ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವರದಿ: ಭಾಗ್ಯವಾನ್ ಮೂಲ್ಕಿ
ಪಡುಬಿದ್ರಿ:ಪರಿಸರ ವಿರೋಧಿ ಯುಪಿಸಿಎಲ್ ಉಷ್ಣ ವಿದ್ಯುತ್ ಸ್ಥಾವರದಿಂದ ಉಂಟಾಗುವ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ರಾಜ್ಯದ ವಿದ್ಯುತ್ ಕೊರತೆ ನೀಗಿಸಲು ಕಲ್ಲದ್ದಲಾಧಾರಿತವಾಗಿ ವಿದ್ಯುತ್ ಉತ್ಪಾದಿಸುತ್ತಿರುವ ಯುಪಿಸಿಎಲ್ ಉಷ್ಣವಿದ್ಯುತ್ ಯೋಜನೆಂದ ವಿದ್ಯುತ್ ನೀಡುವ ಬದಲು ಅವಿಭಜಿತ ಜಿಲ್ಲೆಯಾದ್ಯಂತ ವಿದ್ಯುತ್ ಗ್ರಿಡ್ಗಳ ಸ್ಥಗಿತಕ್ಕೆ ಕಾರಣವಾಗಲಿದೆ. ಮೆಸ್ಕಾಂನಿಂದ ಇತ್ತೀಚಿನ ದಿನಗಳಲ್ಲಿ ಅನಿಯಮಿತವಾಗಿ ವಿದ್ಯುತ್ ನಿಲುಗಡೆಯಾಗುತ್ತಿದ್ದು ಈ ಬಗ್ಗೆ ಮೆಸ್ಕಾಂಗೆ ದೂರವಾಣಿ ಮಾಡಿದರೆ ಯಾವುದೇ ಪ್ರತಿಕ್ರಿಯೆ ಸಿಗದು. ಈ ಬಗ್ಗೆ ಸೋಮವಾರ ಬೆಳಿಗ್ಗೆ ನಂದಿಕೂರಿನಲ್ಲಿರುವ ವಿದ್ಯುತ್ ವಿತರಣಾ ಸಬ್ಸ್ಟೇಷನ ಮಾಹಿತಿಗಾಗಿ ಹೋಗಿದ್ದ ಸಂದರ್ಭ ವಿಚಿತ್ರ ಘಟನೆ ನಡೆಯುತ್ತಿತ್ತು.


ವಿದ್ಯುತ್ ವಿತರಣಾ ಜಾಲದ ಇನ್ಸುಲೇಟರ್ಗಳಿಗೆ ಪೈಪ್ ಮೂಲಕ ನೀರು ಸಿಂಪಡಿಸುತಿರುವುದನ್ನು ಕಂಡು ಕುತೂಹಲದಿಂದ ಒಳಹೊಕ್ಕು ವಿಚಾರಿಸಲು ಅಣಿಯಾಗುತಿದ್ದಂತೆಯೇ ಸುಮಾರು 15-20 ಅಡಿ ಎತ್ತರದ ಇನ್ಸುಲೇಟರ್ ಕಂಬದ ಮೇಲೆ ನಿಂತು ನೀರು ಸಿಂಪಡಿಸುತಿದ್ದ ಲೈನ್ಮೇನ್ ಏಕಾಏಕಿ ಕಿರುಚುತಾ ಪಟಪಟ ಒದ್ದಾಡಿ ನೇರ ಕೆಳಗೆ ಬಿದ್ದು ಬಿಟ್ಟ. ಲೈನ್ ಆಫ್ ಮಾಡಿ ಕರೆಂಟ್ ಶಾಕ್ ಹೊಡೆದಿದೆ ಎಂದು ಕೆಲವು ಕಾರ್ಮಿಕರು ಓಡಿದರು ಅದೃಷ್ಟ ವಶಾತ್ ಲೈನ್ಮೇನ್ (ನೆಲಕ್ಕೆ ಬಿದ್ದು ವಿಲವಿಲನೆ ಒದ್ದಾಡಿ ಕೆಲ ಹೊತ್ತಿನಲ್ಲಿ ಸಾವರಿಸಿಕೊಂಡು ಮೇಲದ್ದರು. ಬೀಳುವ ಸಂದರ್ಭ ತಲೆಯ ಹತ್ತಿರ ಕೆಲ ಇಂಚುಗಳ ದೂರದಲ್ಲಿ ಕಾಂಕ್ರಿಟ್ ದಂಡೆಇದ್ದು ಹತ್ತಿರದ ಜಲ್ಲಿ ನೆಲದ ಮೇಲೆ ಬಿದ್ದುದರಿಂದ ಪ್ರಾಣಾಪಾಯವಾಗಿಲ್ಲ. ಆದರೂ ಉಳಿದವರು ತಕ್ಷಣ ವಾಹನ ಒಂದರಲ್ಲಿ ಹಾಕಿ ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದು, ಚಿಕಿತ್ಸೆ ಪಡೆದಿದ್ದಾರೆ.

