಮ ಹೊಟ್ಟೆಗೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ತಿನ್ನಬೇಕು.ಅದು ಮುಗಿದು ಹೋಗುತ್ತದೆ ಎಂಬ ಆಸೆಯಿಂದ ಎಲ್ಲವನ್ನೂ ತಿನ್ನಲು ಹೊರಟರೆ ಹೇಗಾಗಬೇಡ...?

- ಮಂಜುನಾಥ ಹೊಸಕೊಪ್ಪಲು
ಸಂವಹನ ಮತ್ತು ಪತ್ರಿಕೋದ್ಯಮ, ಮಾನಸ ಗಂಗೋತ್ರಿ, ಮೈಸೂರು

0 comments:

Post a Comment