ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
2:04 PM

ದಕ್ಷಿಣಾ ಕಾಶಿ

Posted by ekanasu

ಈ ಕನಸು ಅವಾರ್ಡ್
ಕಾಶಿ ಹಿಂದುಗಳ ಪವಿತ್ರ ಯಾತ್ರ ಸ್ಥಳ. ನಮ್ಮ ಪುರಾಣಗಳಲ್ಲಿ ಕಾಶಿಗೆ ಮಹತ್ವದ ಸ್ಥಾನವನ್ನು ನೀಡಲಾಗಿದೆ.


ಪ್ರತಿಯೊಬ್ಬ ಹಿಂದುವು ಒಮ್ಮೆಯಾದರು ಕಾಶಿಗೆ ಹೋಗಿಬರಲು ಇಚ್ಛಿಸುತ್ತಾರೆ.ಇದು ಹಿಂದಿನಿಂದಲೂ ಈ ಒಂದು ಪ್ರವೃತಿಯಾಗಿ ಬೆಳೆದುಬಂದಿದೆ. ನಮ್ಮ ಹಿರಿಯರು ಜೀವನದಲ್ಲಿ ಒಮ್ಮೆಯಾದರು ಕಾಶಿಗೆ ಹೋಗಬೇಕು ಎಂಬ ಆಸೆಹೊತ್ತು ತೀಥಯಾತ್ರೆ ಕೈಗೊಳ್ಳುತ್ತಿದ್ದರು. ಹೀಗಾಗಿ ಪ್ರತಿಯೊಬ್ಬರಿಗೆ ಉತ್ತರ ಭಾರತದಲ್ಲಿ ಇರುವ ಕಾಶಿಯ ಬಗ್ಗೆ ತಿಳಿದಿರುತ್ತದೆ. ಆದರೆ ನಮ್ಮ ದಕ್ಷಿಣ ಭಾರತದಲ್ಲಿಯು ಸಹ ಒಂದು ಪವಿತ್ರ ಕ್ಷೇತ್ರ ದಕ್ಷಿಣಾ ಕಾಶಿ ಇದೆ ಎಂಬುದು ಹಲವು ಮಂದಿಗೆ ತಿಳಿದಿಲ್ಲ.

ಈ ಕ್ಷೇತ್ರ ಕರ್ನಾಟಕದ ಸಾಂಸ್ಕತಿಕ ರಾಜಧಾನಿಯಾದ ಮೈಸೂರು ಜಿಲ್ಲೆಯಿಂದ ಕೇವಲ 30ಕೀ.ಮೀ. ದೂರದಲ್ಲಿದೆ. ಅದೇ ತಿರುಮಕೂಡಲು. ಈ ಸ್ಥಳಕ್ಕೆ ದಕ್ಷಿಣಾ ಕಾಶಿ ಎಂದೇ ಹೆಸರು. ಈ ಹೆಸರು ಬರಲು ಅನೇಕ ಕಾರಣವಿದೆ. ಅದೇನೆಂದರೆ, ಉತ್ತರ ಕಾಶಿಯಲ್ಲಿ(ಪ್ರಯಾಗ)ಹೇಗೆ ಗಂಗಾ, ಯಮುನ, ಮತ್ತು ಸರಸ್ವತಿ ಎಂಬ ಮೂರು ನದಿಗಳು ಸೇರಿ ಸಂಗಮ ವಾಗಿದೆಯೇ, ಅದೇ ರೀತಿ ಈ ಕ್ಷೇತ್ರದಲ್ಲಿ ಕಾವೇರಿ, ಕಪಿಲ, ಮತ್ತು ಸ್ಫಟಿಕ ಸರೋವರ ಸಂಗಮವಾಗಿದೆ. ಇದಲ್ಲದೆ ಅಲ್ಲಿ ವಿಧುರ ಸ್ಥಾಪಿಸಿರುವ ವಿಧುರಾಶ್ವತ್ಥ ಮರವಿದೆ. ಹಾಗೆಯೇ ಇಲ್ಲಿ ಬ್ರಹ್ಮದೇವರು ಸ್ಥಾಪಿಸಿರುವ ಬ್ರಹ್ಮಾಶ್ವತ್ಥಮರವಿದೆ.

