ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
9:59 PM

ಮುಕ್ತ ಮಾತು...

Posted by ekanasu

ಈ ಕನಸು ಅವಾರ್ಡ್


ಚಲನಚಿತ್ರರಂಗದ ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಉತ್ತಮ ಮೇಷ್ಟ್ರು. ಇತ್ತೀಚೆಗೆ ಮೂಡಬಿದಿರೆಯಲ್ಲಿ ಡಾ.ಎಂ.ಮೋಹನ ಆಳ್ವರ ನೇತೃತ್ವದಲ್ಲಿ ನಡೆದ ಆಳ್ವಾಸ್ ವಿರಾಸತ್ ರಾಷ್ಟ್ರೀಯ ಉತ್ಸವವನ್ನು ಉದ್ಘಾಟಿಸಿದ್ದು ಇದೇ ಮೇಷ್ಟ್ರು. ಈ ಸಂದರ್ಭ ಇವರೊಂದಿಗೆ ನಡೆಸಿದ ಮುಕ್ತ ಮಾತುಕತೆಯ ಒಂದಷ್ಟು ಅಂಶ ಮೇಷ್ಟ್ರ ಮಾತಿನಲ್ಲಿ ಈ ಕನಸು ಓದುಗರಿಗಾಗಿ...

"
ವಿರಾಸತ್ ನನ್ನ ದೃಷ್ಠಿಯಲ್ಲಿ ಸಾಂಸ್ಕೃತಿಕವಾಗಿ ಜಗತ್ತಿಗೆ ಹಿಡಿದಂತ ಒಂದು ದೊಡ್ಡ ಕನ್ನಡಿ. ಯಾಕೆ ಇದು ಮುಖ್ಯ ಅಂದರೆ ಪ್ರತಿದಿನ, ಪ್ರತಿ ಕ್ಷಣ ಕ್ಷಣಕ್ಕೆ ಕಳೆದು ಹೋಗ್ತಾ ಇರೋ ನಮ್ಮ ಭಾರತೀಯ ಕಲೆ, ಪರಂಪರೆಗಳನ್ನೆಲ್ಲ ಒಂದು ವೇದಿಕೆಯಲ್ಲಿ ತೆರೆದಿಡುವಂತಹ ಒಂದು ದೊಡ್ಡ ಪ್ರಯತ್ನ ಇದು. ಇವತ್ತು ಎಷ್ಟು ಜನಕ್ಕೆ ಇದರ ಮೌಲ್ಯ ಗೊತ್ತಾಗಿದೆಯೋ, ಗೊತ್ತಾಗಿಲ್ಲವೋ ಗೊತ್ತಿಲ್ಲ. ಏನೇ ಇದ್ದರೂ ಮುಂಬರುವ ದಿನಗಳಲ್ಲಿ ಇದರ ಮೌಲ್ಯ ಬಹಳ ದೊಡ್ಡ ಪ್ರಮಾಣದಲ್ಲಿ ಸಮಾಜಕ್ಕೆ ದೊರಕಲಿದೆ ಎನ್ನುವ ಒಂದು ಆತ್ಮವಿಶ್ವಾಸ ನನಗೆ ಇದೆ. ಒಂದಷ್ಟು ಜನ ಸೇರೋದು ಸಂಗೀತ ಕಛೇರಿ ಮಾಡೋದು ಅಷ್ಟೇ ಅಲ್ಲ. ಇದು ನನ್ನ ದೃಷ್ಠಿಯಲ್ಲಿ ಇದು ಬಹಳ ದೊಡ್ಡ ಮಾದರಿ. ಇವತ್ತಿನ ದೇಶಕ್ಕೆ ತುರ್ತಾದ ಅಗತ್ಯ ಇದು. ಇವತ್ತು ಯಾವ ಶಿಕ್ಷಣ ವ್ಯವಸ್ಥೆಯೂ - ಸಂಸ್ಥೆಯೂ ಸಾಂಸ್ಕೃತಿಕ ಕೇಂದ್ರಗಳಾಗಿಲ್ಲ. ಬರೀ ವ್ಯಪಾರಿ ಕೇಂದ್ರಗಳಾಗುತ್ತಿವೆ. ಶಿಕ್ಷಣ ಕೇಂದ್ರಗಳು ಸಾಂಸ್ಕೃತಿಕ ಕೇಂದ್ರಗಳಾಗುವಲ್ಲಿ ಆಳ್ವಾಸ್ ಮಾಡಿದ ಸಾಧನೆ ಅಪಾರ. ನಾನು ಎಷ್ಟೋ ಕಾಲೇಜುಗಳಿಗೆ ಅಧ್ಯಾಪಕನಾಗಿ, ಸಂದರ್ಶಕನಾಗಿ, ಒಬ್ಬ ಸಾಮಾನ್ಯ ಪ್ರವಾಸಿಗನಾಗಿ ಜಗತ್ತಿನೆಲ್ಲೆಡೆ ಸುತ್ತಾಡಿದ್ದೇನೆ. ಆದರೆ ಈ ರೀತಿಯ ವ್ಯವಸ್ಥೆ ಎಲ್ಲೂ ಕಂಡಿಲ್ಲ...ಕೇಳಿಲ್ಲ... ಆ ದೃಷ್ಠಿಯಿಂದ ವಿದ್ಯಾರ್ಥಿ ಸಮುದಾಯ ಇದನ್ನು ಬಳಸಿಕೊಳ್ಳಬೇಕು. ನೂರಾರು ಮೂಡುಬಿದಿರೆಗಳು ಅರಳಬೇಕು. ನೂರಾರು ಮೋಹನ ಆಳ್ವರು ಹುಟ್ಟಬೇಕು ಅನ್ನೊಂದು ನನ್ನ ಅಭಿಪ್ರಾಯ.