ಸಮಸ್ಯೆಯ ಮೂಲ

ಅಂತರ್ಜಲದ ಉಳಿಕೆಗಾಗಿ ಯುಪಿಸಿಎಲ್ ಸ್ಥಾವರ ಯೋಜನೆಯಲ್ಲಿ ಸಮುದ್ರದಿಂದ ಉಪ್ಪು ನೀರನ್ನು ಪಡೆದು ಅದನ್ನು ಸಿಹಿಯಾಗಿ ಪರಿವರ್ತಿಸಿ ಈ ನಿರನ್ನು ಬಾಯ್ಲರ್ಗೆ ಹಾಯಿಸಿ ಅದರ ಉಗಿಯಿಂದ ವಿದ್ಯುತ್ ಉತ್ಪಾದಿಸ ಬೇಕು.ಬಳಿಕ ಉಳಿದ ಉಪ್ಪು ನೀರನ್ನು ಸಮುದ್ರಕ್ಕೆ ಬಿಡಬೇಕು. ಆದರೆ ಇಲ್ಲಿನ ಕಳಪೆ ತಂತ್ರಜ್ಞಾನ ಮತ್ತು ಯೋಜನೆಯ ಪರಿಣಾಮ ಉಪ್ಪು ನೀರು ಶುದ್ದವಾಗದಿರುವುದರಿಂದ ಈನೀರನ್ನು ನೇರವಾಗಿ ಬಾಯ್ಲರ್ಗೆ ವರ್ಗಾ ಯಿಸಲಾಗುತ್ತಿದ್ದು ಇದರಿಂದ ಬರುವ ಆವಿಯಲ್ಲಿ ಉಪ್ಪು ಇರುವ ಪರಿಣಾಮ ಈ ಆವಿ ಟರ್ಬೈನ್ ನಿಂದ ನೇರವಾಗಿ ವಾತಾವರಣ ಸೇರುತ್ತಿರುವ ಪರಿಣಾಮ ಈ ಸಮಸ್ಯೆ ಉದ್ಭವಿಸಿದೆ.

ಸಮುದ್ರ ಕ್ಕೆ ವಾಪಾಸು ಹೋಗುವ ನೀರಿನ ಕೊಳವೆ ಕೆಟ್ಟಿರುವ ಪರಿಣಾಮ ಉಪ್ಪು ನೀರನ್ನು ಮಳೆ ನೀರು ತೋಡಿನ ಮೂಲಕ ಪರಿಸರದ ಗದ್ದೆ ಮತ್ತು ತೋಟಕ್ಕೆ ಹಾಯಿಸಲಾಗಿದೆ. ಯಾವತ್ತೂ ಅಂತರ್ಜಲದ ಕೊರತೆಯಾಗಬಾರದೆಂದು ನಿರ್ಮಿಸಿ ಈ ತಂತ್ರಜ್ಞಾನ ಕಳಪೆ ಕಾಮಗಾರಿಯಿಂದ ಅಂತರ್ಜಲ ಮೂಲಕ ತೊಡಕಾಗಿರುವುದು ವಿಪರ್ಯಾಸ.

