ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
8:43 PM

ಅಸ್ಪೃಶ್ಯರು

Posted by ekanasu

ವೈದೇಹಿ ಕಾದಂಬರಿ...

ಕಳೆದ ಸಂಚಿಕೆಯಿಂದ...
ಬಾ ಎಂದು ಬಾಗಿಲು ತೆರೆದರು ಗೌರಮ್ಮ. `ಒಳಗೆ ಬಿಡಬೇಡ. ಬಂದು "ರತ್ನಕ್ಕ" ಎಂತ ಹಾಸಿ ಕುಳಿತರೂ ಕುಳಿತಿತೇ. ಮಡಿ ಮೈಲಿಗೆ ಹೋದ ದಾರಿಯಲ್ಲಿಲ್ಲ' - ಎಂದರು ಪಾರ್ತಕ್ಕ.
`ಅಲ್ಲಿಂದಲೇ ಇಣುಕು ಮಗ.'
ಶಾಮಿ ಬಾಗಿಲ ಚಡಿಯಿಂದಲೇ ಇಣುಕಿದಳು. ರತ್ನ ನೆಲದ ಮೇಲೆ ಹಾಸಿಗೆಯಲ್ಲಿ ಮಲಗಿದ್ದಳು. ಆಚೆ ಗೋಡೆಯಲ್ಲಿ ಚಾಪೆ ಹಾಸಿಕೊಂಡು ಮಲಗಲು ಸನ್ನೆ ನಡೆಸಿದ್ದರು ಪಾರ್ತಕ್ಕ. ಮಗು ಕಾಣಲಿಲ್ಲ. ಮತ್ತಷ್ಟು ಇಣುಕಿದಾಗ ಸುತ್ತ ಬಿಳಿಬಟ್ಟೆ ಸುತ್ತಿಕೊಂಡು ಮುಖಮಾತ್ರ ಕಾಣುವ ಮಗು. ಕೆಂಪು ಕೆಂಪು ಮುಖ. ಕೆಂಪು ತುಟಿ., ಮುಚ್ಚಿದ ಕಣ್ಣು, ಎಷ್ಟು ಚೆಂದದ ಮಗು!
ಗುಬ್ಬಚ್ಚಿ ಮರಿ, ಕೋಳಿ ಮರಿ, ಕೊಂಗಾಟ ಮರಿ...
`ಅಮ್ಮ ನಾನೆತ್ತಿಕೊಳ್ಳುತ್ತೇನೆ.'


`ಹ್ಞಂ ಹ್ಞಂ, ಈಗ ಮುಟ್ಟಬಾರದು . ಹೊಕ್ಕಳು ಚೊಟ್ಟು ಬೀಳಲಿ, ಆಮೇಲೆ.'
`ಹೊಕ್ಕಳು ಚೊಟ್ಟು ಎಂದರೆ?'
ಗೌರಮ್ಮ ಈಗ ಬೈಯಲಿಲ್ಲ. `ನಾಳೆ ಹೇಳುತ್ತೇನೆ. ಮಲಗು ಹೋಗು. ನಾ ಬಂದೆ ಈಗ' ಎಂದರು.
ಅಕ್ಕನ ಜಾಗದಲ್ಲಿ ನಾನು ಮಲಗಿದ್ದರೆ! ತನ್ನ ಹತ್ತಿರ ಗೆರಸಿಯಲ್ಲಿ ಮಗುವಿರುತ್ತಿತ್ತು.
ಪಾರ್ತಕ್ಕ ಮನೆ ಮುಟ್ಟಿರಬಹುದಾಗಿದ್ದ ಮಿಡ್ ಬಾಯ್ ಗೆ ಬೈಯುತ್ತ ಕಾಲು ನೀಡಿ ಕುಳಿತರು.
`ನಾನು ಎಷ್ಟು ತೇಲಿಕೊಂಡರೂ ನನ್ನನ್ನು ಮುಟ್ಟುವ ಹಾಗೇ ಇರುತ್ತಿದ್ದಳು. ಇರಪರ ಇಲ್ಲದವಳು.'
`ನಮ್ಮದೊಂದು ಆಚಾರ ಅಷ್ಟೆ . ಈಗ ನಾವಿರುವುದೇ ಮೈಲಿಗೆಯಲ್ಲಿ ಅಲ್ಲವೇ?'-ಎಂದು ಗೌರಮ್ಮ ಕೇಳಿದರೆ
`ಅದು ನಮ್ಮ ಮನೆಯ ಮೈಲಿಗೆ. ಮಿಡ್ ಬಾಯಿಯದು ನೂರು ಮನೆಯ ಮೈಲಿಗೆ. ಈಗಷ್ಟೇ ಶೇಷು ಪೂಜಾರಿಯ ಮಗಳನ್ನು ಹೆರಿಸಿ ಬಂದೆ ಎಂದಳು ಅವಳು. ಕೇಳಿದೆಯ? ಯಾರ ಯಾರ ಮನೆ ಮೈಲಿಗೆಯನ್ನೆಲ್ಲ ಮುಟ್ಟಿಕೊಳ್ಳಲು ನಮಗೇನು ಗರ್ಜು? ' - ಎಂದರು.

* * *
ನಾಲ್ಕು ದಿನಕ್ಕೇ ಅಮವಾಸ್ಯೆ ಬಂತು. ಅಮಾವಾಸ್ಯೆಯ ದಿನ ನರಪಟೆ ಬರುತ್ತಾಳೆ. `ಅಮಾಸಿ ಅಲ್ದ ವಡ್ತ್ರ'... ಎಂದು ನಗುನಗುತ್ತ ಬರುತ್ತಾಳೆ. ತಲೆ ತುಂಬ ಅವರಿವರು ಕೊಟ್ಟ ಎಣ್ಣೆ, ತಲೆಯೋ ಎಣ್ಣೆಯ ಕೊಡಪಾನವೋ ಎಂಬಂತೆ. ಹಣೆಗೊಂದು ಗುಲಾಬಿ ಬಣ್ಣದ ಕುಂಕುಮ ಇದ್ದರಾಯಿತು, ಇಲ್ಲದಿದ್ದರಾಯಿತು. ಕೈ ಮುಖದ ಮೇಲೆಲ್ಲಾ ಹಚ್ಚೆ. `ಹಚ್ಚೆ ಚುಚ್ಚಿಸಿಕೊಳ್ಳದೆ ಇದ್ದರೆ ಸತ್ತಮೇಲೆ ಯಮಧರ್ಮ ಹಾವಿನ ಬಾಲದ ತುದಿಯಿಂದ ಚುಚ್ಚುತ್ತಾನೆ...'

ಮುಂದುವರಿಯುವುದು....

- ವೈದೇಹಿ.

0 comments:

Post a Comment