ಆಳ್ವರು ನಡೆಸುವ ನುಡಿಸಿರಿ ಕನ್ನಡ ಸಾಹಿತ್ಯ ಸಮ್ಮೇಳನ ಒಂದು ಪೂರ್ಣ ಅನುಭವ ಸಾಹಿತ್ಯಕ್ಕಾಗಿ ಒಂದು ಹಬ್ಬ. ಸಂಗೀತ, ನೃತ್ಯ, ವರ್ಣಚಿತ್ರ, ಶಿಲ್ಪಕಲೆಗೆ ಇನ್ನೊಂದು ಹಬ್ಬ. ಆಳ್ವರಿಗೆ ಅಲ್ಪ ದೃಷ್ಠಿ ಇಲ್ಲ. ಒಂದು ಪೂರ್ಣ ದೃಷ್ಠಿ ಇದೆ. ಪೂರ್ಣ ದೃಷ್ಠಿ ಅಂದರೆ ಎಲ್ಲವನ್ನೂ ಒಳಗೊಳ್ಳಬೇಕು ಅನ್ನೋದು. ನುಡಿಸಿರಿ ಅನ್ನೋದು ಶಬ್ಧದ ಸಂಪತ್ತು. ಎಲ್ಲ ನುಡಿಸಿರಿಗಳಿಗೂ ಬಂದಿದ್ದೇನೆ. ಉದ್ಛಾಟನೆಗೆ ಬಂದಿದ್ದೇನೆ. ಆದರೆ ನಾನು ಬರೋದು ಒಬ್ಬ ಕೇಳುಗನಾಗಿ, ಪ್ರೇಕ್ಷಕನಾಗಿ ಅದರಲ್ಲೂ ಒಬ್ಬ ಕನ್ನಡಿಗನಾಗಿ ಪ್ರತಿಸಾರಿ ಬರುತ್ತೇನೆ. ಈ ಬಾರಿಗೆ ವಿರಾಸತ್ ಗೆ ನನ್ನ ಕುಟುಂಬದೊಂದಿಗೆ ಬಂದಿರುವೆ. ಇಂತಹ ಒಂದು ಅನುಭವವನ್ನು ಕಳೆದು ಕೊಂಡರೆ ಅದು ಮತ್ತೆ ಸಿಕ್ಕಲ್ಲ. ಇಲ್ಲಿ ನಾವು ಬರುವುದರಿಂದ ನಮ್ಮ ಅನುಭವ ಹೆಚ್ಚಾಗುತ್ತೆ ಅಂತಹ ಅನುಭವವನ್ನು ಯಾರೂ ಕೂಡ ಕೊಡಲು ಸಾಧ್ಯ ಇಲ್ಲ.

-ದರ್ಶನ್ ಎಂ. ಕಮ್ಮಾರಗಟ್ಟೆ
ಪ್ರಥಮ ಬಿ.ಎ (ಇ.ಜಿ.ಪಿ.)

1 comments:

Anonymous said...

Good darshan.. do some more interviews... Prajwal.. good luck..

Post a Comment