ಕಳೆದ ಹಲವು ದಿನಗಳಿಂದ ಅನಿಯಮಿತ ವಿದ್ಯುತ್ ನಿಲುಗಡೆ ಬಗ್ಗೆ ಪರಿಶೀಲನೆ ನಡೆಸಿದಾಗ ಯುಪಿಸಿಎಲ್ ಬಾಯ್ಲರ್ಗೆ ಉಪಯೋಗಿಸುವ ಸಮುದ್ರದ ನೀರು ಬಿಸಿಯಾಗಿ ಉತ್ಪಾದನೆ ಆಗುವ "ಉಪ್ಪು ಮಿಶ್ರಿತ ಆವಿ" ಎಂದು ತಿಳಿದುಬಂದಿದೆ.
ವಾಸ್ತವವಾಗಿ ಯುಪಿಸಿಎಲ್ ಬಾಯ್ಲರ್ನಲ್ಲಿ ಸಿಹಿ ನೀರು ಉಪಯೋಗಿಸಬೇಕು. ಸಮುದ್ರದ ನೀರು ಬಳಸಿದರೂ ಅದನ್ನು ಸಿಹಿಯಾಗಿ ಮಾರ್ಪಡಿಸಿ ಉಪಯೋಗಿಸಬೇಕು. ಯುಪಿಸಿಎಲ್ಗೆ ನೀಡಿದ ಪರವಾನಿಗೆಯಲ್ಲಿ ಇದನ್ನು ಸ್ಪಷ್ಟವಾಗಿ ನಮೂದಿಸಲಾಗಿದೆ. ಆದರೆ ದಿನಕ್ಕೊಂದು ಸಮಸ್ಯೆ ಸೃಷ್ಟಿಸಿ ಜನಸಾಮಾನ್ಯರಿಗೆ ಕಿರುಕುಳ ನೀಡುತ್ತಲೇ ಬಂದಿರುವ ಯುಪಿಸಿಎಲ್ ಕಂಪೆನಿ ಇದಾವುದನ್ನೂ ಗಣನೆಗೆ ತೆಗೆದುಕೊಳ್ಳುವುದಿಲ್ಲ ಏಕೆಂದರೆ ರಾಜಕೀಯ ಪಕ್ಷಗಳು ಇವರ ಬೆನ್ನೆಲುಬಾಗಿದೆ. ಬಾಯ್ಲರ್ಗೆ ಬಳಸುವ ಸಮುದ್ರದ ನೀರು ಬಿಸಿಯಾದಾಗ ಅದರ ಉಪ್ಪಿನಂಶ ಆವಿಯಾಗಿ ಮೋಡದೊಂದಿಗೆ ಚಲಿಸಿ ಅವಿಭಜಿತ ದ.ಕ ಜಿಲ್ಲೆಯಾದ್ಯಂತ ಹರಡುತ್ತಿದೆ. ಇದು ಮುಖ್ಯವಾಗಿ ತಂತಿ ಮೂಲಕ ವಿದ್ಯುತ್ ವಿತರಿಸುತ್ತಿರುವ ಮೆಸ್ಕಾಂ ಮತ್ತು ಕೆಪಿಟಿಸಿಎಲ್ಗೆ ಮಾರಕವಾಗಿ ಪರಿಣಮಿಸಿದೆ.

ಉಪ್ಪು ವಿದ್ಯುತ್ ವಾಹಕವಾಗಿರುವುದರಿಂದ ಎಲ್ಲೆಡೆ ವಿದ್ಯುತ್ ತಂತಿಗಳಲ್ಲಿ ಈ ಉಪ್ಪಿನಂಶ ಹೊಂದಿರುವ ಮಂಜಿನ ಹನಿ ಚೆಲ್ಲಿ ಅವಘಡಗಳು ಸಂಭವಿಸುತ್ತಲೇ ಇದೆ. ರಾತ್ರಿ ವೇಳೆ ಬೀಳುವ ಮಂಜಿನ ಹನಿಗಳು ವಿದ್ಯುತ್ ತಂತಿಗೆ ಬಿದ್ದಾಗ ಮೊದಲೇ ಬಿದ್ದ ಉಪ್ಪಿನಂಶದಿಂದಾಗಿ ವಿದ್ಯುತ್ ಲೈನ್ ಟ್ರಿಪ್ ಆಗುತ್ತದೆ. ಅಥವಾ ಬೆಂಕಿ ಎದ್ದು ಬೃಹತ್ ಅನಾಹುತ ಸೃಷ್ಟಿಸುತ್ತಿದೆ. ನಂದಿಕೂರಿಗೆ - ಕೇಮಾರು ಫೀಡರ್ನಿಂದ 110/11 ಕೆ.ಪಿ ವಿದ್ಯುತ್ ವಿತರಣೆ ಆಗುತಿದೆ. ಯುಪಿಸಿಎಲ್ಗೆ ಅತೀ ಹತ್ತಿರದ ಸಬ್ಸ್ಟೇಷನ್ ಆದ ಕಾರಣ ನಂದಿಕೂರಿನಲ್ಲಿ ಸಮಸ್ಯೆ ತೀವ್ರವಾಗಿದೆ. ಇದೇ ಸಮಸ್ಯೆಯಿಂದ ವಿದ್ಯುತ್ ಸಂಪರ್ಕ ಇರಲಿಲ್ಲ. ಆಸುಪಾಸಿನ ಎಲ್ಲಾ ಲೈನ್ಮೇನ್ಗಳು ಸೇರಿ ನಂದಿಕೂರು ಸಬ್ಸ್ಟೇಷನ್ಗೆ ಬಂದು ಇನ್ಸುಲೇಟರ್ ಕಂಬ ಹತ್ತಿ ಪಂಪ್ ಮೂಲಕ ನೀರು ಚಿಮುಕಿಸುತ್ತಿರುವುದನ್ನು ಪತ್ರಕರ್ತರು ಪತ್ತೆ ಹಚ್ಚಿ ವಿಚಾರಿಸಿದಾಗ ಮಾಹಿತಿ ತಿಳಿದುಬಂದಿದೆ.

