ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಪುಟ್ಟಪರ್ತಿ:ಕಳೆದ ಒಂದು ತಿಂಗಳಿನಿಂದ ತೀವ್ರ ಅನಾರೋಗ್ಯಕ್ಕೊಳಗಾದ ಪುಟ್ಟಪರ್ತಿಯ ಸತ್ಯಸಾಯೀ ಬಾಬ ಅವರು ಕೊನೆಯುಸಿರೆಳೆದಿದ್ದಾರೆ. ಈ ಮಾಹಿತಿಯನ್ನು ಪುಟ್ಟಪರ್ತಿಯಲ್ಲಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಅಧಿಕಾರಿ ವರ್ಗ ಅಧಿಕೃತ ಪ್ರಕಟಣೆಯ ಮೂಲಕ ಇಂದು ಬೆಳಗ್ಗೆ ತಿಳಿಸಿದ್ದಾರೆ. ಕಳೆದ 28ದಿನಗಳಿಂದ ಪುಟ್ಟಪರ್ತಿ ಸಾಯೀಬಾಬ ಅವರು ಆಸ್ಪತ್ರೆಗೆ ದಾಖಲಾಗಿದ್ದು ಈ ಸಂದರ್ಭದಲ್ಲೇ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಸಾಯೀಬಾಬ ಇದ್ದಂತಹ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯೊಳಗೆ ಯಾವುದೇ ರೀತಿಯಲ್ಲೂ ಭಕ್ತಾಧಿಗಳಿಗೆ, ಸಂಬಂಧಿಗಳಿಗೆ ಸಾಯೀಬಾಬ ಸಂದರ್ಶನ ನಿರ್ಭಂಧಿಸಲಾಗಿತ್ತು. ಸತ್ಯಸಾಯಿ ಬಾಬಾ ಟ್ರಸ್ಟ್ ಸಾಯೀಬಾಬ ಸಾವನ್ನಪ್ಪಿದ ಮಾಹಿತಿಯನ್ನು 10.20ರ ಸಮಯದಲ್ಲಿ ಅಧಿಕೃತ ಘೋಷಣೆ ಮಾಡಿದೆ. ಸಾಯಿ ಕುಲವಂತ್ ಹಾಲ್ ನಲ್ಲಿ ಸಾಯಿಬಾಬಾ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಂಜೆ 6 ಗಂಟೆಗೆ ಭಕ್ತರಿಗೆ ಅಂತಿಮ ದರ್ಶನಕ್ಕೆ ಅವಕಾಶವಿದೆ. ಸೋಮ ಹಾಗೂ ಮಂಗಳವಾರದ ತನಕ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ ಎಂಬ ಮಾಹಿತಿಯಿದೆ.

0 comments:

Post a Comment