ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಪುಟ್ಟಪರ್ತಿ: ಬಾಬಾ ಇನ್ನಿಲ್ಲ...ಬಾಬಾ ಅವರು ಇಹಲೋಕ ತ್ಯಜಿಸಿದ್ದಾರೆ. ಈ ಮಾಹಿತಿ ಭಾನುವಾರ ಬೆಳಗ್ಗೆ ಕೇಳಿಬಂತು. ಇದರಿಂದಾಗಿ ಪವಾಡ ಪುರಷರ ಈ ಅವರತಾರ ಕೊನೆಗೊಂಡಂತಾಗಿದೆ. ಪವಾಡಪುರುಷ ಬಾಬಾ ಅವರು ಅಶಕ್ತರ ಪಾಲಿನ ಶಕ್ತಿಯಾಗಿದ್ದರು. ಸಮಾಜ ಸೇವೆ, ಶಿಕ್ಷಣ, ಆರೋಗ್ಯಕ್ಕೆ ಅಪೂರ್ವವಾದಂತಹ ಕೊಡುಗೆಯನ್ನು ನೀಡಿದ್ದರು. ಪವಾಡ ಪುರುಷ ಎಂಬುದಕ್ಕಿಂತಲೂ ಅತಿಯಾಗಿ ಅವರೊಬ್ಬ ಸಮಾಜಿಕ ಕಳಕಳಿ ಇರುವಂತಹ ಓರ್ವ ಮಹಾನ್ ಸಾಧಕ ಎಂದರೆ ತಪ್ಪಾಗಲಾರದು.
ಬಾಬಾ ಅವರು ಕಳೆದ ಕೆಲವು ದಿನಗಳಿಂದ ತೀವ್ರ ಅನಾರೋಗ್ಯದಲ್ಲಿ ಬಳಲುತ್ತಿದ್ದರು. ಇಂದು ಬೆಳಗ್ಗೆ 7.45ರ ಸುಮಾರಿಗೆ ತೀವ್ರ ಹೃದಯಾಘಾತದಿಂದ ಬಾಬಾ ನಿಧನರಾದರು ಎಂಬ ಅಂಶ ಇದೀಗ ಕೇಳಿಬಂದಿದೆ. ಬಾಬಾ ಮತ್ತೆ ಬಾ ಎಂಬ ಮಾತು ಪುಟ್ಟಪರ್ತಿಯಲ್ಲಿ ಕೇಳಿಬರುತ್ತಿದೆ.ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಹೊರಭಾಗ, ನಾಲ್ಕು ಜಿಲ್ಲೆಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಬಾಬಾ ಅವರ ಅಂತಿಮ ದರ್ಶನಕ್ಕೆ ಎರಡು ದಿನಗಳ ಕಾಲಾವಕಾಶ ಕಲ್ಪಿಸಲಾಗಿದೆ. ಬಾಬಾ ನಿಧನದ ಬಗ್ಗೆ ಆಸ್ಪತ್ರೆ, ಅಧಿಕಾರ ವರ್ಗ ಇಂದು ಅಧಿಕೃತ ಪ್ರಕಟಣೆ ಹೊರಡಿಸಿದೆ.

0 comments:

Post a Comment