ನಂದಿಕೂರು ಸ್ಟೇಷನ್ನಲ್ಲಿ ಎಲ್ಲಾ ಕಂಬಗಳು ಸಲಕರಣೆಗಳು ಜಿ.ಐ (ಗ್ಯಾಲನೈಸ್ಡ್ ಐರನ್) ಆಗಿದ್ದರೂ ಉಪ್ಪಿನಂಶ ತೀವ್ರವಾಗಿರುವ ಹಿನ್ನಲೆಯಲ್ಲಿ ತುಕ್ಕು ಹಿಡಿಯಲು ಆರಂಭಿಸಿದೆ ಜಿಐ ಸಲಕರಣೆಗಳು ತುಕ್ಕು ಹಿಡಿಯುವುದಿಲ್ಲ ಎಂದು ಕಂಪೆನಿ ಹೇಳುತ್ತದೆ. ಪಡುಬಿದ್ರಿಯಲ್ಲಿ ಕೇಬಲ್ನಲ್ಲಿ ವಿದ್ಯುತ್ ಹರಿದು ಟೈಲರ್ ಸಾವು ಘಟನೆಗೂ ವಿದ್ಯುತ್ ಇನ್ಸುಲೇಟರ್ನಲ್ಲಿ ಬಿದ್ದ ಉಪ್ಪಿನಂಶವೇ ಕಾರಣ ಎಂದು ಇಲಾಖಾ ಮೂಲಗಳು ತಿಳಿಸಿವೆ.
ವಿದ್ಯುತ್ ಇನ್ಸುಲೇಟರ್ ಕಂಬ ಏರಿ ನೀರು ಚಿಮುಕಿಸುತಿದ್ದಾಗ ವಿದ್ಯುತ್ ಹರಿದು ಲೈನ್ಮೇನ್ ಕೆಳಗೆ ಬಿದ್ದ ಸಂದರ್ಭ ಮುಖ್ಯಲೈನ್ನಲ್ಲಿ ವಿದ್ಯುತ್ ಪ್ರಹರಿಸುತ್ತಿರಲಿಲ್ಲ. ಅದೇಗೋ ವಿದ್ಯುತ್ ಅವಘಡ ಸಂಭವಿಸಿದೆ.

ಹಾಗಿದ್ದಲ್ಲಿ ಮುಂದೆ ಇನ್ನಷ್ಟು ಅವಘಡಗಳು ಸಂಭವಿಸುವುದು ಖಚಿತ. ವಿದ್ಯುತ್ ಇಲಾಖೆಯ ನಿವೃತ್ತ್ತ ಅಧಿಕಾರಿಯೊಬ್ಬರ ಪ್ರಕಾರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದಿದ್ದಲ್ಲಿ ಮುಂದಿನ ಎರಡು ವರ್ಷಗಳಲ್ಲಿ ವಿದ್ಯುತ್ ಗ್ರಿಡ್ ಸಂಪರ್ಕ ಸಂಪೂರ್ಣ ನೆಲಕಚ್ಚಲಿದೆ.ಸ್ವಿಚ್ ನಡುವೆ ಉಪ್ಪು ಸೇರಿಕೊಂಡು ಬಂದ್ ಮಾಡಿದ್ದರೂ ವಿದ್ಯುತ್ ಪ್ರವಹಿಸಿ ಇನ್ನಷ್ಟುನ ಜೀವ ಬಲಿ ಪಡೆಯುವುದು ಖಚಿತ. ವಿದ್ಯುತ್ ಉಪಕರಣಗಳಲ್ಲಿ ತುಕ್ಕು ಹಿಡಿದು ಕಂಬಗಳು ಕುಸಿಯುವ ಭೀತಿ ಈ ನಿಟ್ಟಿನಲ್ಲಿ ಇಲಾಖೆಯು ಈ ಬಗ್ಗೆ ಈಗಾಗಲೇ ಮುನ್ನೆಚ್ಚರಿಕೆ ವಹಿಸಿದರೆ ಉತ್ತಮ ಎಂದಿದ್ದಾರೆ.

