ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ಅವಾರ್ಡ್

ಕೆ.ಪಿ. ಪೂರ್ಣಚಂದ್ರ ತೇಜಸ್ವಿ(೧೯೩೮ ಸೆಪ್ಟೆಂಬರ್ ೮ - ೨೦೦೭ ಏಪ್ರಿಲ್ ೫) - ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ನವ್ಯ ಸಾಹಿತ್ಯದ ಕಾಲಘಟ್ಟದಲ್ಲಿ ಪ್ರಮುಖವಾಗಿ ಕೇಳಿ ಬಂದ ಹೆಸರುಗಳಲ್ಲಿ ಪೂರ್ಣಚಂದ್ರ ತೇಜಸ್ವಿಯವರೂ ಒಬ್ಬರು. ತೇಜಸ್ವಿ ಆರಂಭದಲ್ಲಿ ಬೇರೊಂದು ಹೆಸರಲ್ಲಿ ಕಾವ್ಯ ರಚನೆ ಮಾಡಿದ್ದರೂ, ನಂತರ ಕಥಾ ಸಾಹಿತ್ಯ, ಕಾದಂಬರಿ, ಲೇಖನಗಳ ಕಡೆ ಹೆಚ್ಚಿನ ಗಮನ ಹರಿಸಿದರು. ಪರಿಸರವಾದಿ, ಸಾಹಿತಿ, ಕೃಷಿಕ, ಪಕ್ಷಿಪ್ರೇಮಿ, ಮುಖ್ಯವಾಗಿ ಕನ್ನಡ ಸಾಹಿತ್ಯ ಲೋಕದ ಜಾದೂಗಾರ ಎಂದು ಕರೆಸಿಕೊಳ್ಳುವ ಕೆ.ಪಿ ಪೂರ್ಣಚಂದ್ರ ತೇಜಸ್ವಿ ಬಹುಮುಖ ಪ್ರತಿಭೆಗಳ ಕಣಜ... ಮಲೆನಾಡಿನ ಸುಂದರ ಸುರಮ್ಯ ವಾತಾರಣದಲ್ಲಿ 1938 ಸೆಪ್ಟಂಬರ್ 8 ರಂದು ಜನಿಸಿದ ಪೂರ್ಣಚಂದ್ರ ತೇಜಸ್ವಿ, ಕುವೆಂಪು ಹಾಗೂ ಹೇಮಾವತಿ ದಂಪತಿಗಳ ಪುತ್ರ.ಹೆಸರಿಗೊಪ್ಪುವಂತೆಯೇ ನಿಜಾರ್ಥದಲ್ಲೂ "ಪೂರ್ಣಚಂದ್ರ"ನಂತೆಯೇ ಗೋಚರಿಸಿದವರು.


ಮಲೆನಾಡಿನಲ್ಲಿ ಹುಟ್ಟಿದವರಾದ್ದರಿಂದ ಕಾಡು, ಪರಿಸರರವನ್ನು ಹೆಚ್ಚು ಪ್ರೀತಿಸುತ್ತಿದ್ದರು. ಮೈಸೂರು ವಿವಿಯಿಂದ ಕನ್ನಡದಲ್ಲಿ ಎಂಎ ಪದವಿಯನ್ನು ಪಡೆದಿದ್ದಾರೆ. ಉಪನ್ಯಾಸಕರಾಗುವ ಎಲ್ಲಾ ಅರ್ಹತೆಗಳಿದ್ದರೂ, ಅದನ್ನು ತ್ಯಜಿಸಿ ಒಬ್ಬ ಸಾಮಾನ್ಯ ಕೃಷಿಕನಾಗಿ, ಕಾಫಿ ತೋಟದೊಂದಿಗೆ ಸರಳ ಜೀವನ ನಡೆಸಿದವರು. ತಂದೆಯವರ ಎಲ್ಲಾ ದೃಷ್ಠಿಕೋನಗಳು ಇವರಿಗೂ ಒಲೊದು ಬಂದಿದ್ದವು. ಅವರ ಮದುವೆ ಕೂಡಾ ಮೆಚ್ಚಿದ ಕಾಲೇಜು ಗೆಳತಿ ರಾಜೇಶ್ವರಿಯವರೋದಿಗೆ ಆಯಿತು.

