ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
2:05 PM

ನ್ಯಾಯ ಎಲ್ಲಿದೆ...?

Posted by ekanasu

ಸಾಹಿತ್ಯ

ಕತ್ತಲೆಯ ಹಾದಿಯಲ್ಲಿ
ಆಸೆ ಆಕಾಂಕ್ಷೆಗಳ ದೀಪ
ಎದುರಾಗುವ ಪ್ರತಿ ನೆರಳಲ್ಲೂ
ನ್ಯಾಯಕ್ಕಾಗಿ ಹುಡುಕಾಟ.

ಹೆಜ್ಜೆ ಹೆಜ್ಜೆಗೂ ಭ್ರಷ್ಟಾಚಾರ
ಉಸಿರುಗಟ್ಟಿದ ಸಮಾಜ...ಜಗದಲಿ ರೋಸಿಹೋದ
ಹತಾಶೆಗೀಡಾದ
ಅನಾಥ ಮನಸ್ಸುಗಳಲ್ಲಿ ಸಿಟ್ಟು
ನಾಳೆಯೋ, ನಾಳಿದ್ದೋ...
ಮುಕ್ತಿಯ ಕನಸು.

ಕ್ರಾಂತಿಯ ಕನಸು ಭ್ರಮೆ
ಪ್ರಕೃತಿಯೂ ಮೂಕ
ಏನಾಗುವುದೋ ಈ ಬನದ ಭವಿಷ್ಯ
ಪ್ರತಿಯೊಂದು ರಂಬೆಯ ಮೇಲೆ
ಕುಳಿತಿದೆ ವಿಷಸರ್ಪ.

- ಜಬೀವುಲ್ಲಾ ಖಾನ್

0 comments:

Post a Comment