ಯುಪಿಸಿಎಲ್ನಿಂದ ಸಮಸ್ಯೆ ಗಂಭೀರ ರೂಪ ತಲೆದಿದ್ದರೂ ಜಿಲ್ಲಾಡಳಿತವಾಗಲೀ ಜನಪ್ರತಿನಿಧಿಗಳಾಗಲೀ ದಿವ್ಯ ಮೌನ ವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕೆಲವರಂತೂ ಜನಪರ ಕಾಳಜಿಯನ್ನು ಪತ್ರಿಕಾ ಹೇಳಿಕೆಗಷ್ಟೆ ಸೀಮಿತಗೊಳಿಸಿದ್ದಾರೆ. ಕಂಪೆನಿಗೆ ಪದೇ ಪದೇ ಎಚ್ಚರಿಕೆ ನೀಡಿರುವುದಾಗಿಯೂ ಪತ್ರಿಕೆ ಮೂಲಕ ತಿಳಿಸುತಾರೆ. ಆದರೆ ಕಂಪೆನಿಯ ಗಮನಕ್ಕೆ ಬಂದಿರಲಿಕ್ಕೆ ಸಾಧ್ಯವಿಲ್ಲ. ಏಕೆಂದರೆ ಸಮುದ್ರದಿಂದ ಧಾರಾಳ ಉಪ್ಪು ನೀರು ಸೆಳೆದು ಅದನ್ನು ಸಿಹಿಯಾಗಿ ಪರಿವರ್ತಿಸದೆ ನೇರ ಬಳಸಿ ತ್ಯಾಜ್ಯ ಉಪ್ಪು ನೀರನ್ನು ಸಮದ್ರಕ್ಕೆ ಬಿಡದೆ ಸ್ಥಾವರ ಪಕ್ಕದ ತೋಡಿಗೆ ಬಿಡುತಿದ್ದಾರೆ. ಇದರಿಂದ ಸುತ್ತಲಿನ ಕೃಷಿ ಭೂಮಿ ನಾಶಗೊಂಡು ಎಲ್ಲಾ ಕಡೆ ಕುಡಿಯುವ ನೀರಿನ ಬಾವಿ ಕಲುಷಿತಗೊಂಡಿದೆ. ಈ ನಿಟ್ಟಿನಲ್ಲಿ ಪರಿಸರದ ಕೃಷಿ ವ್ಯವಸ್ಥೆ ಕುಸಿದಿದೆ, ಕುಲುಶಿತ ಮಂಜಿನ ಹನಿ ಬಿದ್ದ ಹುಲ್ಲು ತಿಂದ ರಾಸುಗಳ ಆರೋಗ್ಯ ಕೆಟ್ಟಿದೆ, ಮಲ್ಲಿಗೆ ಪುಷ್ಪೋದ್ಯಮವೂ ಕುಸಿಯಲು ಯುಪಿಸಿಎಲ್ ಮುಖ್ಯ ಕಾರಣವಾಗಿದೆ ಇದಕ್ಕೆ ಪೂರಕವಾಗಿ ಆವಿಯಾದ ಲವಣಾಂಶವು ತೀವ್ರ ವಿದ್ಯುತ್ ಕ್ಷಾಮಕ್ಕೆ ಕಾರಣವಾಗಿ ಇಲ್ಲಿ ಸಾಮಾನ್ಯ ಜನಜೀವನ ಅಸಾಧ್ಯವೆನಿಸುವ ಪರಿಸ್ಥಿತಿ ನಿರ್ಮಾಣವಾಗಲಿದೆ.

0 comments:

Post a Comment