ತೇಜಸ್ವಿಯವರು ಶ್ರೇಷ್ಠ ಬರಹಗಾರನಾಗಿ ಮಾತ್ರವಲ್ಲದೇ ಅತ್ಯತ್ತಮ ಛಾಯಾಗ್ರಾಹಕರಾಗಿದ್ದರು. ಹಕ್ಕಿಗಳ ಕುರಿತು ಅನೇಕ ಪೋಟೋ ಗಳನ್ನು ತೆಗೆದಿದ್ದಾರೆ. ಇವರ ಚಿತ್ರಗಳು ಜಗತ್ತಿನಾದ್ಯಂತ ಪ್ರಸಿದ್ದಿಯನ್ನು ಪಡೆದಿವೆ. ತೇಜಸ್ವಿಯವರ ಬರಹಗಳು ಎಲ್ಲರೂ ಓದುವಂತಹ ವಾಕ್ಯಗಳಲ್ಲಿಯೇ ಇರುತ್ತಿತ್ತು. ತಮ್ಮ ಸಮಸ್ತ ಬರಹಗಳಲ್ಲಿ ಸಾಮಾನ್ಯನನ್ನೇ ನಾಯಕನನ್ನಾಗಿ ಚಿತ್ರಿಸಿದ್ದಾರೆ. ಇವರದ್ದು ಯಾರಿಗೂ ನಿಲುಕದ ನೇರ ನುಡಿ, ಧೀರ ಮುನ್ನೋಟ.

ತೇಜಸ್ವಿಯವರ ಬರಹಗಳು

ಕಾದಂಬರಿ "ಕರ್ವಾಲೋ" 1980ರಲ್ಲಿ ಪ್ರಕಟವಾಯಿತು. ಹನ್ನೆರಡು ವರ್ಷಗಳಲ್ಲಿ ಹತ್ತು ಮುದ್ರಣ ಕಂಡು, ಆಂಗ್ಲ, ಮಲಯಾಳಂ, ಜಪಾನ್ ಭಾಷೆಗಳಿಗೆ ಭಾಷಾಂತರಗೊಂಡಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ವಿಶೇಷ ಬಹುಮಾನವನ್ನು ಪಡೆದುಕೊಂಡಿದೆ. 1994ರಲ್ಲಿ ಪ್ರಕಟವಾದ ಇವರ ಮತ್ತೊಂದು ಕೃತಿ "ಚಿದಂಬರ ರಹಸ್ಯ". ಈ ಕೃತಿಗೆ ಕೇಂದ್ರ ಮತ್ತು ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಅದೇ ವರ್ಷ "ಜುಗಾರಿ ಕ್ರಾಸ್" ಎಂಬ ಇನ್ನೊಂದು ಕಾದಂಬರಿ ಪ್ರಕಟವಾಗಿದೆ. "ಸ್ವರೂಪ" ಮತ್ತು "ನಿಗೂಢ ಮನುಷ್ಯರು" ಇವರ ಕಿರು ಕಾದಂಬರಿಗಳು.
1996ರಲ್ಲಿ ಇವರ ಆತ್ಮಚರಿತ್ರೆ "ಅಣ್ಣನ ನೆನಪುಗಳು" ಪ್ರಕಟವಾಗುತ್ತದೆ. ತಂದೆ ಕುವುಂಪು ಅವರನ್ನು ಕೇಂದ್ರವನ್ನಾಗಿರಿಸಿ ಬರೆದಿರುವಂತಹ ನೆನಪುಗಳ ಸಂಗ್ರಹ ಅದು. "ಹುಲುಯೂರಿನ ಸರಹದ್ದು" 1962 ರಲ್ಲಿ ಪ್ರಕಟವಾ ಮೊತ್ತಮೊದಲ ಕವನ ಸಂಕಲನ. "ಅಬಚೂರಿನ ಪೋಸ್ಟಾಫೀಸು" ಇವರಿಗೆ ರಾಜ್ಯ ಮನ್ನಣೆಯನ್ನು ತಂದುಕೊಟ್ಟಂತಹ ಕೃತಿ. 1973ರಲ್ಲಿ ಇದು ಚಲನಚಿತ್ರವಾಗಿ ರಾಷ್ಟ್ರ ಪ್ರಶಸ್ತಿ ಪಡೆದಿದೆ. 1991ರಲ್ಲಿ "ಕಿರಗೂರಿನ ಗಯ್ಯಾಳಿಗಳು" ಪ್ರಕಟವಾಗಿದೆ.