ಅಲ್ಲಿ ಕಾಶಿ ವಿಶ್ವನಾಥ ಇರುವಂತೆಯೇ ಇಲ್ಲಿ ಅಗಸ್ತ್ಯಾ ಮಹಾಮುನಿಗಳು ಸ್ಥಾಪಿಸಿರುವ ಅಗಸ್ತ್ಯೇಶ್ವರವಿದೆ. ಇಲ್ಲಿನ ಮತ್ತೊಂದು ವಿಶೇಷತೆ ಎಂದರೆ ಅಗಸ್ತ್ಯೇಶ್ವರ ಲಿಂಗದಲ್ಲಿ ಸದಾಕಾಲ ಗಂಗೆಯಲ್ಲಿ ನೆಲೆಸಿರುತ್ತಾಳೆ.
ಈ ಒಂದು ಕ್ಷೇತ್ರವನ್ನು ಪುರಾಣದಲ್ಲಿ ತ್ರಿಮಕೂಟ ಎಂದು ಉದ್ಗರಿಸಲಾಗಿದೆ. ಇದಲ್ಲದೆ ಇಲ್ಲಿ ಗುಂಜಾನರಸಿಂಹ ಸ್ವಾಮಿ ದೇವಾಲಯವಿದ್ದು. ಸ್ವಾಮಿಯು ತಕ್ಕಡಿಯಲ್ಲಿ ತೂಕ ಮಾಡುತ್ತಿದ್ದಾರೆ. ಏಕೆಂದರೆ ಸ್ವಾಮಿಯ ಭಕ್ತನೊಬ್ಬ ತಾನು ಕಾಶಿಗೆ ಹೋಗಬೇಕು ಎಂಬ ಇಚ್ಛೆಯನ್ನು ತಿಳಿಸಿದಾಗ, ಸ್ವಾಮಿಯು ಈ ಕ್ಷೇತ್ರದಲ್ಲಿ ಕಾಶಿಗಿಂತ ಒಂದು ಗುಲಗಂಜಿ ತೂಕದ ಜಾಸ್ತಿ ಪುಣ್ಯ ಸಿಗುವದೆಂದು ತೂಕ ಮಾಡಿ ತೋರಿಸಿರುವುದನು ನಾವು ನೋಡಬಹುದು.

