ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಮೂಡಬಿದಿರೆ: ನೃತ್ಯ , ಸಂಗೀತ ಕಲಾವಿದರಿಗೆ ಗುರುಭಕ್ತಿ, ದೈವಭಕ್ತಿ ಅತೀ ಅಗತ್ಯ. ಯಾವುತ್ತೂ ಅಹಂಕಾರದ ಪ್ರವೃತ್ತಿ ಕಲಾವಿದರಿಗೆ ಒಳಿತಲ್ಲ ಎಂದು ಖ್ಯಾತ ಕಲಾವಿದ, ಕಲಾಗುರು ಉಳ್ಳಾಲ ಮೋಹನ್ ಕುಮಾರ್ ಅಭಿಪ್ರಾಯಿಸಿದರು.
ಅವರು ಮಂಗಳವಾರ ಮೂಡಬಿದಿರೆಯ ಆಳ್ವಾಸ್ ಎಜುಕೇಷನ್ ಫೌಂಡೇಷನ್ ಆಶ್ರಯದಲ್ಲಿ ಹೈಸ್ಕೂಲ್ ಹಾಗೂ ಪದವಿಪೂರ್ವ ವಿದ್ಯಾಥರ್ಿಗಳಿಗೆ ಏರ್ಪಡಿಸಿದ ಸಂಗೀತ ಹಾಗೂ ನೃತ್ಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.ವಿದ್ಯಾಥರ್ಿ ದೆಸೆಯಲ್ಲಿ ಕಲೆಗಳ ಬಗ್ಗೆ ಆಸಕ್ತಿ ಮೂಡಿಸುವುದರಿಂದ ಮುಂದಿನ ಜೀವನದಲ್ಲಿ ಕಲಾಸಾಧನೆಗೆ ಪೂರಕ ಅವಕಾಶ ದೊರಕಿದಂತಾಗುತ್ತದೆ. ಕಲೆ ಸಾಹಿತ್ಯ ಜೀವನದ ಅವಿಭಾಜ್ಯ ಅಂಗವಿದ್ದಂತೆ, ವಿದ್ಯಾಥರ್ಿಗಳು ಶಿಬಿರಗಳಲ್ಲಿ ಆಸಕ್ತಿಯಿಂದ ಭಾಗವಹಿಸುವ ಮೂಲಕ ಕಲಾರಾಧನೆಗೆ ಮುಂದಾಗಬೇಕೆಂದು ಕರೆನೀಡಿದರು.
ಖ್ಯಾತ ಕಲಾವಿದ ರತೀಶ್ ಪಿ.ಎನ್ ಉಪಸ್ಥಿತರಿದ್ದರು. ಸಂಸ್ಥೆಯ ಆಡಳಿತಾಧಿಕಾರಿ ಡಾ.ಜಿ.ಎಸ್ ಪ್ರಭಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಶಿಬಿರ ಏಪ್ರಿಲ್ 21ರ ತನಕ ನಡೆಯಲಿದೆ. ಸುಮನ ಸ್ವಾಗತಿಸಿದರು. ಆತ್ಮಿಕಾ ರಾಮಚಂದ್ರ ಕಾರ್ಯಕ್ರಮ ನಿರ್ವಹಿಸಿದರು. ಅಕ್ಷತಾ ಕುಮಾರಿ ವಂದಿಸಿದರು.

0 comments:

Post a Comment