ಪರಿಸರದ ಕಥೆ, ಏರೋಪ್ಲೇನ್ ಚಿಟ್ಟೆಗಳು ಮತ್ತು ಇತರ ಕಥೆಗಳು, ಕಾಡಿನ ಕಥೆಗಳು 4 ಭಾಗ, ಕಿರಿಯರಿಗಾಗಿ ಪರಿಸರ ಎಂಬ ಪರಿಸರ ಹಾಗೂ ವೈಜ್ಞಾನಿಕ ಕಥಾಸಂಕಲನ ವಾಗಿದೆ. 1962ರಲ್ಲಿ ಸೋಮುವಿನ "ಸ್ವಗತ ಲಹರಿ"ಇವರ ಏಕೈಕ ಕವನ ಸಂಕಲನ. ಅಲೆಮಾರಿ ಅಂಡಮಾನ್ ಹಾಗೂ ಮಹಾನದಿ ನೈಲ್ ಇವರ ಪ್ರವಾಸಿಕಥನಗಳು. ಅವಲ್ಲದೇ ಇನ್ನೂ ಅನೇಕ ಕೃತಿಗಳನ್ನು ರಚಿಸಿದ್ದಾರೆ.
ಮಾಯಾಲೋಕ ತೇಜಸ್ವಿಯವರ ಕೊನೆಯ ಕೃತಿ. ಮೊದಲಭಾಗ ಪ್ರಕಟವಾಗಿ ಇನ್ನು ಹತತು ಭಾಗ ಸೃಷ್ಠಿಸಬೇಕೆಂಬ ಇವರ ಕನಸು ನುಚ್ಚು ನೂರಾಯಿತು. ತೀವ್ರ ಹೃದಯಾಘಾತದಿಂದ 2007 ಎಪ್ರಿಲ್ 5 ರಂದು ಕೊನೆಯುಸಿರೆಳೆದರು. ಮಾಯಾಲೋಕದ ಕನಸುಗಳೆಲ್ಲ ಮಾಯವಾಗಿ ಹೋದವು. ಎಷ್ಟೇ ಹುಡುಕಿದರೂ ಕನ್ನಡ ಸಾಹಿತ್ಯ ಲೋಕದಲ್ಲಿ ಮತ್ತೋಬ್ಬ ತೇಜಸ್ವಿ ಸಿಗುವುದಿಲ್ಲ. ಅವರು ಮಾಡಿದ ಜಾದೂ ಬೇರೆಯವರಿಂದ ಅಸಾಧ್ಯ. .ದರ್ಶನ್ ಎಂ, ಕಮ್ಮಾರಗಟ್ಟೆ,
ಪ್ರಥಮ ಪತ್ರಿಕೋದ್ಯಮ,ಆಳ್ವಾಸ್ ಕಾಲೇಜು,ಮೂಡುಬಿದಿರೆ.

0 comments:

Post a Comment