ಈ ಪುಣ್ಯಕ್ಷೇತ್ರದಲ್ಲಿ ಅಗಸ್ತ್ಯಾ ಮಹಾಋಷಿಗಳು ಸ್ಥಾಪಿಸಿದಂತಹ ಅಗಸ್ತ್ಯೇಶ್ವರ ಲಿಂಗವಿದೆ. ಈ ಲಿಂಗದ ತಲೆಯಲ್ಲಿ ಸದಾಕಾಲ ಗಂಗೆಯು ನೆಲೆಸಿರುತ್ತಾಳೆ. ಈ ಒಂದು ವಿಸ್ಮಯದ ಹಿಂದೆಯು ಸಹ ಒಂದು ಇತಿಹಾಸವಿದೆ. ಅದೇನೆಂದರೆ ಒಮ್ಮೆ ಅಗಸ್ತ್ಯಾ ಮಹಾಮುನಿಯು ಈ ದಾರಿಯಲ್ಲಿ ಸಂಚರಿಸಬೇಕಾದರೆ, ಈ ಸ್ಥಳದ ಮಹತ್ವ ತಿಳಿದು ಇಲ್ಲೊಂದು ಶಿವಲಿಂಗವನ್ನು ಸ್ಥಾಪಿಸಬೇಕೆಂದು ತೀರ್ಮಾನ ಮಾಡಿದರು. ಆಗ ಆಂಜನೇಯನನ್ನು ಪ್ರಾರ್ಥಿಸಿ ತಮ್ಮಲ್ಲಿಗೆ ಕರೆದುಕೊಂಡು ಕಾಶಿಯಿಂದ ಯಾವುದಾದದರೊಂದ ಶಿವಲಿಂಗವನ್ನು ತರುವಂತೆ ಆಜ್ಞಾಪಿಸಿದರು. ಆತ ಕಾಶಿಯಿಂದ ಶಿವಲಿಂಗವನ್ನು ತರುವುದು ನಿಧಾನವಾಗಿದ್ದರಿಂದ ಇಲ್ಲಿ ಅವರು ಮುಹೂರ್ತ ಮೀರಬಹುದೆಂಬ ಭಯದಿಂದ ಮರಳಿನಲ್ಲಿ ಲಿಂಗವನ್ನು ಮಾಡಿ ಪ್ರತಿಷ್ಠಾಪನೆ ಮಾಡುತ್ತಾರೆ. ಆನಂತರ ಅಲ್ಲಿಗೆ ಬಂದ ಹನುಮಂತನು ತಾನು ಕಷ್ಟಪಟ್ಟು ತಂದ ಲಿಂಗವನ್ನು ಪ್ರತಿಸ್ಠಾಪನೆ ಮಾಡಲಿಲ್ಲವಲ್ಲ ಎಂಬ ಕೋಪದಿಂದ ಲಿಂಗವನ್ನು ಕೀಳಲು ಪ್ರಯತ್ನಿಸುತ್ತಾನೆ. ಆದರೆ ಅದು ಬರುವದಿಲ್ಲ, ಕೋಪದಿಂದ ಲಿಂಗಕ್ಕೆ ಮುಷ್ಟಿ ಪ್ರಹಾರ ಮಾಡುತ್ತಾನೆ. ಆಗ ಲಿಂಗದಿಂದ ಮರು ಪ್ರಹಾರವಾಗಿ ಹನುಮಂತನು ಮೂರ್ಛೆ ತಪ್ಪುತ್ತಾನೆ. ಭಿನ್ನ ಲಿಂಗವನ್ನು ಪೂಜಿಸಬಾರದೆಂದು ಅಗಸ್ತ್ಯರು ಶಿವನನ್ನು ಪ್ರಾರ್ಥಿಸಿದಾಗ, ಶಿವನು ಪ್ರತ್ಯಕ್ಷನಾಗಿ ನನ್ನ ತಲೆಯಲ್ಲಿ ಹೇಗೆ ಗಂಗೆ ನೆಲೆಸಿದ್ದಾಳೋ ಹಾಗೆಯೇ ಈ ಶಿವಲಿಂಗದಲ್ಲಿಯೂ ಗಂಗೆಯು ಸದಾಕಾಲ ನೆಲೆಸಿರುವಳು ಎಂದು ವರ ನೀಡಿ ಹೊರಟು ಹೋಗುತ್ತಾರೆ. ಆನಂತರ ಆಗಸ್ತ್ಯರು ಆ ನೀರಿನಿಂದ ಹನುಮಂತನನ್ನು ಎಚ್ಚರಿಸಿ ಆತನು ತಂದ ಲಿಂಗವನ್ನು ಸ್ವಲ್ಪದೂರದಲ್ಲಿ ಸ್ಥಾಪಿಸುತ್ತಾರೆ. ಅದಕ್ಕೆ ಹನುಮಂತೇಶ್ವರ ಎಂದು ನಾಮವಿರುವುದು. ಯಾರು ಅಗಸ್ತ್ಯೇಶ್ವರರನ್ನು ದರ್ಶನ ಮಾಡುತ್ತಾರೋ ಅವರು ಹನುಮಂತೇಶ್ವರನ ದರ್ಶನ ಮಾಡದೇ ಇದ್ದರೆ ಅವರಿಗೆ ಯಾವುದೇ ಪುಣ್ಯವು ಲಭಿಸುವದಿಲ್ಲ ಎಂಬುದು ಪ್ರತೀತಿ.
ಹಾಗೂ ಈ ಕ್ಷೇತ್ರವು ಕರ್ನಾಟಕದಲ್ಲಿ ಇರುವುದು ಹೆಚ್ಚಿನ ಜನರಿಗೆ ತಿಳಿದಿಲ್ಲ. ಹಾಗೂ ಈ ಕ್ಷೇತ್ರದಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ಮಹಾ ಕುಂಭಮೇಳವನ್ನು ಆಯೋಜಿಸಲಾಗುತ್ತದೆ. ಆಗ ತಮ್ಮ ಪಾಪವನ್ನು ಕಳೆದುಕೊಳ್ಳಲಿಕ್ಕಾಗಿ ಸಹಸ್ರಾರು ಸಂಖ್ಯೆಯ ಭಾಕ್ತಾಧಿಗಳು ಪಾಲ್ಗೊಳ್ಳುತ್ತಾರೆ.

ಶ್ರೀನಿಧಿ.ಎಸ್.ತಿರುಮಕೂಡಲು
ಪ್ರಥಮ ಸೆಮಿಸ್ಟರ್, ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ
ಮೈಸೂರು ವಿಶ್ವವಿದ್ಯಾನಿಲಯ,ಮಾನಸಗಂಗೋತ್ರಿ ಮೈಸೂರು

0 comments:

Post a Comment